For Quick Alerts
  ALLOW NOTIFICATIONS  
  For Daily Alerts

  ಇಂಡಸ್ಟ್ರಿಗೆ ಬಂದ ಹರಿಕೃಷ್ಣ ಪುತ್ರ : ಕೇವಲ 45 ನಿಮಿಷದಲ್ಲಿ ಮೊದಲ ಹಾಡು ರೆಡಿ

  |
  ಕೇವಲ 45 ನಿಮಿಷದಲ್ಲಿ ಮೊದಲ ಹಾಡು ರೆಡಿ | FILMIBEAT KANNADA

  ಕನ್ನಡ ಚಿತ್ರರಂಗದ ಟಾಪ್ ಸಂಗೀತ ನಿರ್ದೇಶಕರ ಪೈಕಿ ಒಬ್ಬರು ವಿ ಹರಿಕೃಷ್ಣ. ಈಗಾಗಲೇ ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿರುವ ಹರಿಕೃಷ್ಣ ಸಾಕಷ್ಟು ಸೂಪರ್ ಹಿಟ್ ಗೀತೆಗಳನ್ನು ನೀಡಿದ್ದಾರೆ.

  ಎಲ್ಲರಿಗೆ ತಿಳಿಸಿರುವ ಹಾಗೆ ಹರಿಕೃಷ್ಣ ಖ್ಯಾತ ಸಂಗೀತ ನಿರ್ದೇಶಕ ಜಿ ಕೆ ವೆಂಕಟೇಶ್ ಅವರ ಕುಟುಂಬದಿಂದ ಬಂದವರು. ಹರಿಕೃಷ್ಣ ಅವರ ಇಡೀ ಕುಟುಂಬಕ್ಕೆ ಸಂಗೀತದ ನಂಟು ಇದೆ. ಅವರು ಸಂಗೀತ ನಿರ್ದೇಶಕರಾಗಿದ್ದರೆ, ಅವರ ಪತ್ನಿ ವಾಣಿ ಹರಿಕೃಷ್ಣ ಗಾಯಕಿಯಾಗಿದ್ದಾರೆ. ಇದೀಗ ಅವರ ಮಗ ಕೂಡ ಸಂಗೀತ ಲೋಕದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

  ವಿ ಹರಿಕೃಷ್ಣ ಪುತ್ರ ಆದಿ ಹರಿಕೃಷ್ಣ ಈಗ ಮೊದಲ ಬಾರಿಗೆ ಒಂದು ಸಿನಿಮಾದ ಹಾಡಿಗೆ ಮ್ಯೂಸಿಕ್ ನೀಡಿದ್ದಾರೆ. ಯಾವುದ ಸಿನಿಮಾ ಎಂಬ ವಿವರ ಮುಂದಿದೆ ಓದಿ...

  'ಕಿಸ್' ಸಿನಿಮಾ ಸಂಗೀತ

  'ಕಿಸ್' ಸಿನಿಮಾ ಸಂಗೀತ

  ಹರಿಕೃಷ್ಣ ಪುತ್ರ ಆದಿ ಈಗ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಎ ಪಿ ಅರ್ಜುನ್ ನಿರ್ದೇಶನದ 'ಕಿಸ್' ಸಿನಿಮಾದ ಒಂದು ಹಾಡಿಗೆ ಆದಿ ಸಂಗೀತ ನೀಡಿದ್ದಾರೆ. ''ನೀನೇ ಮೊದಲು ನೀನೇ ಕೊನೆ..'' ಎಂಬ ಹಾಡಿಗೆ ಆದಿ ಮ್ಯೂಸಿಕ್ ನೀಡಿದ್ದಾರೆ. ಈ ಹಾಡಿಗೆ ನಿರ್ದೇಶಕ ಎ ಪಿ ಅರ್ಜುನ್ ಸಾಹಿತ್ಯ ಬರೆದಿದ್ದಾರೆ.

  ಯಶ್ ಬಿಡುಗಡೆ

  ಯಶ್ ಬಿಡುಗಡೆ

  ಆದಿ ಹರಿಕೃಷ್ಣ ಮ್ಯೂಸಿಕ್ ನೀಡಿರುವ ಹಾಡನ್ನು ನಟ ಯಶ್ ಬಿಡುಗಡೆ ಮಾಡಲಿದ್ದಾರೆ. ಇಂದು ಸಂಜೆ 5 ಗಂಟೆಗೆ ಡೀ ಬೀಟ್ಸ್ ಯೂ ಟ್ಯೂಬ್ ಚಾನಲ್ ನಲ್ಲಿ ಹಾಡು ರಿಲೀಸ್ ಆಗಲಿದೆ. ಈ ಹಾಡಿಗೆ ಶ್ರೇಯಾ ಘೋಷಲ್ ಧ್ವನಿ ನೀಡಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟ ಆದಿಗೆ ಶ್ರೇಯಾ ಶುಭಾಶಯ ತಿಳಿಸಿದ್ದಾರೆ.

  45 ನಿಮಿಷದಲ್ಲಿ ಹಾಡು ಸಿದ್ಧ

  45 ನಿಮಿಷದಲ್ಲಿ ಹಾಡು ಸಿದ್ಧ

  ಹರಿಕೃಷ್ಣ 'ಯಜಮಾನ' ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಆ ಚಿತ್ರದ ಕೆಲಸದಲ್ಲಿ ಅವರು ಬ್ಯುಸಿ ಇದ್ದು, ಅವರ ಪುತ್ರ ಆದಿಗೆ ನಿರ್ದೇಶಕ ಅರ್ಜುನ್ ಮ್ಯೂಸಿಕ್ ಮಾಡಲು ಹೇಳಿದ್ದರು. ಆದಿ ಪ್ರತಿಭೆಯನ್ನು ಕಂಡಿದ್ದ ಅರ್ಜುನ್ ತಮ್ಮ ಸಾಹಿತ್ಯಕ್ಕೆ ಟ್ಯೂನ್ ಹಾಕಲು ಹೇಳಿದರು. ಕೇವಲ 45 ನಿಮಿಷದಲ್ಲಿ ಈ ಹಾಡು ರೆಡಿಯಾಯ್ತು.

  'ಭರ್ಜರಿ' ಹಾಡಿನಲ್ಲಿ ಕಂಡಿದ್ದ ಆದಿ

  'ಭರ್ಜರಿ' ಹಾಡಿನಲ್ಲಿ ಕಂಡಿದ್ದ ಆದಿ

  ಧ್ರುವ ಸರ್ಜಾ ನಟನೆಯ 'ಭರ್ಜರಿ' ಸಿನಿಮಾದ ಹಾಡಿಗೆ ಹರಿಕೃಷ್ಣ ಸಂಗೀತ ನೀಡಿದ್ದರು. ಈ ಚಿತ್ರದ ಟೈಟಲ್ ಸಾಂಗ್ ನಲ್ಲಿ ಹರಿಕೃಷ್ಣ ಪುತ್ರ ಆದಿ ಹರಿಕೃಷ್ಣ ಕಾಣಿಸಿಕೊಂಡಿದ್ದರು. ಹಾಡಿನ ಪ್ರಾರಂಭದಲ್ಲಿ ಆದಿ ಹೀಗೆ ಬಂದು ಹಾಗೆ ಹೋಗಿದ್ದರು. ಈ ಹಾಡಿನಲ್ಲಿ 'ಡಿ ಬೀಟ್ಸ್' ಎಂಬ ಸಾಹಿತ್ಯ ಇದ್ದು, ಅದನ್ನು ಹರಿಕೃಷ್ಣ ಅವರ ಮಗನಿಂದ ಹೇಳಿಸಲಾಗಿತ್ತು.

  English summary
  Kannada music director V.Harikrishna son Aditya Harikrishna to make his Sandalwood Debut through 'Kiss' Kannada Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X