For Quick Alerts
  ALLOW NOTIFICATIONS  
  For Daily Alerts

  ಚುನಾವಣಾ ಫಲಿತಾಂಶದ ಬಗ್ಗೆ ಉಪೇಂದ್ರ ಟ್ವೀಟ್

  |

  2019 ಲೋಕಸಭಾ ಚುನಾವಣಾ ಮಹಾಸಮರದ ಫಲಿತಾಂಶ ಬಂದಿದೆ. ಚುನಾವಣಾ ಫಲಿತಾಂಶದ ಬಗ್ಗೆ ನಟ ಉಪೇಂದ್ರ ಟ್ವೀಟ್ ಮಾಡಿದ್ದಾರೆ.

  ಅಂಬಿ ಹುಟ್ಟುಹಬ್ಬಕ್ಕೆ ಸುಮಲತಾ ನೀಡಿದ ಒಲವಿನ ಉಡುಗೊರೆ

  ಯು ಪಿ ಪಿ ಪಕ್ಷದ ಅಧ್ಯಕ್ಷರಾಗಿರುವ ಉಪೇಂದ್ರ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ಇದು ಅವರ ಪಕ್ಷದ ಮೊದಲ ಚುನಾವಣೆಯಾಗಿತ್ತು. ಆದರೆ, ಯಾವ ಕ್ಷೇತ್ರದಿಂದ ಕೂಡ ಅವರ ಯಾವ ಅಭ್ಯರ್ಥಿಗಳು ವಿಜೇತರಾಗಲು ಸಾಧ್ಯ ಆಗಿಲ್ಲ.

  ಇನ್ನು ಚುನಾವಣೆ ಬಗ್ಗೆ ಟ್ವೀಟ್ ಮಾಡಿರುವ ಉಪೇಂದ್ರ ''ತಾವೇ ನಾಯಕರಾಗಲು ಬಯಸಿ ಉತ್ತಮ ಪ್ರಜಾಕೀಯ ಪಕ್ಷದ ಕಾರ್ಮಿಕರಿಗೆ ಮತ ಚಲಾಯಿಸಿದ, ಬೆಂಬಲಿಸಿದ, ಭಾಗವಹಿಸಿದ ಪ್ರತಿಯೊಬ್ಬರಿಗೂ ವಂದನೆಗಳು. ಸಂಪೂರ್ಣ ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ನೀಡಿದ ಒಂದೊಂದು ಮತವೂ ಬಹಳ ಅಮೂಲ್ಯವಾದದ್ದು. ಪ್ರಜಾಕೀಯದ ವಿಚಾರಗಳು, ಪ್ರಯತ್ನ ಹೀಗೇ ಸಾಗುತ್ತಿರಲಿ. ಸಂಪೂರ್ಣ ಪ್ರಜಾಪ್ರಭುತ್ವ ನಮ್ಮೆಲ್ಲರ‌ ಹಕ್ಕು.'' ಎಂದು ಬರೆದುಕೊಂಡಿದ್ದಾರೆ.

  ಯಾವುದೇ ಕ್ಷೇತ್ರದಿಂದ ಗೆಲ್ಲದಿದ್ದರೂ ಸಹ ತಮಗೆ ನೀಡಿದ ಪ್ರತಿ ಮತವೂ ಕೂಡ ಅಮೂಲ್ಯವಾದದ್ದು, ಎಂದು ತಮ್ಮ ಪಕ್ಷಕ್ಕೆ ಮತ ಹಾಕಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.

  ತಮ್ಮ ಮತ್ತೊಂದು ಟ್ವೀಟ್ ಮೂಲಕ ''ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಪ್ರತಿಯೂಬ್ಬ ಪ್ರಜಾ ಪ್ರತಿನಿಧಿಗಳಿಗೆ ಹಾಗೂ ಸ್ಪಷ್ಟ ಆದೇಶ ನೀಡಿದ ಪ್ರಜಾಪ್ರಭುಗಳಿಗೆ ಶುಭಾಷಯಗಳು'' ಎಂದು ವಿಶ್ ಮಾಡಿದ್ದಾರೆ.

  ಅಂದಹಾಗೆ, ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ 349 ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹಾರಿಸಿದೆ.

  English summary
  Lok sabha elections results 2019 : Kannada actor, UPP party president : upendra tweets about lok sabha election result.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X