For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ ಪಕ್ಷಕ್ಕೆ ಬಂದ ಒಟ್ಟು ಮತಗಳ ಸಂಖ್ಯೆ ಎಷ್ಟು?

  |

  ನಟ ಉಪೇಂದ್ರ ಮತ್ತು ತಂಡ ತಮ್ಮ ಮೊದಲ ಚುನಾವಣೆಯನ್ನು ಎದುರಿಸಿದೆ. ಈ ಲೋಕಸಭಾ ಚುನಾವಣೆ ಅವರ ಯುಪಿಪಿ ಪಕ್ಷಕ್ಕೆ (ಉತ್ತಮ ಪ್ರಜಾಕೀಯ ಪಕ್ಷ) ಮೊದಲ ಚುನಾವಣೆಯಾಗಿತ್ತು.

  ರಾಜಕೀಯ ಬಿಟ್ಟು ಪ್ರಜಾಕೀಯದ ದಾರಿಯಲ್ಲಿ ಹೊರಟ ಉಪೇಂದ್ರ ಪಕ್ಷ ಹೆಚ್ಚು ಸುದ್ದಿ ಮಾಡಲಿಲ್ಲ. ಚುನಾವಣೆ ಫಲಿತಾಂಶ ಹೊರಬಂದಿದ್ದು, ಯಾವುದೇ ಕ್ಷೇತ್ರದಲ್ಲಿ ಜಯ ಸಾಧಿಸಲು ಸಹ ಸಾಧ್ಯ ಆಗಿಲ್ಲ.

  ಚುನಾವಣಾ ಫಲಿತಾಂಶದ ಬಗ್ಗೆ ಉಪೇಂದ್ರ ಟ್ವೀಟ್

  ರಾಜ್ಯದ 28 ಜಿಲ್ಲೆಗಳಲ್ಲಿ ಯುಪಿಪಿ ಪಕ್ಷದ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಎಲ್ಲರು ಸೇರಿ ರಾಜ್ಯದ ಒಟ್ಟು 118455 ಮತಗಳನ್ನು ಪಡೆದಿದ್ದಾರೆ.

  ಬೆಂಗಳೂರು ಗ್ರಾಮೀಣ (9882) ಹಾಗೂ ಚಿಕ್ಕಮಗಳೂರು (9415) ಎರಡು ಕ್ಷೇತ್ರದಲ್ಲಿ ಹೆಚ್ಚು ಮತಗಳು ಬಂದಿದೆ. ಬೆಳಗಾವಿ (979) ಯಲ್ಲಿ ಅತಿ ಕಡಿಮೆ ಮತಗಳು ಸಿಕ್ಕಿದೆ.

  ಇದು ದೊಡ್ಡ ಸಾಧನೆ ಅಲ್ಲದಿದ್ದರೂ, ಯಾವುದೇ ಪ್ರಚಾರ, ಹಣ ಇಲ್ಲದೆ ಮೊದಲ ಹೆಜ್ಜೆಯಲ್ಲಿ ಇಷ್ಟು ಮತ ಪಡೆದಿರುವುದು ಉಪೇಂದ್ರ ಅಭಿಮಾನಿಗಳಿಗೆ ಖುಷಿ ನೀಡಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮತ್ತಷ್ಟು ಜನ ಪ್ರಜಾಕೀಯವನ್ನು ಒಪ್ಪಿಕೊಳ್ಳುತ್ತಾರೆ ಎನ್ನುವುದು ಉಪ್ಪಿ ನಂಬಿಕೆ.

  English summary
  Lok sabha elections results 2019 : Kannada actor, UPP party president Upendra party got 118455 all all over karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X