»   » 'ಉಪ್ಪಿ ಫ್ಯಾಮಿಲಿ'ಯಿಂದ ಬರ್ತಿದೆ ಹೊಸ ಸಿನಿಮಾ.!

'ಉಪ್ಪಿ ಫ್ಯಾಮಿಲಿ'ಯಿಂದ ಬರ್ತಿದೆ ಹೊಸ ಸಿನಿಮಾ.!

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಸಾಕಷ್ಟು ವರ್ಷಗಳಿಂದ ಸಿನಿಮಾರಂಗದಲ್ಲಿ ತಮ್ಮದೇ ಸ್ಟೈಲ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದ ಹಾಗೂ ತಂತ್ರಜ್ಞ. ಸದ್ಯ ಚಿತ್ರರಂಗಕ್ಕೆ ಬಾಯ್ ಹೇಳಿ ಸಕ್ರಿಯ ರಾಜಕೀಯದಲ್ಲಿ ಉಳಿದುಕೊಳ್ಳಲು ಮುಂದಾಗಿರುವ ಉಪೇಂದ್ರ ತನ್ನ ರಿಯಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಇನ್ಮೇಲೆ ನಾನು ಸಿನಿಮಾರಂಗದಲ್ಲಿ ಇರೋದಿಲ್ಲ. ಇನ್ನೇನಿದ್ದರೂ ರಾಜಕೀಯದಲ್ಲಿ ಸೇವೆ ಸಲ್ಲಿಸುವುದೇ ನನ್ನ ಕಾಯಕ ಅಂತ ಹೇಳಿದ್ದ ಉಪ್ಪಿ, ತಮ್ಮ ಅಭಿಮಾನಿಗಳಿಗೆ ತಮ್ಮ ಕುಟುಂಬದಿಂದ ಒಂದು ಸಿನಿಮಾವನ್ನ ಗಿಫ್ಟ್ ಆಗಿ ನೀಡಲಿದ್ದಾರೆ.

'ಸೆಕೆಂಡ್ ಹಾಫ್' ಚಿತ್ರಕ್ಕೆ ಉಪ್ಪಿ ವಾಯ್ಸ್

ಪ್ರಿಯಾಂಕ ಉಪೇಂದ್ರ ಅಭಿನಯದ ಸೆಕೆಂಡ್ ಹಾಫ್ ಸಿನಿಮಾದ ಹಾಡಿಗೆ ರಿಯಲ್ ಸ್ಟಾರ್ ಉಪ್ಪಿ ಹಾಡಿದ್ದಾರೆ. ರಾಜಕೀಯದಲ್ಲಿ ಬ್ಯುಸಿ ಆಗಿರೋ ಉಪೇಂದ್ರ ಸಿನಿಮಾ ಬಿಟ್ಟರೂ ಸಿನಿಮಾ ಮಂದಿ ಮಾತ್ರ ಉಪ್ಪಿ ವಾಯ್ಸ್ ಬೇಕು ಅಂತಿದ್ದಾರೆ

ಯೋಗರಾಜ್ ಬರೆದ ಹಾಡಿಗೆ ಸಿಕ್ತು ರಿಯಲ್ ವಾಯ್ಸ್

ಯೋಗಿ ನಿರ್ದೇಶನದ ಸೆಕೆಂಡ್ ಹಾಫ್ ಚಿತ್ರದ ಹಾಡೊಂದನ್ನ ರಿಯಲ್ ಸ್ಟಾರ್ ಉಪ್ಪಿ ಹಾಡಿದ್ದಾರೆ. ಸಖತ್ ಎನರ್ಜಿಟಿಕ್ ಆಗಿರುವ ಲಿರಿಕ್ಸ್ ಈ ಹಾಡಿನಲ್ಲಿ ಇದ್ಯಂತೆ. 'ಮುಕುಂದ ಮುರಾರಿ' ಸಿನಿಮಾದ ನಂತ್ರ ಮತ್ತೆ ಯೋಗರಾಜ್ ಭಟ್ ಲಿರಿಕ್ಸ್ ಗೆ ಉಪ್ಪಿ ಧ್ವನಿಯಾಗಿದ್ದಾರೆ.

ಉಪ್ಪಿ ಹಾಡಿಗೆ ಮಗನ ಸ್ಟೆಪ್ಸ್

ಸೆಕೆಂಡ್ ಹಾಫ್ ಚಿತ್ರದಲ್ಲಿ ಉಪೇಂದ್ರ ಅವ್ರ ಸಹೋದರನ ಮಗ ನಿರಂಜನ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಉಪೇಂದ್ರ ಇತ್ತೀಚೆಗಷ್ಟೇ ಹಾಡಿರೋ ಈ ಹಾಡಿನಲ್ಲಿ ಸಹೋದರನ ಮಗ ನಿರಂಜನ್ ಹೆಜ್ಜೆ ಹಾಕ್ತಿರೋದು ಸ್ವೆಷಲ್ ವಿಚಾರ

ನೆನಪಿನಲ್ಲೇ ಉಳಿದುಕೊಳ್ಳುವ ಚಿತ್ರ

ಉಪ್ಪಿ ಹಾಗೂ ಪ್ರಿಯಾಂಕ ಅಭಿನಯದ 'H2O' ಚಿತ್ರದಲ್ಲಿ ಉಪ್ಪಿ ಹಾಡನ್ನ ಹಾಡಿದ್ರು. ಅದಾದ ನಂತ್ರ ಪ್ರಿಯಾಂಕ ಅಭಿನಯದ ಯಾವ ಸಿನಿಮಾದಲ್ಲೂ ಉಪ್ಪಿ ಹಾಡಿರಲಿಲ್ಲ. ಹದಿನೈದು ವರ್ಷದ ನಂತ್ರ ಉಪೇಂದ್ರ ಮತ್ತೆ ಪತ್ನಿ ಪ್ರಿಯಾಂಕ ಚಿತ್ರಕ್ಕೆ ಹಾಡಿದ್ದಾರೆ

ತೆರೆಗೆ ಬರೋದಕ್ಕೆ ಸಿದ್ದವಾಯ್ತು 'ಸೆಕೆಂಡ್ ಹಾಫ್

ಯೋಗಿ ನಿರ್ದೇಶನದ 'ಸೆಕೆಂಡ್ ಹಾಫ್' ಸಿನಿಮಾ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಆಗಿದೆ. ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿ ಉಳಿಸಿಕೊಂಡಿರುವ ಟೀಂ ವರ್ಷಾಂತ್ಯಕ್ಕೆ ಸಿನಿಮಾವನ್ನ ತೆರೆಗೆ ತರುವ ಪ್ರಯತ್ನದಲ್ಲಿದೆ.

English summary
Upendra sings for Kannada Movie Second Half.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada