»   » ಚಂದನ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥದ ಬಗ್ಗೆ ಸತ್ಯ ಹೇಳಿದ ವೈಷ್ಣವಿ ಗೌಡ

ಚಂದನ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥದ ಬಗ್ಗೆ ಸತ್ಯ ಹೇಳಿದ ವೈಷ್ಣವಿ ಗೌಡ

Posted By:
Subscribe to Filmibeat Kannada

ಸೋಶಿಯಲ್ ಮೀಡಿಯಾದಲ್ಲಿ ಚಂದನ್ ಶೆಟ್ಟಿ ಮತ್ತು 'ಅಗ್ನಿಸಾಕ್ಷಿ' ಖ್ಯಾತಿಯ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥದ್ದೇ ಸುದ್ದಿ. ಇಬ್ಬರು ಎಂಗೇಜ್ ಮೆಂಟ್ ಮಾಡಿಕೊಳ್ಳುತ್ತಿದ್ದು, ಆದಷ್ಟೂ ಬೇಗ ಮದುವೆ ಕೂಡ ಆಗಲಿದ್ದಾರೆ ಎಂಬ ಸುದ್ದಿ ಪಾದರಸದಂತೆ ಹಬ್ಬಿತ್ತು.

ಈ ಬಗ್ಗೆ ಯಾರನ್ನ ಕೇಳೋದು ಎನ್ನುವಷ್ಟರಲ್ಲಿ Rap ಸಿಂಗರ್ ಚಂದನ್ ಶೆಟ್ಟಿ ಫೇಸ್ ಬುಕ್ ಲೈವ್ ಗೆ ಬಂದು ಸ್ಪಷ್ಟನೆ ನೀಡಿದ್ರು. ಆದ್ರೆ, ಇದು ಕೇವಲ ಚಂದನ್ ಅವರ ಕ್ಲಾರಿಫೈ ಮಾತ್ರ ಆಗಿತ್ತು. ಈ ಬಗ್ಗೆ ವೈಷ್ಣವಿ ಗೌಡ ಏನ್ ಹೇಳ್ತಾರೆ ಎಂಬ ಕುತೂಹಲ ಕಾಡುತ್ತಿತ್ತು.

ಕೊನೆಗೂ ವೈಷ್ಣವಿ ಕೂಡ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ನಿಶ್ಚಿತಾರ್ಥ ಸುದ್ದಿ ಬಗ್ಗೆ ಸತ್ಯ ಬಯಲು ಮಾಡುವ ಮೂಲಕ ಎಲ್ಲರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಮುಂದೆ ಓದಿ.....

ನನ್ನ ಫೇಸ್ ಬುಕ್ ಅಕೌಂಟ್ ಇಲ್ಲ

''ಚಂದನ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದೇನೆ'' ಎಂದು ವೈಷ್ಣವಿ ಗೌಡ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದರು ಎನ್ನಲಾಗಿತ್ತು. ಆದ್ರೆ, ಇದನ್ನ ಅಲ್ಲೆಗಳೆದಿರುವ ವೈಷ್ಣವಿ, ನನ್ನದ್ದು ಫೇಸ್ ಬುಕ್ ಅಕೌಂಟ್ ಇಲ್ಲ, ನಾನು ಇನ್ಸ್ಟಾಗ್ರಾಮ್ ನಲ್ಲಿ ಮಾತ್ರ ಇರೋದು ಎಂದು ಸ್ಪಷ್ಟನೆ ಮಾಡಿದ್ದಾರೆ.

ಚಂದನ್ ಶೆಟ್ಟಿ-ವೈಷ್ಣವಿ ಗೌಡ ಮದುವೆ ಆಗ್ತಾರಂತೆ.! ಇದು ನಿಜವೇ.?

ಇದೆಲ್ಲವೂ ಸುಳ್ಳು

''ಇದ್ಯಾರೋ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ, ಪೋಸ್ಟ್ ಮಾಡಿದ್ದಾರೆ. ಅದು ಟ್ರೋಲ್ ಆಗಿದೆ. ಇದೆಲ್ಲವೂ ಸುಳ್ಳು. ನಾನು ಎಂಗೇಜ್ ಮೆಂಟ್ ಆಗ್ತಿಲ್ಲ, ಸದ್ಯಕ್ಕೆ ಮದುವೆನೂ ಆಗ್ತಿಲ್ಲ'' ಎಂದು ಈ ವದಂತಿಗೆ ಬ್ರೇಕ್ ಹಾಕಿದ್ದಾರೆ.

ಮದುವೆಯ ಬಗ್ಗೆ ಮನಸ್ಸಿನ ಮಾತನ್ನು ಹಂಚಿಕೊಂಡ ಚಂದನ್

ನಮಗೂ ಪರ್ಸನಲ್ ಲೈಫ್ ಇದೆ

''ಕಲಾವಿದರಿಗೆ ಪರ್ಸನಲ್ ಜೀವನ ಇರುತ್ತೆ. ತಮಾಷೆ ವಿಷ್ಯಗಳು ಅಂದ್ರೆ ಓಕೆ. ಇದು ಜೀವನದ ಪ್ರಶ್ನೆ. ಇದರಿಂದ ನಮ್ಮ ತಂದೆ-ತಾಯಿಗೂ ನೋವಾಗುತ್ತೆ. ದಯವಿಟ್ಟು ಎಲ್ಲರಲ್ಲೂ ಕೇಳಿಕೊಳ್ಳುವುದು ಇಷ್ಟೇ. ಖಾಸಗಿ ಜೀವನದ ಬಗ್ಗೆ ಇಂತಹ ಸುದ್ದಿಗಳನ್ನ ಮಾಡಬೇಡಿ''

ಚಂದನ್ ಶೆಟ್ಟಿ ಏನು ಹೇಳಿದ್ರು

ಈ ಬಗ್ಗೆ ಮಾತನಾಡಿದ್ದ ಚಂದನ್ ಶೆಟ್ಟಿ, ವೈಷ್ಣವಿ ಅವರನ್ನ ಎರಡು ಭಾರಿ ಧಾರಾವಾಹಿಯಲ್ಲಿ ನೋಡಿದ್ದೇನೆ. ಅವರ ಪರಿಚಯ ಕೂಡ ನನಗಿಲ್ಲ. ಇನ್ನೂ ಮದುವೆಯ ಮಾತು ಎಲ್ಲಿಂದ ಬರುತ್ತೆ. ಬಿಗ್ -ಬಾಸ್ 5 ಗೆದ್ದಿರುವ ಖುಷಿ ಇದೆ, ಜವಾಬ್ದಾರಿ ಹೆಚ್ಚಾಗಿದೆ. ಆದ್ದರಿಂದ ಮದುವೆಯ ಯೋಚನೆ ಸದ್ಯಕ್ಕೆ ಇಲ್ಲ. ಈಗ ಇರುವ ಯಶಸ್ಸನ್ನ ತುಂಬಾ ಚೆನ್ನಾಗಿ ಬಳಸಿಕೊಳ್ಳುತ್ತೇನೆ. ನಂತರ ಮದುವೆ ಯೋಚನೆ ಎಂದಿದ್ದಾರೆ.

English summary
Vaishnavi gowda has spoken about the gossip that Chandan and Vaishnavi are getting married, Vaishnavi has confirmed that he will not be married by coming to Facebook Live.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada