»   » ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ವಿ.ನಾಗೇಂದ್ರ ಪ್ರಸಾದ್

ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ವಿ.ನಾಗೇಂದ್ರ ಪ್ರಸಾದ್

Written By:
Subscribe to Filmibeat Kannada

2017ರ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ವಿ.ನಾಗೇಂದ್ರ ಪ್ರಸಾದ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಜೋಸೈಮನ್ ಆಯ್ಕೆಯಾಗಿದ್ದಾರೆ.

ಕಳೆದ 2 ವರ್ಷದಿಂದ ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಎಂ.ಎಸ್.ರಮೇಶ್ ಅವರ ಅಧಿಕಾರಾವಧಿ ಇಂದಿಗೆ ಮುಕ್ತಾಯವಾಗಿತ್ತು. ಇದರಿಂದ ನಿರ್ದೇಶಕರ ಸಂಘದ ಚುನಾವಣೆ ಇಂದು ನಡೆಸಲಾಗಿದ್ದು, ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.

v-nagendra-prasad-elected-as-president-directors-associatio

ಉಳಿದಂತೆ ಚುನಾವಣೆಯಲ್ಲಿ ನಿರ್ದೇಶಕರಾದ ದಯಾಳ್ ಪದ್ಬನಾಭನ್, ಮುಸ್ಸಂಜೆ ಮಹೇಶ್, ಗುರುಪ್ರಸಾದ್, ಶಿವಕುಮಾರ್, ಮುರಳಿ ಮೋಹನ್, ಸುನಿಲ್ ಪುರಾಣಿಕ್, ಚಂದ್ರಹಾಸ್, ಸೇರಿದಂತೆ 15 ಜನ ನಿರ್ದೇಶಕರು ಸದಸ್ಯರಾಗಿ ಆಯ್ಕೆ ಆಗಿದ್ದಾರೆ.

ಅಂದಹಾಗೆ, ಚುನಾವಣೆ ಹಿರಿಯ ನಿರ್ದೇಶಕ ದೊರೆ ಭಗವಾನ್ ಮತ್ತು ಹಿರಿಯ ನಟ ಶಿವರಾಂ ಅವರ ನೇತ್ರತ್ವದಲ್ಲಿ ನಡೆದಿತ್ತು. 15 ನಿರ್ದೇಶಕರು ಚುನಾವಣೆಯಲ್ಲಿ ಭಾಗವಹಿಸಿದ್ದು, ಇವರಲ್ಲಿ ವಿ.ನಾಗೇಂದ್ರ ಪ್ರಸಾದ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

English summary
V.Nagendra Prasad, Elected As President of Directors Association
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada