»   » 'ಗೂಗಲ್'ನಲ್ಲಿ ಒಂದಾದ ವಿ.ನಾಗೇಂದ್ರ ಪ್ರಸಾದ್-ಶುಭಾ ಪೂಂಜ!

'ಗೂಗಲ್'ನಲ್ಲಿ ಒಂದಾದ ವಿ.ನಾಗೇಂದ್ರ ಪ್ರಸಾದ್-ಶುಭಾ ಪೂಂಜ!

Posted By:
Subscribe to Filmibeat Kannada

ಗೀತ ಸಾಹಿತಿ ಕಮ್ ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್ ಮತ್ತು ನಟಿ ಶುಭಾ ಪೂಂಜ ಮದುವೆ ಆಗಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಸಹಿತ ಹರಿದಾಡಿತ್ತು. ಆದ್ರೆ ಇದು ಅವರಿಬ್ಬರು ಚಿತ್ರವೊಂದರಲ್ಲಿ ನಟಿಸುತ್ತಿದ್ದು, ಮದುವೆ ಸೀನ್‌ನಲ್ಲಿ ತೆಗೆದ ಫೋಟೋವನ್ನು ಯಾರೋ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದು ಎಂಬುದು ಅವರನ್ನು ಫಿಲ್ಮಿಬೀಟ್ ಸಂಪರ್ಕಿಸಿದಾಗಲೇ ಮದುವೆ ಚಿತ್ರಕ್ಕಾಗಿ ನಡೆದಿರುವುದು ಎಂದು ತಿಳಿದಿತ್ತು. ಅಂದಹಾಗೆ ಈ ಚಿತ್ರಕ್ಕೀಗ ಟೈಟಲ್ ಫಿಕ್ಸ್ ಆಗಿದೆ.

ಫೋಟೋ: ನಟಿ ಶುಭ ಪುಂಜ ಜೊತೆ ವಿ.ನಾಗೇಂದ್ರ ಪ್ರಸಾದ್ ಮದುವೆ?

ವಿ.ನಾಗೇಂದ್ರ ಪ್ರಸಾದ್ ಮತ್ತು ಶುಭಾ ಪೂಂಜ ರವರು ಜೊತೆಯಾಗಿ ನಟಿಸಿರುವ ಈ ಚಿತ್ರಕ್ಕೆ 'ಗೂಗಲ್' ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ವಿ.ನಾಗೇಂದ್ರ ಪ್ರಸಾದ್ ರವರೇ ನಿರ್ದೇಶನ ಮಾಡುತ್ತಿದ್ದು, ಅವರು ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ ದೀಪಕ್, ಅಮೃತರಾವ್, ಮುನಿ, ಸಂಪತ್, ದಯಾಳ್ ಪದ್ಮನಾಭನ್ ರವರು ಚಿತ್ರದ ತಾರಾಬಳಗದಲ್ಲಿದ್ದಾರೆ.

V.Nagendra Prasad and Shubha Punja starring movie titled as 'Google'

'ಈ ಭೂಮಿ ಬಣ್ಣದ ಬುಗುರಿ' ಎಂದು 'ಗೂಗಲ್' ಚಿತ್ರಕ್ಕೆ ಸಬ್‌ ಟೈಟಲ್ ನೀಡಿರುವುದರಿಂದ ಚಿತ್ರದ ಬಗ್ಗೆ ಕುತೂಹಲ ಮೂಡಿದೆ. ಸಿನಿಮಾ ಕಾಮಿಡಿ ಎಂಟರ್‌ಟೈನರ್ ಆಗಿದ್ದು, ಭಾವನಾತ್ಮಕವಾದ ಚಿತ್ರಕಥೆಯನ್ನು ಒಳಗೊಂಡಿದೆ ಎಂದು ವಿ.ನಾಗೇಂದ್ರ ಪ್ರಸಾದ್ ರವರು ಹೇಳಿದ್ದಾರೆ.

ನಿರ್ದೇಶಕರ ಸಂಘದ ಹೊಸ ಅಧ್ಯಕ್ಷರಾದ ವಿ.ನಾಗೇಂದ್ರ ಪ್ರಸಾದ್ ಸಂದರ್ಶನ

'ಗೂಗಲ್' ಚಿತ್ರವನ್ನು ಎನ್‌.ಶ್ರೀಧರ್ ಮತ್ತು ಎಲ್‌ ಅಶ್ವತ್ಥ್‌ ನಾರಾಯಣ ರವರು ಜಂಟಿಯಾಗಿ ಉತ್ಸವ್ ಮೂವೀಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.

English summary
Director cum Lyricist V.Nagendra Prasad and Kannada Actress Shubha Punja starring movie titled as 'Google'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada