For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ರಾಬರ್ಟ್' ಸಿನಿಮಾದಲ್ಲಿ ವಿ ಹರಿಕೃಷ್ಣ ಇಲ್ಲ

  |

  ನಟ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾದ ಟೀಸರ್ ನಿನ್ನೆ (ಫೆಬ್ರವರಿ 16) ರಂದು ಬಿಡುಗಡೆಯಾಗಿದೆ. ಟೀಸರ್ ನೋಡಿದ ಎಲ್ಲರೂ ತುಂಬ ಖುಷಿಯಾಗಿದ್ದಾರೆ.

  'ರಾಬರ್ಟ್' ಸಿನಿಮಾದ ಸಂಗೀತ ನಿರ್ದೇಶಕ ಯಾರು ಎನ್ನುವ ಕುತೂಹಲಕ್ಕೆ ತಿಂಗಳುಗಳ ಹಿಂದೆ ಉತ್ತರ ಸಿಕ್ಕಿತ್ತು. ಸಿನಿಮಾಗೆ ಅರ್ಜುನ್ ಜನ್ಯ ಹಾಗೂ ವಿ ಹರಿಕೃಷ್ಣ ಇಬ್ಬರೂ ಸಂಗೀತ ನಿರ್ದೇಶಕರು ಕೆಲಸ ಮಾಡುತ್ತಾರೆ ಎಂದು ಚಿತ್ರತಂಡ ತಿಳಿಸಿತ್ತು.

  ವಿಡಿಯೋ: ಈ 'ರಾಬರ್ಟ್' ರಾಮನೂ ಹೌದು.. ರಾವಣನೂ ಹೌದು..

  ಅರ್ಜುನ್ ಜನ್ಯ ಸಂಗೀತ ಹಾಗೂ ಹರಿಕೃಷ್ಣ ಹಿನ್ನಲೆ ಸಂಗೀತ ಮಾಡುತ್ತಾರೆ ಎಂದು ಪ್ಲಾನ್ ಆಗಿತ್ತು. ಆದರೆ, ಸಿನಿಮಾದಲ್ಲಿ ಹರಿಕೃಷ್ಣ ಕೆಲಸ ಮಾಡುತ್ತಿಲ್ಲ. ಈ ಹಿಂದೆ ದರ್ಶನ್ ಹಾಗೂ ಹರಿಕೃಷ್ಣ ಕಾಂಬಿನೇಶನ್ ನಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳು ಬಂದಿವೆ. ಅದೇನೇ ಇದ್ದರೂ ಅರ್ಜುನ್ ಜನ್ಯ ಅವರೇ 'ರಾಬರ್ಟ್' ಚಿತ್ರದ ಸಂಗೀತ ಹಾಗೂ ಹಿನ್ನಲೆ ಸಂಗೀತ ವಿಭಾಗವನ್ನು ನೋಡಿಕೊಳ್ಳುತ್ತಿದ್ದಾರೆ.

  ಚಿತ್ರದಲ್ಲಿ ಹರಿಕೃಷ್ಣ ಇಲ್ಲ

  ಚಿತ್ರದಲ್ಲಿ ಹರಿಕೃಷ್ಣ ಇಲ್ಲ

  'ರಾಬರ್ಟ್' ಸಿನಿಮಾಗೆ ಹಿನ್ನೆಲೆ ಸಂಗೀತವನ್ನು ವಿ ಹರಿಕೃಷ್ಣ ನೀಡುತ್ತಿಲ್ಲ. ಹೀಗಾಗಿ ಸಿನಿಮಾದ ಟೀಸರ್ ನಲ್ಲಿ ಅವರ ಹೆಸರಿಲ್ಲ. ಈ ಹಿಂದೆ ಚಿತ್ರತಂಡ ವಿ ಹರಿಕೃಷ್ಣ ಸಿನಿಮಾದಲ್ಲಿ ಕೆಲಸ ಮಾಡುತ್ತಾರೆ ಎಂದು ತಿಳಿಸಿತ್ತು. ಆದರೆ, ಸಿನಿಮಾದಲ್ಲಿ ಅವರು ಇಲ್ಲ. ಹೀಗಾಗಿ ಅರ್ಜುನ್ ಜನ್ಯ ಅವರೇ ಸಿನಿಮಾದ ಸಂಗೀತ ಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದಾರೆ.

