For Quick Alerts
  ALLOW NOTIFICATIONS  
  For Daily Alerts

  ದೆಹಲಿ ಚುನಾವಣೆ ಫಲಿತಾಂಶದ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ

  |

  Recommended Video

  ಮತ್ತೆ ಸುದ್ದಿಯಾದ ಉಪೇಂದ್ರ ಟ್ವೀಟ್ | Upendra | Tweet | AAP | KJP | Delhi | Karnataka

  ಇಂದು ದೆಹಲಿಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಫಲಿತಾಂಶದ ಬಗ್ಗೆ ರಾಜಕೀಯ ಗಣ್ಯರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದೀಗ ನಟ ಹಾಗೂ ಯುಪಿಪಿ (ಉತ್ತರ ಪ್ರಜಾಕೀಯ ಪಕ್ಷ) ಸಂಸ್ಥಾಪಕ ಉಪೇಂದ್ರ ಟ್ವೀಟ್ ಮಾಡಿದ್ದಾರೆ.

  ''ಇಂದಿನ ದೆಹಲಿ ಚುನಾವಣಾ ಫಲಿತಾಂಶ ಇಡೀ ದೇಶದ ರಾಜಕೀಯ ಲೆಕ್ಕಾಚಾರ ತಲೆಕೆಳಗೆ ಮಾಡಿದೆ. ಜನರಿಗೆ ಉತ್ತಮ ಸರ್ಕಾರಿ ಶಾಲೆ, ಕಾಲೇಜು, ಆಸ್ಪತ್ರೆ, ವಿಧ್ಯುತ್, ರಸ್ತೆ ,ನೀರು, ಸುರಕ್ಷತೆ ಇಂತಹ ಅಗತ್ಯ ಸೌಲಭ್ಯ ಕೊಡುವ ಪ್ರಾದೇಶಿಕ ಪಕ್ಷಗಳು ಬೇಕು, ಏನಂತೀರಾ ?'' ಎಂದು ಉಪೇಂದ್ರ ಬರೆದಿದ್ದಾರೆ.

  ದೆಹಲಿ ಫಲಿತಾಂಶ; 'ಚಾಣಕ್ಯ' ಬಲದ ಬಗ್ಗೆ ಎಚ್‌ಡಿಕೆ ಟ್ವೀಟ್

  ಕರ್ನಾಟಕದಲ್ಲಿಯೂ ಪ್ರಾದೇಶಿಕ ಪಕ್ಷ ಕಟ್ಟಿರುವ ಉಪೇಂದ್ರ, ಮತ್ತೊಂದು ಪ್ರಾದೇಶಿಕ ಪಕ್ಷದ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಜನರಿಗೆ ಉತ್ತಮ ಸೌಲಭ್ಯ ನೀಡುವ ಪ್ರಾದೇಶಿಕ ಪಕ್ಷಗಳು ಬೇಕು ಎಂದು ಉಪೇಂದ್ರ ಹೇಳಿದ್ದಾರೆ.

  ಅಂದಹಾಗೆ, ದೆಹಲಿಯ 70 ದೆಹಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ 60ಕ್ಕೂ ಅಧಿಕ ಸ್ಥಾನಗಳಲ್ಲಿ ವಿಜಯ ಸಾಧಿಸಿದೆ. ರಾಜಧಾನಿಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಪ್ರಾದೇಶಿಕ ಪಕ್ಷ ಗದ್ದುಗೆ ಏರಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಅಧಿಕಾರ ಹಿಡಿಯುವಲಿ ವಿಫಲವಾಗಿದೆ.

  English summary
  Kannada actor UPP president Upendra tweets about delhi election result.
  Tuesday, February 11, 2020, 18:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X