»   » ಉಪ್ಪಿ 'ಶಿವಂ'ಗೆ 25 ಕಡೆ ಕೊಚ್ಚಿ ಹಾಕಿದ ಸೆನ್ಸಾರ್

ಉಪ್ಪಿ 'ಶಿವಂ'ಗೆ 25 ಕಡೆ ಕೊಚ್ಚಿ ಹಾಕಿದ ಸೆನ್ಸಾರ್

Posted By:
Subscribe to Filmibeat Kannada

ಸಿನಿಮಾ ಸೆಟ್ಟೇರುವುದಕ್ಕೂ ಮೊದಲಿನಿಂದಲೂ ಟೈಟಲ್ ವಿಚಾರಕ್ಕೆ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ ಸಿನಿಮಾ 'ಶಿವಂ'. 'ಬಸವಣ್ಣ' ಹೋಗಿ 'ವಿಭೂತಿ' ಚಿಹ್ನೆ, ನಂತ್ರ 'ಪಟ್ಟಿ' ಅಂತೆಲ್ಲಾ ಆಗಿ ಈಗ ಫೈನಲ್ಲಾಗಿ 'ಶಿವಂ' ಆಗಿರುವ ಈ ಚಿತ್ರ ಜನವರಿ 2, 2015 ಕ್ಕೆ ತೆರೆಗೆ ಬರ್ತಿದೆ.

ಅದಕ್ಕೂ ಮುನ್ನ ಸೆನ್ಸಾರ್ ಮಂಡಳಿಯ ಪರೀಕ್ಷೆಯಲ್ಲಿ ಪಾಸ್ ಆಗಿರುವ 'ಶಿವಂ' ಚಿತ್ರ 'U/A' ಸೆರ್ಟಿಫಿಕೇಟ್ ಪಡೆದುಕೊಂಡಿದೆ. ರಾಗಿಣಿಯಂಥ ಬಿಸಿ ಬಿಸಿ ತುಪ್ಪದ ದೋಸೆ, ರಿಯಲ್ ಸ್ಟಾರ್ ಉಪ್ಪಿಯ ರಿಯಲ್ ಆಕ್ಷನ್, ಗನ್ನು, ಬುಲ್ಲೆಟ್ ಸೌಂಡ್, ರಕ್ತ ತಿಲಕ...ಹೀಗೆ ಬಿಸಿರಕ್ತದ ಹುಡುಗರನ್ನ ಬಡಿದೆಬ್ಬಿಸುವ ಅನೇಕ ಅಂಶಗಳಿರುವ 'ಶಿವಂ'ಗೆ 'U/A' ಸೆರ್ಟಿಫಿಕೇಟ್ ಹೇಗೆ ತಾನೆ ಸಿಗುವುದಕ್ಕೆ ಸಾಧ್ಯ ಅಂದ್ರೆ? ಅದರ ಹಿಂದೆ, ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇದೆ. [ಬಸವಣ್ಣ ನಾಮಸ್ಮರಣೆ ಭರಿತ 'ಶಿವಂ' ಟ್ರೇಲರ್]

Shivam1

'ಶಿವಂ' ಚಿತ್ರವನ್ನು ಕಣ್ಣಾರೆ ಕಂಡ ಸೆನ್ಸಾರ್ ಮಂಡಳಿ ಮೊದಲು ನೀಡೋಕೆ ನಿರ್ಧರಿಸಿದ್ದು 'A' ಸರ್ಟಿಫಿಕೇಟ್ ಅನ್ನ. 'A' ಸರ್ಟಿಫಿಕೇಟ್ ಪಡೆದುಕೊಂಡರೆ, ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಕ್ಕೆ ಬರುವುದು ಕಷ್ಟ ಅನ್ನುವ ಕಾರಣಕ್ಕೆ, ಚಿತ್ರತಂಡ 'U/A' ಸರ್ಟಿಫಿಕೇಟ್ ಗಾಗಿ ಮನವಿ ಸಲ್ಲಿಸಿತು. [ಉಪೇಂದ್ರ ಮುಂದಿನ ಚಿತ್ರಕ್ಕೆ ಏನಂತ ಕರೆಯಬೇಕು..?]

ಇದಕ್ಕೆ ಒಪ್ಪಿಕೊಂಡ ಸೆನ್ಸಾರ್ ಮಂಡಳಿ, 'U/A' ಸರ್ಟಿಫಿಕೇಟ್ ಕೊಡುವುದಕ್ಕೆ ಸೂಚಿಸಿದ್ದ ಕಟ್ ಗಳೆಷ್ಟು ಗೊತ್ತಾ...ಬರೋಬ್ಬರಿ 25! 'ಶಿವಂ' ಚಿತ್ರದಲ್ಲಿರುವ ವಯಸ್ಕರಿಗೆ ಮಾತ್ರ ಸೀಮಿತವಾಗಿರುವ ಒಟ್ಟು '25 ಶಾಟ್ ಗಳನ್ನ ಕೊಚ್ಚಿ ಹಾಕಬೇಕು' ಅಂತ ಸೆನ್ಸಾರ್ ಮಂಡಳಿ ಚಿತ್ರತಂಡಕ್ಕೆ ಸೂಚಿಸಿತು. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

Shivam2

ಒಂದು ಸೆರ್ಟಿಫಿಕೇಟ್ ಗಾಗಿ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿತ್ರೀಕರಿಸಿರುವ ಆಕ್ಷನ್ ಸೀಕ್ವೆನ್ಸ್ ಗಳು ಮತ್ತು ರಾಗಿಣಿಯ ಹಲವು ರೂಪಾಂತರಗಳೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುವುದಲ್ಲಾ ಅಂತ ದಿನವಿಡೀ ಸೆನ್ಸಾರ್ ಸರ್ಟಿಫಿಕೇಟ್ ಬಗ್ಗೆ ತಲೆಕೆಡಿಸಿಕೊಂಡ ನಿರ್ದೇಶಕ ಶ್ರೀನಿವಾಸ್ ರಾಜು ಕೊನೆಗೂ, ಕತ್ರಿ ಕೆಲಸಕ್ಕೆ ಓಕೆ ಅಂದುಬಿಟ್ಟಿದ್ದಾರೆ. [ತುಂಡುಡುಗೆಯಲ್ಲಿ ನೀರಿಗಿಳಿದ ರಾಗಿಣಿ ದ್ವಿವೇದಿ]

'ಒಂದು ದಿನ ಪೂರ್ತಿ ಯೋಚನೆ ಮಾಡಿ, ಈ ನಿರ್ಧಾರ ಮಾಡಿದ್ವಿ. ನಮಗೆ ಆಡಿಯನ್ಸ್ ಮುಖ್ಯ. ಹೀಗಾಗಿ 'U/A' ಸರ್ಟಿಫಿಕೇಟ್ ಗಾಗಿ 25 ಕಟ್ ಗಳನ್ನು ಒಪ್ಪಿಕೊಂಡಿದ್ದೀವಿ. ಇಡೀ ಕುಟುಂಬ ಕೂತು ಥ್ರಿಲ್ಲಾಗಿ ಸಿನಿಮಾ ನೋಡಬಹುದು. ಹೊಸ ವರ್ಷಕ್ಕೆ (ಜನವರಿ 2)ಕ್ಕೆ ಸಿನಿಮಾ ರಿಲೀಸ್ ಆಗುತ್ತದೆ'' ಅಂತ ನಿರ್ದೇಶಕ ಶ್ರೀನಿವಾಸ್ ರಾಜು 'ಫಿಲ್ಮಿಬೀಟ್ ಕನ್ನಡ'ಗೆ ತಿಳಿಸಿದ್ದಾರೆ.

Shivam3

ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಮತ್ತು ಹಾಡುಗಳಿಂದ ಥ್ರಿಲ್ ಆಗಿರುವ ಅಭಿಮಾನಿಗಳು 'ಶಿವಂ' ದರ್ಶನ ಪಡೆಯುವುದಕ್ಕೆ ತುದಿಗಾಲಲ್ಲಿದ್ದಾರೆ. ಅಷ್ಟರಲ್ಲೇ, 'ಟ್ರೇಲರ್ ನಲ್ಲಿ ಪ್ಲೇಟ್ ಮೀಲ್ಸ್ ಸವಿದು, ಸಿನಿಮಾದಲ್ಲಿ ಫುಲ್ ಮೀಲ್ಸ್ ಸವಿಯೋಣ' ಅಂತ ಕಾಯ್ತಿದ್ದವರಿಗೆ 25 ಕಟ್ಸ್ ಸಿಕ್ಕಿರುವ ವಿಷಯ ಹಾಗಲಕಾಯಿ ತಿಂದ್ಹಂಗಾಗಿರುವುದಂತೂ ದಿಟ. (ಫಿಲ್ಮಿಬೀಟ್ ಕನ್ನಡ)

English summary
Real star Upendra's upcoming movie Shivam has cleared Censor procedure by receiving U/A certificate with 25 cuts. Director Srinivas Raju agreed for 25 cuts in the movie to suit the Family Audience.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada