For Quick Alerts
  ALLOW NOTIFICATIONS  
  For Daily Alerts

  ನಮಗೇನೂ ಗೊತ್ತಿಲ್ಲ.. ನಾವೇನು ಮಾಡಲ್ಲ..ನೀವು ಹೇಳೋದು ಬಿಟ್ಟು!

  |

  ''ನಮಗೇನೂ ಗೊತ್ತಿಲ್ಲ... ನಾವೇನು ಮಾಡಲ್ಲ...ನೀವು ಹೇಳೋದು ಬಿಟ್ಟು!'' ಈ ಸಾಲು ಓದಿದಾಗ ಕೆಲವರಿಗೆ ಅರ್ಥ ಆಗಬಹುದು, ಇನ್ನು ಕೆಲವರಿಗೆ ಏನಿದು ಎಂಬ ಗೊಂದಲ ಬರಬಹುದು.

  ಇದು ರಿಯಲ್ ಸ್ಟಾರ್ ಉಪೇಂದ್ರ ಅವರ ಮಾತು. ಈ ಕ್ಯಾಪ್ಷನ್ ಇಟ್ಟುಕೊಂಡು ಉಪೇಂದ್ರ ಪಕ್ಷ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದೆಯಂತೆ. ಈ ಬಾರಿಯ ಲೋಕಸಭಾ ಚುನಾವಣೆಗೆ ಅವರ ಯು ಪಿ ಪಿ (ಉತ್ತಮ ಪ್ರಜಾಕೀಯ ಪಾರ್ಟಿ) 28 ಕ್ಷೇತ್ರಗಳಿಂದಲೂ ಸ್ಪರ್ಧೆ ಮಾಡುತ್ತಿದೆಯಂತೆ.

  ಲೋಕಸಭೆ ಚುನಾವಣೆಯಲ್ಲಿ 'UPP' ಸ್ಪರ್ಧಿಸಬೇಕಾ? ಉಪ್ಪಿ ಕೇಳಿದ ಪ್ರಶ್ನೆಗೆ ಜನರು ಏನಂದ್ರು?

  ಉಪ್ಪಿ ತಾವೇ ಚುನಾವಣಾ ಸ್ಪರ್ಧೆ ಮಾಡುತ್ತಾರೆಯೇ? ಎಂಬುದನ್ನು ಇನ್ನು ಬಹಿರಂಗವಾಗಿ ಹೇಳಿಲ್ಲ. ಆದರೆ, ಅವರ ಪಕ್ಷ ಎಲ್ಲ ಜಿಲ್ಲೆಗಳಿಂದ ಚುನಾವಣೆಗೆ ಸ್ಪರ್ಧೆ ಮಾಡಲು ತಯಾರಿ ನಡೆಸುತ್ತಿದೆಯಂತೆ. ಕರ್ನಾಟಕಕ್ಕೆ ಒಂದು ಪ್ರಾದೇಶಿಕ ಪಕ್ಷದ ಅಗತ್ಯ ಇದೆ. ಜನರ ಧ್ವನಿಯಾಗಿ ನಾನು ಮಾತನಾಡುತ್ತಿದ್ದೇನೆ ಅಂತ್ತಾರೆ ಉಪೇಂದ್ರ.

  ಎರಡು ರೀತಿಯ ಪ್ರಣಾಳಿಕೆ ಉಪ್ಪಿ ಪಕ್ಷದಲ್ಲಿ ಇರಲಿದೆಯಂತೆ. ಒಂದು ಜನರ ಬೇಡಿಕೆಗಳೆ ಪ್ರಣಾಳಿಕೆ ಆಗಲಿದ್ದು, ಇನ್ನೊಂದು ಅಭ್ಯರ್ಥಿಗಳು ಹೇಗೆ ಕೆಲಸ ಮಾಡುತ್ತಾರೆ ಎನ್ನುವುದು ಪ್ರಣಾಳಿಕೆ ಆಗಲಿದೆಯಂತೆ.

  ವಿಡಿಯೋ : ಉಪೇಂದ್ರ ಹುಟ್ಟುಹಬ್ಬಕ್ಕೆ ಉದಯವಾಯ್ತು UPP ಪಕ್ಷ

  ''ಯಾವುದೇ ದುಡ್ಡು, ಕಾಸು ಇಲ್ಲದೆ, ಕ್ಯಾಶ್ ಲೆಸ್ ಪಾರ್ಟಿ ಇದು. ಸತ್ಯ ವೈರಲ್ ಆಗುತ್ತದೆ ಎಂಬ ನಂಬಿಕೆ ನಮಗೆ ಇದೆ'' ಎಂದು ಲೋಕಸಭಾ ಅಕಾಡಕ್ಕೆ ಇಳಿದಿದ್ದಾರೆ ಉಪೇಂದ್ರ.

  English summary
  Kannada actor Upendra's new political party 'Uttama Prajakiya Party' will be participating in lok sabha election 2019.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X