'ಶಿವಂ' ಚಿತ್ರದ ಬಗ್ಗೆ ಶ್ರೀನಿವಾಸ ರಾಜು ಹೇಳುವುದೇನು?
ರಿಯಲ್ ಸ್ಟಾರ್ ಉಪೇಂದ್ರ ಅವರ 'ಶಿವಂ' ಚಿತ್ರ ಈ ವರ್ಷದಲ್ಲಿ ಸಾಕಷ್ಟು ವಿವಾದ, ಕುತೂಹಲಕ್ಕೆ ಕಾರಣವಾದ ಸಿನಿಮಾ. ಇದೇ ಜನವರಿ 2ಕ್ಕೆ ಚಿತ್ರ ತೆರೆಕಾಣುತ್ತಿದೆ. 2015ರಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರಗಳಲ್ಲಿ 'ಶಿವಂ' ಸಹ ಒಂದು ಎಂಬುದು ವಿಶೇಷ.
ಈ ಚಿತ್ರದ ಬಗ್ಗೆ ನಿರ್ದೇಶಕ ಶ್ರೀನಿವಾಸ ರಾಜು ಅವರು ಹೇಳುವುದೇನೆಂದರೆ, "ಈ ಕಥೆ, ಪಾತ್ರಕ್ಕೆ ಉಪೇಂದ್ರ ಅವರೇ ಹೊಂದುತ್ತಾರೆ. ಅದಕ್ಕೆ ತಕ್ಕಂತೆ ಉಪ್ಪಿ ಸಹ ಅಭಿನಯಿಸಿದ್ದಾರೆ. ಈ ಹಿಂದೆ ನೋಡಿರದಂತಹ ಉಪೇಂದ್ರ ಅವರನ್ನು ನೀವು ನೋಡುತ್ತೀರಿ..." [ಉಪ್ಪಿ 'ಶಿವಂ'ಗೆ 25 ಕಡೆ ಕೊಚ್ಚಿ ಹಾಕಿದ ಸೆನ್ಸಾರ್]

"ಅವರ ಬಾಡಿ ಲಾಂಗ್ವೇಜ್ ನಿಂದ ಹಿಡಿದು ಸಂಭಾಷಣೆಯ ಶೈಲಿ ಕೂಡಾ ಬೇರೆ ರೀತಿ ಇದೆ. ಈ ಹಿಂದಿನ ಉಪೇಂದ್ರ ಅವರ ಸಿನಿಮಾಗಳಿಗೆ ಹೋಲಿಕೆ ಮಾಡುವ ಒಂದು ಸಹಜ ಅಂಶವೆಂದರೆ ಸಂದೇಶ. ಉಪೇಂದ್ರ ಅವರ ಎಲ್ಲಾ ಸಿನಿಮಾಗಳಲ್ಲೂ ಒಂದೊಂದು ಸಂದೇಶವಿರುತ್ತದೆ. ಅದೇ ರೀತಿ ಈ ಸಿನಿಮಾದಲ್ಲೂ ಇದೆ. ಅದು ಬಿಟ್ಟರೆ ನಿಮಗೆ ಹೊಸ ಬಗೆಯ ಸಿನಿಮಾವಾಗಿ 'ಶಿವಂ' ಇಷ್ಟವಾಗಲಿದೆ" ಎನ್ನುತ್ತಾರೆ.
ಈ ಹಿಂದೆ ಚಿತ್ರಕ್ಕೆ 'ಬಸವಣ್ಣ' ಎಂದಿಟ್ಟ ಮೇಲೆ ಚಿತ್ರದ ಶೀರ್ಷಿಕೆಯನ್ನು ಕೈಬಿಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು. ಅದಾದ ಬಳಿಕ ಚಿತ್ರಕ್ಕೆ 'ಬ್ರಾಹ್ಮಣ' ಎಂದಿಡುವುದಾಗಿ ಶ್ರೀನಿವಾಸರಾಜು ಹೇಳಿದ್ದರು. ಆ ಶೀರ್ಷಿಕೆ ಕೈಬಿಡುವಂತೆ ಬ್ರಾಹ್ಮಣ ಸಮುದಾಯದ ಸಂಘಟನೆಗಳು ಆಗ್ರಹಿಸಿದವು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಘಟನೆ ಬ್ರಾಹ್ಮಣ ಶೀರ್ಷಿಕೆ ವಿರುದ್ಧ ತಿರುಗಿಬಿತ್ತು. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]
ವಿಧಿ ಇಲ್ಲದೆ ಬ್ರಾಹ್ಮಣ ಶೀರ್ಷಿಕೆಯನ್ನು ಕೈಬಿಟ್ಟ ಶ್ರೀನಿವಾಸರಾಜು ಕಡೆಗೆ ಸಿಂಬಲ್ ನಲ್ಲೇ ಚಿತ್ರ ಬಿಡುಗಡೆ ಮಾಡಲು ಮುಂದಾಗಿ ಫೈನಲ್ಲಾಗಿ 'ಶಿವಂ' ಎಂದು ಹೆಸರಿಟ್ಟರು. ಸೆನ್ಸಾರ್ ನಲ್ಲಿ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿರುವ ಚಿತ್ರದಲ್ಲಿ ಏನೆಲ್ಲಾ ಇದೆ ಎಂಬುದು ಇದೇ ಜನವರಿ 2ಕ್ಕೆ ಗೊತ್ತಾಗಲಿದೆ. (ಏಜೆನ್ಸೀಸ್)


Click it and Unblock the Notifications











