»   » 'ಅಪೂರ್ವ' ಎರಡನೇ ಆವೃತ್ತಿ ಬಿಡುಗಡೆ: ಚಿತ್ರಮಂದಿರ ತುಂಬಿದೆ.!

'ಅಪೂರ್ವ' ಎರಡನೇ ಆವೃತ್ತಿ ಬಿಡುಗಡೆ: ಚಿತ್ರಮಂದಿರ ತುಂಬಿದೆ.!

Posted By:
Subscribe to Filmibeat Kannada

ಮೊನ್ನೆಯಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕ್ರೇಜಿ ಸ್ಟಾರ್ ರವಿಚಂದ್ರನ್, ತಮ್ಮ ಅಭಿಮಾನಿಗಳಿಗೆ ಒಂದು ವಿಶೇಷ ಉಡುಗೊರೆ ನೀಡಿದ್ರು.

'ಅಪೂರ್ವ' ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ, ತಮ್ಮ ಕ್ರೇಜಿ ಫ್ಯಾನ್ಸ್ ನಿರೀಕ್ಷೆಗೆ ತಕ್ಕಂತೆ ಕೊಂಚ ಬದಲಾವಣೆ ಮಾಡಲಾಗಿರುವ 'ಅಪೂರ್ವ' ಎರಡನೇ ವರ್ಷನ್ ಬಿಡುಗಡೆ ಮಾಡುವುದಾಗಿ ವಿ.ರವಿಚಂದ್ರನ್ ಘೋಷಿಸಿದ್ದರು. [ಕ್ರೇಜಿಸ್ಟಾರ್ ರವಿಚಂದ್ರನ್ ಪ್ರಿಯತಮೆ 'ಅಪೂರ್ವ' ಯಾರೀಕೆ?]


ಆಡಿದ ಮಾತಿನಂತೆ, 'ಅಪೂರ್ವ' ಚಿತ್ರದ ಎರಡನೇ ವರ್ಷನ್ ನಿನ್ನೆ (ಮೇ 31) ಸಂಜೆ 4.30ಕ್ಕೆ ಬಿಡುಗಡೆ ಆಗಿದೆ. ಅಚ್ಚರಿ ಅಂದ್ರೆ, ಬಹುತೇಕ ಚಿತ್ರಮಂದಿರಗಳಲ್ಲಿ 7.30 ರ ಶೋ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಮುಂದೆ ಓದಿ....


'ಅಪೂರ್ವ' ಎರಡನೇ ವರ್ಷನ್ ನಲ್ಲಿ ಬದಲಾವಣೆ ಏನು?

'ಅಪೂರ್ವ' ಚಿತ್ರದ ಎರಡನೇ ಆವೃತ್ತಿಯಲ್ಲಿ ಕೊಂಚ ಕತ್ರಿ ಪ್ರಯೋಗ ಮಾಡಲಾಗಿದೆ. ಮೊದಲ ಆವೃತ್ತಿಗೆ ಹೋಲಿಸಿದರೆ, ಎರಡನೇ ಆವೃತ್ತಿಯಲ್ಲಿ ಸನ್ನಿವೇಶಗಳು ಎಳೆದಂತೆ ಭಾಸವಾಗುವುದಿಲ್ಲ.[ಜನ್ಮದಿನದಂದು ರವಿಚಂದ್ರನ್ ತಮ್ಮ ಫ್ಯಾನ್ಸ್ ಗೆ ಕೊಟ್ಟ ಉಡುಗೊರೆ ಏನು?]


ಕಮರ್ಶಿಯಲ್ ಟಚ್ ನೀಡಲಾಗಿದೆ.!

ಕ್ರೇಜಿ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ 'ಅಪೂರ್ವ' ಎರಡನೇ ವರ್ಷನ್ ನಲ್ಲಿ ಸ್ವಲ್ಪ ಕಮರ್ಶಿಯಲ್ ಟಚ್ ನೀಡಲಾಗಿದೆ.[ವಿಮರ್ಶೆ: 'ಅಪೂರ್ವ' ಸುಂದರಿ, 'ಅಪೂರ್ಣ' ಮಾದರಿ]


ಮೊದಲೇ ಸಿದ್ಧಪಡಿಸಿಕೊಂಡಿದ್ದ ರವಿಚಂದ್ರನ್

'ಅಪೂರ್ವ' ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಲಭ್ಯವಾಗುತ್ತೆ ಅಂತ ರವಿಚಂದ್ರನ್ ರವರಿಗೆ ಮೊದಲೇ ಗೊತ್ತಿತ್ತು. ಹೀಗಾಗಿ, 'ಅಪೂರ್ವ' ಎರಡನೇ ಆವೃತ್ತಿ ಕೂಡ ಮೊದಲೇ ರೆಡಿ ಮಾಡಿಟ್ಟುಕೊಂಡಿದ್ದರು.


ರವಿಚಂದ್ರನ್ ಗೆ ವಿಶ್ವಾಸ ಇದೆ.!

'ಅಪೂರ್ವ' ಮಾಮೂಲಿ ಸಿನಿಮಾಗಳಂತೆ ಇಲ್ಲ. ಎಂದಿನ ಸಿನಿಮಾಗಳಾಗಿದ್ದರೆ, ವರ್ಷದ ಹಿಂದೆಯೇ 'ಅಪೂರ್ವ' ಬಿಡುಗಡೆ ಆಗುತ್ತಿತ್ತು. 'ಅಪೂರ್ವ' ಚಿತ್ರವನ್ನು ಅರ್ಥ ಮಾಡಿಕೊಳ್ಳಲು ಪ್ರೇಕ್ಷಕರಿಗೆ ಕೊಂಚ ಸಮಯ ಅಗತ್ಯ ಇದೆ ಅಂತ ವಿಶ್ವಾಸ ವ್ಯಕ್ತಪಡಿಸುತ್ತಾರೆ ರವಿಚಂದ್ರನ್.


'ಪ್ರೇಮಲೋಕ' ಚಿತ್ರಕ್ಕೂ ಹೀಗೆ ಆಗಿತ್ತು.!

ರವಿಚಂದ್ರನ್ ರವರ ಬ್ಲಾಕ್ ಬಸ್ಟರ್ 'ಪ್ರೇಮಲೋಕ' ಚಿತ್ರಕ್ಕೂ ಮೊದಲು ಹೀಗೆ ಆಗಿತ್ತು. ನಂತರ ಅದೇ 'ಪ್ರೇಮಲೋಕ' ಇತಿಹಾಸ ಸೃಷ್ಟಿಸಿದ್ದು, ನಿಮಗೆ ಬಿಡಿಸಿ ಹೇಳಬೇಕಾಗಿಲ್ಲ.


'ಅಪೂರ್ವ' ಎರಡನೇ ಆವೃತ್ತಿ ನೋಡ್ತೀರಾ.?

ಬದಲಾವಣೆಗಳೊಂದಿಗೆ ಬಿಡುಗಡೆ ಆಗಿರುವ 'ಅಪೂರ್ವ' ಚಿತ್ರದ ಎರಡನೇ ಆವೃತ್ತಿ ನೋಡ್ತೀರಾ? ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ....


English summary
Crazy Star V.Ravichandran's One Man Show 'Apoorva' second version is released. Book your tickets now.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada