»   » ರಿಯಲ್ ಸ್ಟಾರ್ ಉಪ್ಪಿಟ್ಟು ತಿಂದೋರು ಕೊಟ್ಟ ಕಾಸೆಷ್ಟು?

ರಿಯಲ್ ಸ್ಟಾರ್ ಉಪ್ಪಿಟ್ಟು ತಿಂದೋರು ಕೊಟ್ಟ ಕಾಸೆಷ್ಟು?

Posted By:
Subscribe to Filmibeat Kannada


ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಉಪ್ಪಿ 2' ಚಿತ್ರ ನಿನ್ನೆ (ಆಗಸ್ಟ್ 14) ರಂದು ಇಡೀ ಭಾರತ ಹಾಗೂ ಕರ್ನಾಟಕದಾದ್ಯಂತ ಬಿಗ್ಗೆಸ್ಟ್ ಓಪನ್ನಿಂಗ್ ಪಡೆದುಕೊಂಡಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

1999 ರ 'ಉಪೇಂದ್ರ' ಚಿತ್ರದ ಸೀಕ್ವೆಲ್ 'ಉಪ್ಪಿ 2' ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಆಸ್ಟ್ರೇಲಿಯಾ ನಟಿ ಕ್ರಿಸ್ಟಿನಾ ಅಖಿವಾ ಹಾಗೂ ಪಾರುಲ್ ಯಾದವ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು.

ಭಾರತದಾದ್ಯಂತ ಸುಮಾರು 650 ಚಿತ್ರಮಂದಿರಗಳಲ್ಲಿ ತೆರೆ ಕಂಡಿದ್ದ 'ಉಪ್ಪಿ 2' ಚಿತ್ರದ ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಗೊತ್ತಾ ನಿಮಗೆ, ನಮ್ಮ ಕರ್ನಾಟಕದಾದ್ಯಂತ ಸುಮಾರು 5 ಕೋಟಿ ರು ಸೇರಿದಂತೆ ಭಾರತದಾದ್ಯಂತ ಸುಮಾರು 10 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸಾಫೀಸ್ ಚಿಂದಿ ಉಡಾಯಿಸಿದೆ ಅಂತ ರಿಪೋರ್ಟ್ ಹೇಳುತ್ತಿದೆ.[ಉಪ್ಪಿ-2 ರುಚಿಯಾಗಿದೆ, ಆದ್ರೇ ಜೀರ್ಣ ಆಗೋದ್ ಕಷ್ಟ!]

upendra

ಕನ್ನಡ ಚಿತ್ರರಂಗದಲ್ಲೇ ಪ್ರಪಥಮ ಬಾರಿಗೆ ಒಂದು ದಿನದಲ್ಲಿ ಇಷ್ಟು ಮೊತ್ತ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಧೂಳಿಪಟ ಮಾಡಿದ ಕೀರ್ತಿ ಉಪೇಂದ್ರ ಅವರ 'ಉಪ್ಪಿ 2' ಚಿತ್ರಕ್ಕೆ ಸಲ್ಲುತ್ತದೆ.

ಕೇವಲ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ತೆಲುಗು ಡಬ್ ವರ್ಷನ್ ಬಿಟ್ಟರೆ ಉಳಿದೆಲ್ಲೆಡೆ ಬರೀ ಕನ್ನಡದಲ್ಲಿ ಮಾತ್ರ ಪ್ರದರ್ಶನ ಕಾಣುತ್ತಿರುವ 'ಉಪ್ಪಿ 2' ಪ್ರೇಕ್ಷಕರನ್ನು ಹಾಗೂ ಅಭಿಮಾನಿ ದೇವರುಗಳನ್ನು ಕಮಾಲ್ ಮಾಡುತ್ತಿದೆ.[ವಿಮರ್ಶಕರ ಪ್ರಕಾರ ಉಪ್ಪಿಟ್ಟು ರುಚಿ ಹೇಗಿದೆ?]

Upendra

ಸಾಮಾನ್ಯವಾಗಿ ಎಲ್ಲಾ ಕನ್ನಡ ಮೂವಿಗಳಲ್ಲಿ ಹಾಡು, ಕಾಮಿಡಿ, ಫೈಟ್ ಜೊತೆಗೆ ಪ್ರೀತಿ-ಸ್ನೇಹ ಎಲ್ಲವೂ ಕಾಮನ್. ಆದರೆ ಉಪೇಂದ್ರ ಅವರ 'ಉಪ್ಪಿ 2' ನಲ್ಲಿ ಎಲ್ಲವೂ ಡಿಫರೆಂಟ್ ಚಿತ್ರ ಕೆಲ ಮಂದಿಗೆ ಅರ್ಥವಾದರೆ ಇನ್ನೂ ಕೆಲವು ಅಭಿಮಾನಿಗಳು ಅರ್ಥವಾಗದೆ ಚಿತ್ರಮಂದಿರದಿಂದ ಹೊರಬಂದವರು ಕೆಲವರು.

ಎಲ್ಲವನ್ನೂ ಡಿಫರೆಂಟ್ ಆಗಿ ತೋರಿಸುವ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ನಿರ್ದೇಶನದ ಚಿತ್ರವನ್ನು ಡಿಫರೆಂಟಾಗಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.['ಉಪ್ಪಿಟ್ಟು' ರುಚಿ ನೋಡಿದ 'ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ' ನಿರ್ದೇಶಕರು]

ಒಟ್ನಲ್ಲಿ ಮತ್ತೊಮ್ಮೆ ಉಪೇಂದ್ರ ಅವರು ರಿಯಲ್ ಸ್ಟಾರ್ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. 'ಉಪ್ಪಿಗಿಂತ ರುಚಿ ಬೇರೆ ಇಲ್ಲ ಅಂತನೂ ವೀಕ್ಷಕರಿಗೆ ತಿಳಿಸಿಕೊಟ್ಟಿದ್ದಾರೆ ಅಂದರೂ ತಪ್ಪಾಗ್ಲಿಕ್ಕಿಲ್ಲ.

English summary
Kannada movie 'Uppi 2' First day Box office collection, 5 lakh in Karnataka and Overall collection of the movie is in 10 crore. 'Uppi 2' movie feature Kannada actor Upendra, Actress Kristina Akheeva, Actress Parul Yadav in the lead role. The movie is directed by Upendra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada