»   » 'ಗೂಗಲ್' ಟೀಸರ್ ಅನಾವರಣಗೊಳಿಸಿದ ಡಾ.ರಾಜ್-ವಿಷ್ಣು-ಶಂಕ್ರಣ್ಣ

'ಗೂಗಲ್' ಟೀಸರ್ ಅನಾವರಣಗೊಳಿಸಿದ ಡಾ.ರಾಜ್-ವಿಷ್ಣು-ಶಂಕ್ರಣ್ಣ

Posted By:
Subscribe to Filmibeat Kannada

ಶುಭಾ ಪೂಂಜಾ ಹಾಗೂ ವಿ ನಾಗೇಂದ್ರ ಪ್ರಸಾದ್ ಅವರ ವಿವಾಹ ಆಗಿಯೇ ಹೋಗಿದೆ ಎಂದು ದೊಡ್ಡ ಸುದ್ದಿ ಆಗಿದ್ದ ಸಿನಿಮಾ ಈಗ ಮತ್ತೆ ಸೌಂಡ್ ಮಾಡುತ್ತಿದೆ. ಈ ಹಿಂದೆ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದ ಗೂಗಲ್ ಚಿತ್ರವನ್ನ ವಿ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ನಟಿ ಶುಭಾ ಪೂಂಜಾ ನಾಗೇಂದ್ರ ಪ್ರಸಾದ್ ಜೋಡಿ ಆಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕಳೆದ ಬಾರಿ ಮದುವೆ ವಿಚಾರವಾಗಿ ಎಲ್ಲರ ಗಮನಸೆಳೆದಿದ್ದ ಸಿನಿಮಾ ತಂಡ ಈ ಬಾರಿ ಟೀಸರ್ ಬಿಡುಗಡೆ ಮಾಡಿ ಪ್ರೇಕ್ಷಕರನ್ನ ಆಶ್ಚರ್ಯ ಪಡುವಂತೆ ಮಾಡಿದೆ. ಗೂಗಲ್ ಚಿತ್ರದ ಟೀಸರ್ ಅನ್ನು ಡಾ.ರಾಜ್-ವಿಷ್ಣು-ಶಂಕ್ರಣ್ಣ ಬಿಡುಗಡೆ ಮಾಡಿದ್ದಾರೆ. ಅಯ್ಯೋ ಇದು ಹೇಗೆ ಸಾಧ್ಯ ಅಂತ ಯೋಚನೆ ಮಾಡಬೇಡಿ.

V. Nagendra Prasad directed Google movie Teaser and songs released

ಚಿತ್ರದ ಟೀಸರ್ ಬಿಡುಗಡೆ ಮಾಡಲು ವಿ ನಾಗೇಂದ್ರ ಪ್ರಸಾದ್ ವಿಶೇಷ ಅತಿಥಿಗಳು ಬರುತ್ತಾರೆ ಎನ್ನು ಸೂಚನೆ ನೀಡಿದ್ದರು. ಅದರಂತೆ ಚಿತ್ರರಂಗದ ಮೇರು ನಟರಾದ ಶಂಕರ್ ನಾಗ್, ವಿಷ್ಣುವರ್ಧನ್ ಹಾಗೂ ಡಾ ರಾಜ್ ಕುಮಾರ್ ಅವರ ಪುತ್ಥಳಿ ಮುಂದೆ ತನ್ನ ಗೂಗಲ್ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.

ವಿಭಿನ್ನವಾದ ಕತೆಯನ್ನ ಚಿತ್ರವನ್ನಾಗಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನಕ್ಕೆ ನಾಗೇಂದ್ರ ಪ್ರಸಾದ್ ಮುಂದಾಗಿದ್ದು ಚಿತ್ರದಲ್ಲಿ ದೀಪಕ್ ಹಾಗೂ ಅಮೃತಾ ರಾವ್ ಕೂಡ ಅಭಿನಯಿಸಿದ್ದಾರೆ. ಉತ್ಸವ್ ಮೂವೀಸ್ ಬ್ಯಾನರ್ ನಲ್ಲಿ ಗೂಗಲ್ ಸಿನಿಮಾ ನಿರ್ಮಾಣವಾಗಿದ್ದು ಚಿತ್ರದ ಹಾಡುಗಳು ಕುಡ ಬಿಡುಗಡೆ ಆಗಿದೆ.

V. Nagendra Prasad directed Google movie Teaser and songs released

ಗೂಗಲ್ ಚಿತ್ರವನ್ನ ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದ್ದು ಸದ್ಯ ಬಿಡುಗಡೆ ಆಗಿರುವ ಟೀಸರ್ ಮತ್ತು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

English summary
V. Nagendra Prasad directed Google movie Teaser and songs released.Shubha Poonja and Nagendra Prasad playing lead character in google movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X