  ಡಿ ಬಾಸ್ ಅಭಿಮಾನಿಗಳಿಗೆ ಸಂತಸದ ಸುದ್ದಿ: ವಿಶೇಷ ದಿನದಂದು ಬರ್ತಿದೆ 'ರಾಬರ್ಟ್' ಟೀಸರ್

  ಹರಿಕೃಷ್ಣ ನಿರ್ದೇಶನ ತಯಾರಿ?

  ಹರಿಕೃಷ್ಣ ನಿರ್ದೇಶನ ತಯಾರಿ?

  ಈಗೀಗ ಹರಿಕೃಷ್ಣ ಸಂಗೀತ ನೀಡುವ ಸಿನಿಮಾಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಕಳೆದ ವರ್ಷವೂ ಅವರ ಮ್ಯೂಸಿಕ್ ಸಿನಿಮಾಗಳು ಇಳಿಮುಖವಾಗಿತ್ತು. 'ಯಜಮಾನ' ಸಿನಿಮಾದ ಮೂಲಕ ನಿರ್ದೇಶಕರಾಗಿದ್ದ ಹರಿಕೃಷ್ಣ ತಮ್ಮ ಎರಡನೇ ಸಿನಿಮಾದ ತಯಾರಿಯಲ್ಲಿ ಇದ್ದಾರೆ ಎನ್ನುವ ಸುದ್ದಿ ಇದೆ. ಇದೇ ಕಾರಣದಿಂದ ಅವರಿಗೆ 'ರಾಬರ್ಟ್'ನಲ್ಲಿ ಕೆಲಸ ಮಾಡಲು ಆಗದಿರಬಹುದು.

  ತರುಣ್ - ಅರ್ಜುನ್ ಕಾಂಬಿನೇಶನ್

  ತರುಣ್ - ಅರ್ಜುನ್ ಕಾಂಬಿನೇಶನ್

  ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಿರ್ದೇಶಕ ತರುಣ್ ಸುಧೀರ್ ಕಾಂಬಿನೇಶನ್ ಈಗಾಗಲೇ ಸೂಪರ್ ಹಿಟ್ ಆಗಿದೆ. ಈ ಹಿಂದೆ 'ರಾಂಬೋ', 'ಅಧ್ಯಕ್ಷ', 'ರಾಂಬೋ 2' 'ಚೌಕ' ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೆ ಕೆಲಸ ಮಾಡಿದೆ. ಈ ಜೋಡಿಯ ಎಲ್ಲ ಹಾಡುಗಳು ಹಿಟ್ ಆಗಿವೆ. ಹೀಗಾಗಿಯೇ 'ರಾಬರ್ಟ್' ಹಾಡುಗಳ ಮೇಲೆ ನಿರೀಕ್ಷೆ ಜೋರಾಗಿದೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆನೇ ಚಾಲೆಂಜ್ ಮಾಡಿದ ರಣ್ವೀರ್ ಸಿಂಗ್

  ಹಾಡುಗಳು, ಸಿನಿಮಾ ಬಿಡುಗಡೆ ಯಾವಾಗ?

  ಹಾಡುಗಳು, ಸಿನಿಮಾ ಬಿಡುಗಡೆ ಯಾವಾಗ?

  'ರಾಬರ್ಟ್' ಸಿನಿಮಾದ ಬಿಡುಗಡೆ ಏಪ್ರಿಲ್ ಗೆ ಫಿಕ್ಸ್ ಆಗಿದೆ. ಹಾಡುಗಳು ಹಾಗೂ ಟ್ರೇಲರ್ ಮಾರ್ಚ್ ತಿಂಗಳಿನಲ್ಲಿ ಬರುವ ಸಾಧ್ಯತೆ ಇದೆ. ತರುಣ್ ಸುಧೀರ್ ಎರಡನೇ ಸಿನಿಮಾ ಇದಾಗಿದೆ. ಉಮಾಪತಿ ಬಂಡವಾಳ ಹಾಕಿದ್ದಾರೆ. ಆಶಾ ಭಟ್ ಚಿತ್ರದ ನಾಯಕಿಯಾಗಿದ್ದಾರೆ. ಇದು ಅವರ ಮೊದಲ ಕನ್ನಡ ಸಿನಿಮಾವಾಗಿದೆ.

  English summary
  Music Director V Harikrishna not in the part of Darshan's Roberrt kannada movie team.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X