»   » ತಲೆಕೆಳಗಾಗಿ ನಿಂತು ಅಭಿಮಾನಿಗಳ ಉಘೇ..ಉಘೇ..

ತಲೆಕೆಳಗಾಗಿ ನಿಂತು ಅಭಿಮಾನಿಗಳ ಉಘೇ..ಉಘೇ..

By: ಬ್ರಹ್ಮಾನಂದ ಅರಳಿ
Subscribe to Filmibeat Kannada

ಎಲ್ಲೆಲ್ಲೂ ಉಪ್ಪಿ 2ದ್ದೇ ಹವಾ. ಉಪೇಂದ್ರ ಅಭಿಮಾನಿಗಳು ಉಪ್ಪಿಯಂತೆ ಅವರ ಚಿತ್ರಕ್ಕೆ ಡಿಫರೆಂಟಾಗಿಯೇ ಉಘೇ ಉಘೇ ಹೇಳಿದ್ದಾರೆ. ಮೊದಲ ದಿನವೇ ಚಿತ್ರ ವೀಕ್ಷಣೆಗೆ ಭರಪೂರ ಸಿದ್ಧತೆ ಮಾಡಿಕೊಂಡಿದ್ದಾರೆ.

ಉಪ್ಪಿಯ ತಲೆಕೆಳಗಾದ ಚಿತ್ರಗಳನ್ನು ನೋಡಿದ ಅಭಿಮಾನಿಗಳು ಚಿತ್ರಕ್ಕೆ ಶುಭ ಕೋರುವ ಪೋಸ್ಟರಗಳನ್ನು ಕೂಡ ತಲೆ ಕೆಳಗಾಗೆ ಹಾಕಿದ್ದಾರೆ. ಮತ್ತೆ ಕೆಲವರು ತಲೆಕೆಳಕ್ಕಾಗಿ ನಿಂತು ಅಭಿಮಾನ ಮೆರೆಯುತ್ತಿದ್ದಾರೆ. ಇನ್ನೊಬ್ಬ ಅಭಿಮಾನಿ ತಲೆ ಮೇಲೆ ಉಪ್ಪಿ2 ಎಂದು ಬರೆದು ಕೊಂಡು ಉಪ್ಪಿಯಿಂದಲೇ ಶಹಭಾಸ್ ಪಡೆದುಕೊಂಡಿದ್ದಾರೆ. ಒಬ್ಬನೇ 400 ಟಿಕೆಟ್ ಕೊಂಡು ಅಭಿಮಾನದ ಹೊಳೆ ಹರಿಸಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ.[ಉಪೇಂದ್ರ ಮಾಡಿರೋ ಉಪ್ಪಿ 2 ತಿನ್ನೋ ಮುನ್ನ ಓದಿ!]

ಉಪ್ಪಿ ಅಭಿಮಾನಿಗಳ ಢಿಪರೆಂಟ್ ವಿಶಸ್ ಗಳನ್ನು ಒಮ್ಮೆ ನೋಡಿಕೊಂಡು ಬರೋಣ... ತಲೆ ಕೆಳಗಾಗಿ...

ತಲೆಯ ಮೇಲೆ ಉಪ್ಪಿ 2

ಉಪೇಂದ್ರ ಅಭಿಮಾನಿ ತಲೆ ಮೇಲೆ ಉಪ್ಪಿ2 ಎಂದು ಬರೆದು ಕೊಂಡು ಉಪ್ಪಿಯಿಂದಲೇ ಶಹಭಾಸ್ ಪಡೆದುಕೊಂಡಿದ್ದಾರೆ.

ಇವನ್ಯಾರೋ ಢಿಪರೆಂಟು

ಉಪೇಂದ್ರ ಚಿತ್ರಗಳ ಹೆಸರನ್ನು ಬರೆಸಿಕೊಂಡು ತಲೆಕೆಳಗಾಗಿ ಫೋಟೋ ಹಾಕಿಸಿಕೊಂಡ ಅಭಿಮಾನಿಗಳು.

ಕಾಲು ಎಳೆಯಲು ಸಾಧ್ಯವೇ ಇಲ್ಲ

ಉಪ್ಪಿ 2 ಪೋಸ್ಟರ್ ನೋಡಿದ ನಂತರ ತಲೆಕೆಳಕ್ಕಾಗಿ ನಿಂತು ಅಭಿಮಾನ ಮೆರೆದ ಬಗೆ.

ಉಪ್ಪಿ ಟು ನೋಡಲು ರಜಾ ಪತ್ರ

ಉಪ್ಪಿ ಟು ನೋಡಲು ಹೋಗಬೇಕು ಹಾಗಾಗಿ ರಜಾಬೇಕು ಎಂದು ಶಾಲೆಯ ಪ್ರಿನ್ಸಿಪಾಲ್ ಗೆ ಒಂದು ರಜಾ ಅರ್ಜಿ.

400 ಟಿಕೆಟ್ ಒಬ್ಬನೇ ಕೊಂಡ

ಅಭಿಮಾನದ ಪ್ರತೀಕ ಎಂಬಂತೆ ಒಬ್ಬನೇ 400 ಟಿಕೆಟ್ ಕೊಂಡಿದ್ದಾನೆ ಎಂಬ ಸುದ್ದಿ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

English summary
Uppi 2 Film : Upendra fans use crazy ideas to Wish success to Real Star Upendra. Uppi 2 film set to reelase on Aug 14.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada