»   » ಉಪ್ಪಿ 2 ಹವಾಕ್ಕೆ ಬೆಚ್ಚಿದ ತೆಲುಗಿನ ಪ್ರಿನ್ಸ್ ಮಹೇಶ್

ಉಪ್ಪಿ 2 ಹವಾಕ್ಕೆ ಬೆಚ್ಚಿದ ತೆಲುಗಿನ ಪ್ರಿನ್ಸ್ ಮಹೇಶ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಇದೀಗ 'ಉಪ್ಪಿ 2' ಸುನಾಮಿ ಅಪ್ಪಳಿಸಲಿದೆ. ಇನ್ನೇನು ಕೇವಲ 9 ದಿನಗಳಲ್ಲಿ ತೆರೆ ಮೇಲೆ ಗ್ರ್ಯಾಂಡ್ ಒಪನಿಂಗ್ ಪಡೆದುಕೊಳ್ಳುತ್ತಿರುವ 'ಉಪ್ಪಿ 2' ಚಿತ್ರಕ್ಕೆ ಪ್ರೇಕ್ಷಕರು ಕಾದು ಕುಳಿತಿದ್ದಾರೆ. ಸದ್ಯಕ್ಕೆ ಆಗಸ್ಟ್ 14 ಬಂತು ಅಂದ್ರೆ ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಆದಂತಾಗಿದೆ.

ಸದ್ಯಕ್ಕೆ 'ಉಪ್ಪಿ 2' ಚಿತ್ರದಿಂದ ಖಾಸ್ ಖಬರ್ ಏನಪ್ಪಾ ಅಂದ್ರೆ ತೆಲುಗು ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಅವರ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಶ್ರೀಮಂತುಡು' ಕೂಡ ಆಗಸ್ಟ್ 14 ರಂದೇ ತೆರೆ ಕಾಣಲು ತಯಾರಾಗಿತ್ತು. [250 ಚಿತ್ರ ಮಂದಿರಗಳಲ್ಲಿ 'ಉಪ್ಪಿ 2' ಲಭ್ಯ]


Upendra's Uppi 2 Makes Mahesh Babu's Srimanthudu to change release date

ಆದರೆ ಮನಸ್ಸು ಬದಲಾಯಿಸಿದ 'ಶ್ರೀಮಂತುಡು' ಚಿತ್ರ ತಂಡ, ಸ್ಯಾಂಡಲ್ ವುಡ್ ಸ್ಟಾರ್ ಉಪೇಂದ್ರ ಅವರ 'ಉಪ್ಪಿಟ್ಟು'( ಉಪ್ಪಿ 2) ಚಿತ್ರ ಕೂಡ ತೆಲುಗು ವರ್ಷನ್ ನಲ್ಲೂ ತೆರೆ ಕಾಣುತ್ತಿರುವುದರಿಂದ, ಸುಖಾ ಸುಮ್ಮನೆ ಫೈಟ್ ಬೇಡಾಂತ ನಿರ್ಧರಿಸಿ, ಮಹೇಶ್ ಬಾಬು ಅವರ 'ಶ್ರೀಮಂತುಡು' ಚಿತ್ರದ ಬಿಡುಗಡೆ ಕಾರ್ಯಕ್ರಮವನ್ನು ಆಗಸ್ಟ್ 7 ರಂದು ಮಾಡಲು ನಿರ್ಧರಿಸಿದೆ.


ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲೂ ಸಾಕಷ್ಟು ಪ್ರಮಾಣದಲ್ಲಿ ಅಭಿಮಾನಿಗಳು ಇರುವುದರಿಂದ ಉಪ್ಪಿ ಬಿಂದಾಸ್ ಆಗಿ ಇದ್ದಾರೆ. ಸದ್ಯಕ್ಕೆ ಈ ನಡುವೆ ಉಪೇಂದ್ರ ನಿರ್ದೇಶಿಸಿ-ನಟಿಸುತ್ತಿರುವ 'ಉಪ್ಪಿ 2' ಚಿತ್ರಕ್ಕೂ, ಪ್ರಿನ್ಸ್, ಶ್ರುತಿ ಹಾಸನ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ 'ಶ್ರೀಮಂತುಡು' ಚಿತ್ರಕ್ಕೂ ಕ್ಲ್ಯಾಷ್ ಬೇಡಾಂತ ನಿರ್ದರಿಸಿದ್ದಾರೆ.[ರಿಯಲ್ ಸ್ಟಾರ್ 'ಉಪ್ಪಿ 2' ಗೆ ಟ್ರೈಲರೇ ಇಲ್ವಂತೆ!]


ಜೊತೆಗೆ ಕರ್ನಾಟಕದಲ್ಲಿ ಪ್ರಿನ್ಸ್ 'ಶ್ರೀಮಂತುಡು' ಚಿತ್ರಕ್ಕೆ ಥಿಯೇಟರ್ ಸಮಸ್ಯೆ ಆಗಬಹುದು ಎಂದು ನಿರ್ದೇಶಕ ಕೊರಟಾಲ ಶಿವ ಅವರು ಚಿತ್ರ ಬಿಡುಗಡೆ ಕಾರ್ಯಕ್ರಮವನ್ನು ಆದಷ್ಟು ಬೇಗನೇ ಮಾಡುತ್ತಿದ್ದಾರೆ.


ಇದೀಗ 'ಉಪ್ಪಿ 2' ಚಿತ್ರ ಸಾಮಾಜಿಕ ಜಾಲ ತಾಣಗಳಾದ ಟ್ವಿಟ್ಟರ್ ಫೇಸ್ ಬುಕ್ ಮುಂತಾದ ಕಡೆಯೆಲ್ಲಾ ಭಾರಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ.


ಅಂದ ಹಾಗೆ ಉಪೇಂದ್ರ ಅವರ 'ಉಪ್ಪಿ 2' ಚಿತ್ರದ ಫಸ್ಟ್ ಡೇ ಫಸ್ಟ್ ಶೋ ನೋಡಲು ಪ್ರೇಕ್ಷಕರು ನುಗ್ಗಿ ಬರುವುದನ್ನು ರಕ್ಷಿತ್ ಶೆಟ್ಟಿ ನೆನಪಿಸಿಕೊಂಡಿದ್ದು, ಹೀಗೆ 'ಸ್ವರ್ಗ ಒಂದು ಸೆಕೆಂಡ್ ರಪ್ ಅಂತ ಪಾಸ್ ಆದಾಗ್ ಆಯ್ತು', ಅಂತ ಚಿತ್ರದ ಬಗ್ಗೆ ಕೆಲವು ಕಮೆಂಟ್ ಗಳು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ.['ಉಪ್ಪಿ 2' ಚೆನ್ನಾಗಿದೆ ಅಂದ ಸೆನ್ಸಾರ್ ಮಂಡಳಿ]ಒಟ್ನಲ್ಲಿ ಸ್ಯಾಂಡಲ್ ವುಡ್ ನಲ್ಲಿ 'ರಂಗಿತರಂಗ' ಸದ್ದು ಮಾಡಿದಂತೆ ಬಿಗ್ ಸ್ಕ್ರೀನ್ ಜೊತೆಗೆ ಸ್ಮಾಲ್ ಸ್ಕ್ರೀನ್ ನಲ್ಲಿ ಒಟ್ಟು 500 ಸ್ಕ್ರೀನ್ ಗಳಲ್ಲಿ ತೆರೆ ಕಾಣುತ್ತಿರುವ ಉಪೇಂದ್ರ ಅವರ 'ಉಪ್ಪಿ 2' ಚಿತ್ರ ಕೂಡ ಸಖತ್ ಸೌಂಡ್ ಮಾಡೋದು ಗ್ಯಾರಂಟಿ ಅಂತ ಗಾಂಧಿನಗರದ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.


ಅದೇನೆ ಇರಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಬಹುನಿರೀಕ್ಷಿತ ಚಿತ್ರಕ್ಕೆ ಎಲ್ಲಾ ಚಿತ್ರಗಳು ಸಾಥ್ ನೀಡುತ್ತಿರುವುದು ಕಂಡರೆ ಇಡೀ ಚಿತ್ರರಂಗದಲ್ಲಿ ಇದೊಂಥರಾ ಒಳ್ಳೆ ಬೆಳವಣಿಗೆ ಆಗ್ತಾ ಇದೆ ಅಂತ ಹೇಳಬಹುದು.


English summary
Tollywood actor Prince Mahesh Babu's much anticipated movie 'Srimanthudu' has been advanced released by one week and to keep safe distance from Kannada movie 'Uppi 2' starring Upendra. Now makers decided not to clash the release date with 'Uppi 2'.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X