»   » ರವಿಚಂದ್ರನ್ ಸಿನಿಮಾ ಡೈಲಾಗ್ ಸೃಷ್ಡಿಸಿದೆ ಹೊಸ ವಿವಾದ

ರವಿಚಂದ್ರನ್ ಸಿನಿಮಾ ಡೈಲಾಗ್ ಸೃಷ್ಡಿಸಿದೆ ಹೊಸ ವಿವಾದ

Posted By:
Subscribe to Filmibeat Kannada
ರವಿಚಂದ್ರನ್ ಸಿನಿಮಾ ಡೈಲಾಗ್ ಸೃಷ್ಡಿಸಿದೆ ಹೊಸ ವಿವಾದ | Filmibeat Kannada

ವಿವಾದಗಳನ್ನ ಅಂಟಿಸಿಕೊಳ್ಳದೆ ತಾನಾಯ್ತು ತಮ್ಮ ಸಿನಿಮಾ ಆಯ್ತು ಎಂದು ಸೈಲೆಂಟ್ ಆಗಿರುವ ನಟ ನಿರ್ದೇಶಕ ವಿ ರವಿಚಂದ್ರನ್. ಆದರೆ ರವಿಚಂದ್ರನ್ ಸಿನಿಮಾದಲ್ಲಿ ಹೇಳಿರುವ ಒಂದು ಡೈಲಾಗ್ ಹೊಸ ವಿವಾದ ಸೃಷ್ಠಿ ಮಾಡಿದೆ. ರವಿಚಂದ್ರನ್ ಹಾಗೂ ಚಿರಂಜೀವ ಸರ್ಜಾ ಅಭಿನಯದ ಹೊಸ ಚಿತ್ರ ಸೀಜರ್ ನಲ್ಲಿ ರವಿಮಾಮ ಹೇಳಿರುವ ಡೈಲಾಗ್ ಕೇಳಿರುವ ಮುಸ್ಲಿಂಮರು ಚಿತ್ರತಂಡದ ವಿರುದ್ದ ಕೋಪಗೊಂಡಿದ್ದಾರೆ.

ಸೀಜರ್ ಸಿನಿಮಾದ ಟ್ರೇಲರ್ ಜನವರಿ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಟ್ರೇಲರ್ ನಲ್ಲಿ ರವಿಚಂದ್ರನ್ "ಹಸುವಿನ ಕುತ್ತಿಗೆ ಕಡಿಯುವುದು ಒಂದೇ, ತಾಯಿಯ ತಲೆ ಹಿಡಿಯುವುದು ಒಂದೇ" ಎನ್ನುವ ಡೈಲಾಗ್ ಹೇಳಿದ್ದಾರೆ. ಈ ಡೈಲಾಗ್ ಮುಸಲ್ಮಾನರ ಕೋಪಕ್ಕೆ ಕಾರಣವಾಗಿದೆ.

V Ravichandrans dialogue on beef from movie Seizer criticism

RJ Rapid ರಶ್ಮಿ ಶೋಗೆ ಯಾರೂ ಹೋಗಬೇಡಿ, ಎಲ್ಲರೂ ಬಹಿಷ್ಕಾರ ಹಾಕಿ.!

ಟ್ರೇಲರ್ ನಲ್ಲಿ ಸಂಭಾಷಣೆ ನೋಡಿರುವ ಮುಸ್ಲಿಂ ಸಂಘಟನೆಯಾದ Sdpi ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀರ್ ಈ ಬಗ್ಗೆ ವಾಣಿಜ್ಯ ಮಂಡಳಿಯಲ್ಲಿ ಮನವಿ ಮಾಡಲು ಮುಂದಾಗಿದ್ದಾರೆ. ಸಿನಿಮಾದಲ್ಲಿ ಬಳಸಿರುವ ಸಂಭಾಷಣೆ ನಮ್ಮ ಸಮುದಾಯಕ್ಕೆ ನೋವು ಉಂಟು ಮಾಡುತ್ತದೆ. ಆದ್ದರಿಂದ ದಯಮಾಡಿ ಆ ಡೈಲಾಗ್ ತೆಗೆದು ಹಾಕಿ ಎಂದು ಕೇಳಿಕೊಳ್ಳಲಿದ್ದಾರೆ.

V Ravichandrans dialogue on beef from movie Seizer criticism

ಸೀಜರ್ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಹಾಗೂ ರವಿಚಂದ್ರ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದು ಪಾರೂಲ್ ಯಾದವ್ ನಾಯಕಿಯಾಗಿ ಅಭಿನಯಿಸಿದ್ದಾರೆ. ವಿನಯ್ ಕೃಷ್ಣ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.

English summary
Kannada movie Ravichandran's seizer movie is aimed at the controversy. The film's dialogue should be removed as Muslim leaders have appealed

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X