For Quick Alerts
  ALLOW NOTIFICATIONS  
  For Daily Alerts

  ಫಿಲ್ಮ್ ಫೇರ್ ಪಡೆದ ಬಳಿಕ ವಿ.ನಾಗೇಂದ್ರ ಪ್ರಸಾದ್ ಬರೆದ ಪ್ರೀತಿಯ ಓಲೆ

  By Naveen
  |

  2018ನೇ ಸಾಲಿನ ಸೌತ್ ಫಿಲ್ಮ್ ಫೇರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಿನ್ನೆ ನಡೆದಿದೆ. ಅತ್ಯುತ್ತಮ ಗೀತರಚನೆಕಾರ ವಿಭಾಗದಲ್ಲಿ ವಿ.ನಾಗೇಂದ್ರ ಪ್ರಸಾದ್ ಪ್ರಶಸ್ತಿ ಪಡೆದಿದ್ದಾರೆ. ಕನ್ನಡಿಗರು ಅಪ್ಪಿಕೊಂಡ 'ಅಪ್ಪ ಐ ಲವ್ ಯೂ...' ಹಾಡಿಗೆ ಪ್ರಶಸ್ತಿ ಕೂಡ ಸಿಕ್ಕಿದೆ.

  ಪ್ರಶಸ್ತಿ ಪಡೆದಿರುವ ವಿ,ನಾಗೇಂದ್ರ ಪ್ರಸಾದ್ ತಮ್ಮ ಮುದ್ದಾದ ಸಾಲುಗಳ ಮೂಲಕ ಈ ಹಾಡಿನ ಯಶಸ್ಸಿಗೆ ಕಾರಣರಾದ ಎಲ್ಲರಿಗೆ ಧನ್ಯವಾದ ತಿಳಿಸಿದ್ದಾರೆ. ಅಂದಹಾಗೆ, ಕವಿರತ್ನ ನಾಗೇಂದ್ರ ಪ್ರಸಾದ್ ಬರೆದಿರುವ ಪ್ರೀತಿಯ ಓಲೆ ಹೀಗಿದೆ ಓದಿ...

  ಸೌತ್ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಪುನೀತ್, ಶೃತಿ ಹರಿಹರನ್ ಸೌತ್ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಪುನೀತ್, ಶೃತಿ ಹರಿಹರನ್

  ಬರೆಯುತ್ತಿದ್ದೇನೆ..

  ಬರೆಯುತ್ತಲೇ ಇದ್ದೇನೆ...

  ಬರೆಯುತ್ತಲೇ ಇರುತ್ತೇನೆ.....

  ಕೇಳುಗ ದೊರೆಗಳು

  ನೋಡುಗ ಪ್ರಭುಗಳು

  ಇಷ್ಟವಾದ ಚಿತ್ರಗೀತೆಯನ್ನು

  ಹೃದಯ ತುಂಬಿ ಕೊಂಡಾಡುತ್ತೀರಿ.

  ಅದಕ್ಕೇ ಚಿತ್ರಗೀತೆಗಳು ಅಜರಾಮರ.

  ಇತ್ತೀಚೆಗಷ್ಟೇ ಕೋಟ್ಯಾಂತರ ಹೃದಯಗಳನ್ನು ಆರ್ದ್ರಗೊಳಿಸಿದ ಹಾಡು...

  ಅಪ್ಪಾ...ಐ ಲವ್ ಯೂ..

  ಇದೋ...ಇದೀಗ ಆ ರಚನೆಗಾಗಿ ನನಗೆ "ಫಿಲಂ ಫೇರ್" ಪ್ರಶಸ್ತಿ ಸಿಕ್ಕಿದೆ.

  ಇದಕ್ಕೆ ಕಾರಣ ಕರ್ತರಾದ

  'ದ್ವಾರಕೀಶ್ ಚಿತ್ರ'

  ಯೋಗೀಶ್ ದ್ವಾರಕೀಶ್

  ತರುಣ್ ಸುಧೀರ್

  ಅರ್ಜುನ್ ಜನ್ಯ

  ಅನುರಾಧ ಭಟ್

  ಹಾಗೂ ತೆರೆಯಲ್ಲಿ ಹಾಡನ್ನು ಅರ್ಥಪೂರ್ಣ ವಾಗಿಸಿದ 4 ಮಂದಿ ಛಾಯಾಗ್ರಾಹಕರಿಗೂ..

  ದಿವಂಗತ ಕಾಶೀನಾಥ್ ಅವರಿಗೂ

  ಮಾನ್ವಿತಾ ಹರೀಶ್ ಅವರಿಗೂ

  'ಚೌಕ 'ಚಿತ್ರದ ಪ್ರತಿ ಕಲಾವಿದರಿಗೂ.. ತಂತ್ರಜ್ಞರಿಗೂ..

  ಎಲ್ಲಕ್ಕಿಂತ ಮುಖ್ಯವಾಗಿ ಹಾಡನ್ನು ಅಮರ ಗೊಳಿಸಿದ ನಿಮ್ಮಂತ ಅಸಂಖ್ಯಾತ ಪ್ರಿಯರಿಗೂ ನನ್ನ ಅನಂತ ಧನ್ಯವಾದಗಳು .

  ನಿಮ್ಮ ಪ್ರೀತಿ-ಆಶೀರ್ವಾದ ಇದ್ದರೆ ಸಾಕು

  ಕರಿಯಾ.. i love you

  ಅಪ್ಪಾ.. i love you

  ಅಮ್ಮಾ..i love you...

  ಹೀಗೆ ಎಲ್ಲರನ್ನೂ ಪ್ರೀತಿಸುತ್ತಾ ಬದುಕಿ ಬಿಡುತ್ತೇನೆ...

  ಪ್ರಿಯ ಕೇಳುಗ ಅನ್ನದಾತನೇ

  I LOVE YOU.

  English summary
  65th south filmfare awards : V Nagendra Prasad bags best lyricist filmfare award for 'Chowka' kannada movie 'Appa I Love You..' song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X