Just In
Don't Miss!
- News
ಲಿಂಗಾಂಬೂದಿಪಾಳ್ಯ ಕೆರೆಗೆ ಹರಿಯಲಿದೆ ಕೆಆರ್ಎಸ್ ನೀರು
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Automobiles
ಭಾರತದಲ್ಲಿ 3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಉಪೇಂದ್ರ ಅವರಿಗೆ ತುಂಬಾ ವಿಶಾಲ ಹೃದಯ ಇದೆಯಂತೆ
'ರಂಗಿತರಂಗ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಂಗಳೂರಿನ ಚೆಲುವೆ ಹೊಸ ಪ್ರತಿಭೆ ನಟಿ ಅವಂತಿಕಾ ಶೆಟ್ಟಿ ಅವರು ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ 'ಕಲ್ಪನಾ-2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಇದೇ ಫಿಲ್ಮಿಬೀಟಲ್ಲಿ ನಾವು ನಿಮಗೆ ಹೇಳಿದ್ವಿ ತಾನೇ.
ಇದೀಗ ತಮಿಳಿನ ರಿಮೇಕ್ ಚಿತ್ರ 'ಕಲ್ಪನಾ-2' ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ನಟಿ ಅವಂತಿಕಾ ಶೆಟ್ಟಿ ಅವರು ಉಪೇಂದ್ರ ಅವರ ಜೊತೆ ಚಿತ್ರೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವಂತಿಕಾ ಅವರು ಪರ್ತಕರ್ತೆಯ ಪಾತ್ರದಲ್ಲಿ ಮಿಂಚಿದ್ದಾರೆ.['ಕಲ್ಪನಾ 2' ಸಿನಿಮಾ ಉಪ್ಪಿಗೆ, ಬಿಗ್ ಚಾಲೆಂಜ್ ಅಂತೆ..!]
ತಮಿಳಿನಲ್ಲಿ ನಟಿ ತಾಪ್ಸಿ ಪನ್ನು ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ಅವಂತಿಕಾ ಅವರು ಮಾಡುತ್ತಿದ್ದು, ಉಪೇಂದ್ರ ಅವರ ಜೊತೆಗೆ ಎರಡು ಹಂತಗಳ ಶೂಟಿಂಗ್ ಮುಗಿಸಿರುವ ನಟಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
'ನಾನಿನ್ನೂ ಪ್ರಿಯಾಮಣಿ ಅವರನ್ನು ಭೇಟಿ ಮಾಡಿಲ್ಲ, ಸದ್ಯಕ್ಕೆ ಚಿತ್ರೀಕರಣದ ಪಾತ್ರವೆಲ್ಲವೂ ಉಪೇಂದ್ರ ಅವರ ಜೊತೆಗಿತ್ತು. ಇಡೀ ಸೆಟ್ ನಲ್ಲಿ ಎಲ್ಲರೂ ಕನ್ನಡದಲ್ಲಿ ಮಾತನಾಡುತ್ತಿದ್ದರಿಂದ ನನಗೆ ಸಂವಹನ ಸ್ವಲ್ಪ ಕಷ್ಟ ಆಯ್ತು. 'ರಂಗಿತರಂಗ'ದಲ್ಲಾದರೆ ನಾನು ತುಳು ಮಾತನಾಡಿ ಬಚಾವಾದೆ' ಎಂದಿದ್ದಾರೆ.[ಉಪ್ಪಿ ಜೊತೆ 'ರಂಗಿ' ಬೆಡಗಿ ಅವಂತಿಕಾ ಶೆಟ್ಟಿ ಡ್ಯುಯೆಟ್ ಹಾಡ್ತಾರಾ?]
'ಈ ಪಾತ್ರ ಮಾಡುವುದು ಅಷ್ಟೇನೂ ಕಷ್ಟ ಆಗಲಿಲ್ಲ ಎನ್ನುವ ಅವಂತಿಕಾ ನಟ ಉಪೇಂದ್ರ ಅವರನ್ನು ಮನಸಾರೆ ಹೊಗಳಿದ್ದಾರೆ. 'ಉಪೇಂದ್ರ ಅವರು ವಿಶಾಲ ಹೃದಯಿ. ಚಿತ್ರೀಕರಣಕ್ಕೆ ಅವರು ಹೆಚ್ಚಿನ ಶ್ರಮ ವಹಿಸುತ್ತಾರೆ' ಎನ್ನುತ್ತಾರೆ.
ನಿರ್ದೇಶಕ ಅನಂತರಾಜು ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದು, ಈ ಸಿನಿಮಾವನ್ನು ಅತ್ಯಂತ ಶೀಘ್ರದಲ್ಲಿ ಮುಗಿಸುವ ಆತುರದಲ್ಲಿದ್ದಾರೆ.