Don't Miss!
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿಮ್ಮ ನೆಚ್ಚಿನ ಕ್ರಿಕೆಟಿಗ ಯಾರು? ಊರ್ವಶಿ ರೌಟೇಲಾ ಕೊಟ್ಟ ಉತ್ತರ ಟ್ರೋಲ್‌ಗೆ ಗುರಿ
ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ''ನಿಮ್ಮ ನೆಚ್ಚಿನ ಕ್ರಿಕೆಟಿಗ ಯಾರು?'' ಎಂದು ಕೇಳಿದ್ದಾನೆ. ಅದಕ್ಕೆ ಉತ್ತರ ನೀಡಿರುವ ಊರ್ವಶಿ ''ನನಗೆ ಯಾವ ಕ್ರಿಕೆಟಿಗರೂ ಗೊತ್ತಿಲ್ಲ'' ಎಂದಿದ್ದಾರೆ.
ಊರ್ವಶಿ ನೀಡಿರುವ ಉತ್ತರ ಈಗ ಟ್ರೋಲ್‌ಗೆ ಗುರಿಯಾಗಿದೆ. ನಟಿ ಊರ್ವಶಿ ಜೊತೆ ಕ್ರಿಕೆಟಿಗ ರಿಷಭ್ ಪಂತ್ ಹೆಸರು ಅಂಟಿಕೊಂಡಿತ್ತು. ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಗಟ್ಟಿಯಾಗಿ ಚರ್ಚೆಯಾಗಿತ್ತು.
ಬಳಿಕ ರಿಷಭ್ ಪಂತ್ ಮತ್ತು ಊರ್ವಶಿ ಪರಸ್ಪರ ಸಾಮಾಜಿಕ ಜಾಲತಾಣ ಖಾತೆ ಹಾಗೂ ವಾಟ್ಸಾಪ್ ಬ್ಲಾಕ್ ಮಾಡುವ ಮೂಲಕ ಅಂತರ ಕಾಯ್ದುಕೊಂಡರು. ಈ ಮೂಲಕ ತಮ್ಮಿಬ್ಬರ ನಡುವೆ ಯಾವ ಸಂಬಂಧವೂ ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದರು.
ಅದಾದ ಮೇಲೆ ಊರ್ವಶಿ ಮತ್ತು ರಿಷಭ್ ವಿಚಾರ ಮೂಲೆ ಸೇರಿತ್ತು. ಇದೀಗ, ವರ್ಷದ ಬಳಿಕ ಮತ್ತೆ ಚರ್ಚೆಗೆ ಬಂದಿದೆ. ನನಗೆ ಯಾವ ಕ್ರಿಕೆಟಿಗರು ಗೊತ್ತಿಲ್ಲ ಎಂದು ಹೇಳಿರುವುದನ್ನು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
ಕ್ರಿಕೆಟಿಗ
ರಿಷಬ್
ಪಂತ್
ಜೊತೆ
'ಐರಾವತ'
ನಾಯಕಿ
ಡಿನ್ನರ್
ಪಾರ್ಟಿ!
ರಿಷಭ್ ಪಂತ್ ನೆನಪು ಇಲ್ಲವಾ ಎಂದು ಮೇಮ್ಸ್ ಮಾಡ್ತಿದ್ದಾರೆ. ಊರ್ವಶಿ ಮತ್ತು ರಿಷಭ್ ಫೋಟೋಗಳನ್ನು ಎಡಿಟ್ ಮಾಡಿ ಟ್ವಿಟ್ಟರ್, ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

'ನನಗೆ ಯಾವ ಕ್ರಿಕೆಟಿಗರೂ ಗೊತ್ತಿಲ್ಲ' ಎಂದು ಹೇಳಿರುವ ಊರ್ವಶಿ, 'ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರ ಮೇಲೆ ಹೆಚ್ಚು ಗೌರವ ಇದೆ' ಎಂದು ಹೇಳಿದ್ದಾರೆ.
Recommended Video
ಕನ್ನಡದಲ್ಲಿ ದರ್ಶನ್ ಜೊತೆ 'ಐರಾವತ' ಸಿನಿಮಾದಲ್ಲಿ ಊರ್ವಶಿ ರೌಟೇಲಾ ನಟಿಸಿದ್ದಾರೆ. ಹೇಟ್‌ಸ್ಟೋರಿ 4, ಪಾಗಲ್‌ಪಂತಿ, ಕಾಬಿಲ್ ಅಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ತೆಲುಗಿನಲ್ಲಿ 'ಬ್ಲಾಕ್ ರೋಸ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ತಮಿಳಿನಲ್ಲಿ ಇನ್ನು ಹೆಸರಿಡದ ಪ್ರಾಜೆಕ್ಟ್‌ನಲ್ಲಿ ಅಭಿನಯಿಸುತ್ತಿದ್ದಾರೆ.