ಕುಮಾರಣ್ಣನ ಪರವಾಗಿ ನಿಂತರು ಧಾರಾವಾಹಿ ನಾಯಕಿಯರು
Recommended Video

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಬೆರೆಳೆಣಿಕೆ ದಿನಗಳಷ್ಟೇ ಬಾಕಿ ಇದೆ. ಇನ್ನು ಒಂದು ದಿನದಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಈ ವರ್ಷ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಮೂಡಿದೆ. ಸ್ಟಾರ್ ಕಲಾವಿದರು ತಮಗೆ ಆಪ್ತರಾಗಿರುವ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ.
ಪ್ರತಿ ಪಕ್ಷದವರು ತಮ್ಮದೇ ಆದ ಹೊಸ ಹೊಸ ರೀತಿಯಲ್ಲಿ ಪ್ರಚಾರ ತಂತ್ರಗಳನ್ನ ರೂಪಿಸಿಕೊಂಡಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದವರು ದೊಡ್ಡ ದೊಡ್ಡ ಸ್ಟಾರ್ ಗಳನ್ನ ಕರೆತಂದು ಜನರ ಬಳಿ ಮತಯಾಚನೆ ಮಾಡಿಸುತ್ತಿದ್ದಾರೆ. ಆದರೆ ಜೆಡಿಎಸ್ ಪಕ್ಷದವರು ತಮ್ಮ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಹೊಸ ತಂತ್ರವನ್ನು ಹುಡುಕಿಕೊಂಡಿದ್ದಾರೆ.
ಪ್ರತಿ ನಿತ್ಯ ಕಿರುತೆರೆಯ ಮೂಲಕ ಮನೆ ಮನೆಗಳಿಗೆ ಬಂದು ಜನರನ್ನ ರಂಜಿಸುವ ಕಲಾವಿದರನ್ನ ಜೆಡಿಎಸ್ ಪಕ್ದ ಅಭ್ಯರ್ಥಿಗಳು ಸ್ಟಾರ್ ಪ್ರಚಾರಕರಾಗಿ ಬಳಸಿಕೊಂಡಿದ್ದಾರೆ. ಹಾಗಾದರೆ ಯಾವ ಯಾವ ಸೀರಿಯಲ್ ಕಲಾವಿದರು ರಸ್ತೆಗಿಳಿದು ಮತಯಾಚನೆ ಮಾಡಿದರು. ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

ಅಮೂಲ್ಯ ಮಾವನ ಪರವಾಗಿ ಸನ್ನಿಧಿ ಪ್ರಚಾರ
ಕಿರುತೆರೆಯ ನಟಿ ವೈಷ್ಣವಿ ಹಾಗೂ ಅಮೂಲ್ಯ ಸ್ನೇಹಿತರು ಎನ್ನುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ. ಹಾಗಾಗಿ ಅಮೂಲ್ಯ ಅವರ ಮಾವ ರಾಮಚಂದ್ರ ಅವರ ಪರವಾಗಿ ಆರ್ ಆರ್ ನಗರದಲ್ಲಿ ವೈಷ್ಣವಿ ಚುನಾವಣಾ ಪ್ರಚಾರ ಮಾಡಿದ್ದಾರೆ.

ಮತಯಾಚನೆ ಮಾಡಿದ ನಾಗಿಣಿ
ಸಿನಿಮಾ ಹಾಗೂ ಧಾರಾವಾಹಿ ನಟಿ ದೀಪಿಕಾ ದಾಸ್ ಕೂಡ ಜೆಡಿಎಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದಾರೆ. ದೀಪಿಕಾ ದಾಸ್ ನಾಗಿಣಿ ಧಾರಾವಾಹಿ ಮೂಲಕ ಜನಮನ ಗೆದ್ದಿದ್ದಾರೆ. ಆದ್ದರಿಂದ ಅವರನ್ನೇ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ.

ಪ್ರಚಾರಕ್ಕೆ ಬಂದ ಪುಟ್ಟಗೌರಿ
ಜೆಡಿಎಸ್ ಪಕ್ಷದ ಪರವಾಗಿ ನಟಿ ರಂಜನಿ ರಾಘವನ್ ಕೂಡ ಮತಯಾಚನೆ ಮಾಡಿದ್ದಾರೆ, ಜೆಡಿಎಸ್ ಪಕ್ಷಕ್ಕೆ ನಿಮ್ಮ ಮತ ನಿಡಿ ಎಂದು ರೋಡ್ ಶೋ ಮಾಡಿದ್ದಾರೆ. ಈ ಮೂಲಕ ಬರೀ ಟಿವಿಯಲ್ಲಿ ನೋಡುತ್ತಿದ್ದ ಸ್ಟಾರ್ ಗಳನ್ನ ಮನೆಯ ಮುಂದೆ ನೋಡಿ ವೀಕ್ಷಕರು ಖುಷಿಯಾಗಿದ್ದಾರೆ.

ಜೆಡಿಎಸ್ ನಲ್ಲಿದ್ದಾರೆ ಸ್ಟಾರ್ಸ್
ಜೆಡಿಎಸ್ ಪಕ್ಷದಲ್ಲಿ ಇಬ್ಬರು ನಾಯಕಿಯರಿದ್ದು ಅವರನ್ನು ಸ್ಟಾರ್ ಪ್ರಚಾರಕರನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ನಟಿ ಅಮೂಲ್ಯ ಹಾಗೂ ಪೂಜಾ ಗಾಂಧಿ ಎಲ್ಲೆಡೆ ಪಕ್ಷದ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ.


Click it and Unblock the Notifications











