»   » ಸ್ವಿಜರ್ ಲ್ಯಾಂಡ್ ನಲ್ಲಿ ಓಡಾಡಿದ ಉಪೇಂದ್ರ 'ಟೋಪಿ'

ಸ್ವಿಜರ್ ಲ್ಯಾಂಡ್ ನಲ್ಲಿ ಓಡಾಡಿದ ಉಪೇಂದ್ರ 'ಟೋಪಿ'

Posted By:
Subscribe to Filmibeat Kannada

ಕನ್ನಡ ಸೂಪರ್ ಸ್ಟಾರ್ ಉಪೇಂದ್ರ ನಟನೆಯ 'ಟೋಪಿವಾಲಾ' ಚಿತ್ರದ ಚಿತ್ರೀಕರಣ ಸ್ವಿಜರ್ ಲ್ಯಾಂಡ್ ನಲ್ಲಿ ನಡೆದಿದೆ. ಇತ್ತೀಚಿಗಷ್ಟೇ ಕನ್ನಡದ ಮತ್ತೊಬ್ಬ ಸ್ಟಾರ್ ದರ್ಶನ್ ನಾಯಕತ್ವದ 'ಬುಲ್ ಬುಲ್' ಚಿತ್ರೀಕರಣವನ್ನು ಸ್ವಿಜರ್ ಲ್ಯಾಂಡ್ ನಲ್ಲಿ ಮುಗಿಸಿಕೊಂಡು ಬಂದಿರುವ ಹಿನ್ನಲೆಯಲ್ಲಿ ಈ ವಿಷಯ ಗಮನಸೆಳೆದಿದೆ. ಕನ್ನಡದ ಹೆಚ್ಚು ಹೆಚ್ಚು ಸಿನಿಮಾಗಳು ಸ್ವಿಜರ್ ಲ್ಯಾಂಡ್ ಕಡೆ ಶೂಟಿಂಗ್ ಗಾಗಿ ತೆರಳುತ್ತಿವೆ.

ಶ್ರೀನಿ ನಿರ್ದೇಶನದ 'ಟೋಪಿವಾಲಾ' ಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ಸ್ವಿಜರ್ ಲ್ಯಾಂಡ್ ಗೆ ತೆರಳಿದ್ದ ನಾಯಕ ಉಪೇಂದ್ರ ಹಾಗೂ ನಾಯಕಿ ಭಾವನಾ ಇರುವ ಚಿತ್ರತಂಡ ಅಲ್ಲಿ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿತ್ತು. ಪ್ರದೀಪ್ ಅಂತೋನಿ ನೃತ್ಯ ನಿರ್ದೇಶನದಲ್ಲಿ ಹಾಡಿಗೆ ಹೆಜ್ಜೆಹಾಕಿರುವ ಉಪ್ಪಿ-ಭಾವನಾ ಜೋಡಿ, ಅಲ್ಲಿಂದ ಸ್ವದೇಶಕ್ಕೆ ವಾಪಸ್ಸಾಗಿದೆ. ಅಲ್ಲಿ ಕೆಲವು ಟಾಕೀ ಪೋರ್ಶನ್ ಗಳನ್ನೂ ಕೂಡ ಚಿತ್ರೀಕರಿಸಲಾಗಿದೆ.

ಆರ್ ಎಸ್ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಶ್ರೀನಿ ನಿರ್ದೇಶನದ 'ಟೋಪಿವಾಲಾ' ಚಿತ್ರದ ಕಥೆ ಹಾಗೂ ಚಿತ್ರಕಥೆ ಉಪೇಂದ್ರ ಅವರದು. ಸಂಭಾಷಣೆ ಜವಾಬ್ದಾರಿ ಹೊತ್ತು ಚಿತ್ರವನ್ನು ನಿರ್ದೇಶನ ಮಾಡುತ್ತಿರುವವರು ಶ್ರೀನಿ. ನಿರ್ದೇಶಕ ಶ್ರೀನಿ ಪ್ರಕಾರ ಈ ಚಿತ್ರ ತೀರಾ ಉತ್ತಮವಾಗಿ ಮೂಡಿಬಂದಿದ್ದು, ಉಪೇಂದ್ರರ ಈಗಾಗಲೇ ಬಂದಿರುವ ಚಿತ್ರಗಳಿಗಿಂತ ಇದು ವಿಭಿನ್ನವಾಗಿದೆ. ಈ ಮಾತಿಗೆ ಸ್ವತಃ ಉಪ್ಪಿ ಕೂಡ ಧ್ವನಿಗೂಡಿಸಿದ್ದಾರೆ.

ಈಗಾಗಲೇ ಹೆಚ್ಚುಕಡಿಮೆ ಚಿತ್ರೀಕರಣವನ್ನು ಮುಗಿಸಿರುವ ಚಿತ್ರತಂಡ, ಈ ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರಲು ಭಾರಿ ಸಿದ್ಧತೆ ನಡೆಸುತ್ತಿದೆ. ಈ ಚಿತ್ರದ ಹೋಮ್ ಬ್ಯಾನರ್ ನಲ್ಲಿ ನಂತರ ಪ್ರಿಯಾಂಕಾ ನಿರ್ಮಾಣದ ಉಪೇಂದ್ರ ನಿರ್ದೇಶನ ಹಾಗೂ ನಟನೆಯ ಚಿತ್ರವು ಪ್ರಾರಂಭವಾಗಲಿದೆ. ಅದು 'ಉಪೇಂದ್ರ-2' ಎನ್ನಲಾಗುತ್ತಿದ್ದು ಪಕ್ಕಾ ಮಾಹಿತಿಯನ್ನು ಎಂದಿನಂತೆ 'ಸೀಕ್ರೆಟ್' ಆಗಿರಿಸಿದ್ದಾರೆ ಉಪೇಂದ್ರ. ಒಟ್ಟಿನಲ್ಲಿ 'ಟೋಪಿವಾಲಾ' ಆದಷ್ಟು ಬೇಗ ತೆರೆಗೆ ಬರಲು ಸಿದ್ಧವಾಗುತ್ತಿದೆ. (ಒನ್ ಇಂಡಿಯಾ ಕನ್ನಡ)

English summary
Shreeni direction for Upendra movie 'Topiwala' shooting was in Switzerland for its Song and Some talkie portions. Upendra and Bhavana took part in the song in the steps directed by Pradip Antony. Srini is the director and dialogue writer for ‘Topiwala’ that has story and screenplay from Upendra. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada