»   » ರಿಯಲ್ ಸ್ಟಾರ್ ಉಪೇಂದ್ರ ಮೇಲೆ ಏನಿದು ದೊಡ್ಡ ಅಪವಾದ?

ರಿಯಲ್ ಸ್ಟಾರ್ ಉಪೇಂದ್ರ ಮೇಲೆ ಏನಿದು ದೊಡ್ಡ ಅಪವಾದ?

Posted By:
Subscribe to Filmibeat Kannada

ಪವಾಡ ರೀತಿಯಲ್ಲಿ ಪತ್ತೆಯಾಗಿದ್ದ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ್ ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲಿ ಕಳೆದ ಗುರುವಾರ ಬೆಳಗ್ಗೆ 11.45ಕ್ಕೆ ಇಹಲೋಕ ತ್ಯಜಿಸಿದರು.

ಹನುಮಂತಪ್ಪ ಅವರ ನಿಧನಕ್ಕೆ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಕಂಬನಿಗೆರೆಯಲಾಯ್ತು. ಎಲ್ಲರಂತೆ ಕನ್ನಡ ನಟ ರಿಯಲ್ ಸ್ಟಾರ್ ಉಪೇಂದ್ರ ಕೂಡ ತಮ್ಮ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಹನುಮಂತಪ್ಪ ಸಾವಿಗೆ ಸಂತಾಪ ಸೂಚಿಸಿದರು. [ವೀರ ಯೋಧ ಹನುಮಂತಪ್ಪರ ಆತ್ಮಕ್ಕೆ ಶಾಂತಿ ಕೋರಿದ ಚಿತ್ರರಂಗದ ತಾರೆಯರು]

ಐದು ಸಾಲಿನ ಕವಿತೆ ಮುಖಾಂತರ ಹನುಮಂತಪ್ಪ ಅವರಿಗೆ ಕಂಬನಿ ಮಿಡಿದ ಉಪೇಂದ್ರ ರವರ ಫೇಸ್ ಬುಕ್ ಸ್ಟೇಟಸ್ ಮತ್ತು ಟ್ವೀಟ್ ಈಗ ವಿವಾದಕ್ಕೆ ಗ್ರಾಸವಾಗಿದೆ.

'ರಿಯಲ್' ಸ್ಟಾರ್ ಉಪೇಂದ್ರ ಅಂತ ಪ್ರೀತಿಯಿಂದ ಕರೆಯುತ್ತಿದ್ದ ಮಂದಿ ಇದೀಗ 'ರೀಲ್' ಸ್ಟಾರ್ ಉಪೇಂದ್ರ ಎನ್ನುತ್ತಿದ್ದಾರೆ. ಉಪೇಂದ್ರ ಬಗ್ಗೆ ಏನಿದು ಹೊಸ ಅಪವಾದ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

ಉಪೇಂದ್ರ ಸ್ಟೇಟಸ್ ಮತ್ತು ಟ್ವೀಟ್ ಏನು?

ಹನುಮಂತಪ್ಪ ಸಾವಿನ ಸುದ್ದಿ ನಂತರ ಉಪೇಂದ್ರ ರವರ ಅಫೀಶಿಯಲ್ ಟ್ವಿಟ್ಟರ್ ಅಕೌಂಟ್ ಮತ್ತು ಫೇಸ್ ಬುಕ್ ಸ್ಟೇಟಸ್ ನಲ್ಲಿ ಪ್ರಕಟವಾದ ಕವಿತೆ ಇದು.

ಉಪೇಂದ್ರ ರವರನ್ನ ಹಾಡಿ ಹೊಗಳಿದ ಜನತೆ

ಉಪೇಂದ್ರ ರವರ ಸಾಲುಗಳನ್ನ ಕಂಡು ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಉಪೇಂದ್ರ ರವರನ್ನ ಹೊಗಳುವುದಕ್ಕೆ ಶುರು ಮಾಡಿದರು.

ವಿವಾದಕ್ಕೆ ಕಾರಣವೇನು?

ಅಸಲಿಗೆ ಉಪೇಂದ್ರ ಅಫೀಶಿಯಲ್ ಫೇಸ್ ಬುಕ್ ಮತ್ತು ಟ್ವಿಟ್ಟರ್ ಅಕೌಂಟ್ ನಲ್ಲಿ ಪ್ರಕಟವಾದ ಕವಿತೆ ಬರೆದದ್ದು ಶಿವಪ್ರಸಾದ್ ಆಳ್ವಾ ಎನ್ನುವವರು. ಮಧ್ಯಾಹ್ನ 1 ಗಂಟೆಗೆ ಶಿವಪ್ರಸಾದ್ ಆಳ್ವಾ 'ಉಸಿರು ಬಿಗಿ..' ಸಾಲುಗಳನ್ನ ಪೋಸ್ಟ್ ಮಾಡಿದ್ದಾರೆ.

ಉಪೇಂದ್ರ ಮೇಲೆ ಕವಿತೆ ಕದ್ದ ಆರೋಪ!

ಶಿವಪ್ರಸಾದ್ ಆಳ್ವಾ ಎನ್ನುವವರು ಬರೆದಿದ್ದ ಸಾಲುಗಳನ್ನ ಕದ್ದು ಉಪೇಂದ್ರ ತಮ್ಮ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ ಎನ್ನುವುದು ಶಿವಪ್ರಸಾದ್ ಆಳ್ವಾ ರವರ ಆರೋಪ.

ಫೇಸ್ ಬುಕ್ ನಲ್ಲಿ ನಡೆಯುತ್ತಿದೆ ದೊಡ್ಡ ಚರ್ಚೆ

ಶಿವಪ್ರಸಾದ್ ಆಳ್ವಾ ಮಾಡಿರುವ ಈ ಆರೋಪಕ್ಕೆ ಫೇಸ್ ಬುಕ್ ನಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಉಪೇಂದ್ರ ಪರ-ವಿರೋಧ ಸಮರ ನಡೆಯುತ್ತಿದೆ.

'ಕಾಪಿ ಪೇಸ್ಟ್ ವೀರ'

ಉಪೇಂದ್ರ ವಿರುದ್ಧ ಕೆಲವರು ಹಾಕಿರುವ ಕಾಮೆಂಟ್ಸ್ ಇದು.

'ಕಳ್ಳ' ಉಪೇಂದ್ರ

ಉಪೇಂದ್ರ ಬಗ್ಗೆ ಕೆಲವರು ಮನಬಂದಂತೆ ಕಾಮೆಂಟ್ಸ್ ಮಾಡಿದ್ದಾರೆ.

ಉಪೇಂದ್ರ ಪ್ರತಿಕ್ರಿಯೆ ನೀಡಲಿಲ್ಲವೇ?

ಶಿವಪ್ರಸಾದ್ ಆಳ್ವಾ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಪ್ರಕಾರ, ಉಪೇಂದ್ರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ಪ್ರಚಾರಕ್ಕಾಗಿ ಹೀಗೆ ಮಾಡಿಲ್ಲ!

'ಆತ್ಮ ಗೌರವದಿಂದ ಹೇಳುತ್ತಿದ್ದೇನೆ ಹೊರತು, ಪ್ರಚಾರಕ್ಕಾಗಿ ಹೀಗೆ ಮಾಡಿಲ್ಲ' ಅಂತ ಶಿವಪ್ರಸಾದ್ ಆಳ್ವಾ ಸ್ಪಷ್ಟ ಪಡಿಸಿದ್ದಾರೆ.

ನೋವಿನ ಮತ್ತೊಂದು ಕವನ!

ಫೇಸ್ ಬುಕ್ ನಲ್ಲಿ ತರಹೇವಾರಿ ಕಾಮೆಂಟ್ಸ್ ನೋಡಿದ ಬಳಿಕ ಶಿವಪ್ರಸಾದ್ ಆಳ್ವಾ ಹೊಸ ಕವನ ಬರೆದಿದ್ದಾರೆ. ನೀವೇ ಓದಿ...

ಇಷ್ಟೆಲ್ಲಾ ಆದರೂ ಉಪೇಂದ್ರ ಪ್ರತಿಕ್ರಿಯೆ ನೀಡಿಲ್ಲ!

ಸಾಮಾಜಿಕ ಜಾಲತಾಣಗಳಲ್ಲಿ ಇಷ್ಟೆಲ್ಲಾ ಚರ್ಚೆ ನಡೆಯುತ್ತಿದ್ದರೂ, ಉಪೇಂದ್ರ ಕಡೆಯಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಗೊತ್ತಿಲ್ಲದೇ ಆಗಿರುವ ಪ್ರಮಾದ ಇರಬಹುದು!

ಕನ್ನಡ ಚಿತ್ರರಂಗದ ಅನೇಕ ಸ್ಟಾರ್ ಗಳ ಫೇಸ್ ಬುಕ್ ಮತ್ತು ಟ್ವಿಟ್ಟರ್ ಅಕೌಂಟ್ ಹ್ಯಾಂಡಲ್ ಮಾಡುವುದು ಬಹುತೇಕ ಅವರ ಮ್ಯಾನೇಜರ್ ಗಳು. ಬಹುಶಃ, ಉಪೇಂದ್ರ ರವರಿಗೆ ಗೊತ್ತಿಲ್ಲದೇ, ಮ್ಯಾನೇಜರ್ ನಿಂದ ಈ ಪ್ರಮಾದ ಆಗಿರುವ ಸಾಧ್ಯತೆ ಇದೆ. ಯಾವುದಕ್ಕೂ ಉಪೇಂದ್ರ ಪ್ರತಿಕ್ರಿಯೆ ನೀಡಿದರೆ, ವಿವಾದಕ್ಕೆ ಶುಭಂ ಹಾಡಬಹುದೇನೋ.

English summary
Kannada Actor Upendra paid tribute to Lance Naik Hanumanthappa through a poem in Twitter and Facebook. Shivaprasad Alva has alleged that Upendra is said to have copied his poem.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada