Don't Miss!
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Sports
IND vs NZ 2nd T20: ಭಾರತ vs ನ್ಯೂಜಿಲೆಂಡ್ ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- News
ಫೇಸ್ಬುಕ್ ಪ್ರೀತಿ: ಉತ್ತರ ಪ್ರದೇಶದ ಯುವಕನನ್ನು ಮದುವೆಯಾಗಲು ಸ್ವೀಡನ್ನಿಂದ ಬಂದ ಯುವತಿ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಎಂಗೇಜ್ ಮೆಂಟ್ ವಿವಾದದ ಬಳಿಕ ನನ್ನ ಮಗಳಲ್ಲಿ ಲವಲವಿಕೆಯೇ ಇಲ್ಲ: ವೈಷ್ಣವಿ ತಂದೆ
ಕನ್ನಡ ಕಿರುತೆರೆ ಹಾಗೂ ಚಲನಚಿತ್ರ ನಟಿ ವೈಷ್ಣವಿ ಗೌಡ ಸದ್ಯ ವಿವಾದವೊಂದರಲ್ಲಿ ಸಿಲುಕಿದ್ದಾರೆ. ಹೌದು, ನಟಿ ವೈಷ್ಣವಿ ಗೌಡ ಈ ಹಿಂದೆ ವಿರಾಜ್ ಎಂಬ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದ ವಿದ್ಯಾಭರಣ್ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಹಾಗೂ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಸುದ್ದಿ ವೈರಲ್ ಆಗಲು ಕಾರಣ ವೈಷ್ಣವಿ ಗೌಡ ಹಾಗೂ ವಿದ್ಯಾಭರಣ್ ಪರಸ್ಪರ ಹಾರ ಬದಲಿಸಿಕೊಂಡಿದ್ದ ಫೋಟೊವೊಂದು ಲೀಕ್ ಆಗಿದ್ದು.
ಆದರೆ ಈ ಫೋಟೊ ಲೀಕ್ ಆಗುತ್ತಿದ್ದಂತೆ ಕನ್ನಡದ ಅನಾಮಧೇಯ ನಟಿಯೋರ್ವಳ ಆಡಿಯೊ ವೈರಲ್ ಆಯಿತು. ವೈಷ್ಣವಿ ಗೌಡ ಮದುವೆಯಾಗಲು ತೀರ್ಮಾನಿಸಿರುವ ಹುಡುಗ ವಿದ್ಯಾಭರಣ್ ಗುಣ ಸರಿ ಇಲ್ಲ, ನನಗೂ ಸೇರಿದಂತೆ ಹಲವು ಹುಡುಗಿಯರಿಗೆ ಅಸಭ್ಯವಾಗಿ ಸಂದೇಶಗಳನ್ನು ಕಳುಹಿಸಿದ್ದಾನೆ. ಇಂತಹವನಿಂದ ವೈಷ್ಣವಿ ಗೌಡ ರೀತಿಯ ಒಳ್ಳೆ ಹುಡುಗಿ ಬದುಕು ಹಾಳಾಗಬಾರದು ಎಂದು ಆ ನಟಿ ಆಡಿಯೊದಲ್ಲಿ ಹೇಳಿದ್ದಳು.
ಹೀಗೆ ಈ ಆಡಿಯೊ ವೈರಲ್ ಆಗುತ್ತಿದ್ದಂತೆ ನಟಿ ವೈಷ್ಣವಿ ಗೌಡ, ಮದುವೆ ಸಂಬಂಧವನ್ನು ಇಲ್ಲಿಗೆ ನಿಲ್ಲಿಸಿದ್ದೇವೆ, ನೀವೂ ಸಹ ಇದನ್ನೆಲ್ಲಾ ಇಲ್ಲಿಗೆ ನಿಲ್ಲಿಸಿಬಿಡಿ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಬರೆದುಕೊಳ್ಳುವುದರ ಮೂಲಕ ಮನವಿ ಮಾಡಿಕೊಂಡಿದ್ದರ. ಅತ್ತ ವಿದ್ಯಾಭರಣ್ ಹಾಗೂ ವೈಷ್ಣವಿಯ ಪೋಷಕರು ನಿಶ್ಚಿತಾರ್ಥ ನಡೆದಿಲ್ಲ, ಇದು ಹುಡುಗಿ ನೋಡುವ ಶಾಸ್ತ್ರದ ಫೋಟೊವಷ್ಟೇ ಎಂದು ಸ್ಪಷ್ಟನೆ ನೀಡಿದ್ದರು. ಇನ್ನು ಇಷ್ಟೆಲ್ಲಾ ಬೆಳವಣಿಗೆಗಳು ನಡೆದು ವಿವಾದ ಮತ್ತೊಂದು ಹಂತ ತಲುಪಿದ ನಂತರ ವೈಷ್ಣವಿ ಗೌಡ ಅವರ ಪೋಷಕರು ಇಂದು ( ನವೆಂಬರ್ 26 ) ಪತ್ರಿಕಾಗೋಷ್ಠಿಯೊಂದನ್ನು ನಡೆಸುವುದರ ಮೂಲಕ ಇದ್ದ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲು ಮುಂದಾಗಿದ್ದಾರೆ.

ಪತ್ರಿಕಾಗೋಷ್ಠಿಗೆ ಬಾರದ ವೈಷ್ಣವಿ
ಇನ್ನು ಪತ್ರಿಕಾಗೋಷ್ಠಿಯಲ್ಲಿ ವೈಷ್ಣವಿ ಗೌಡ ತಂದೆ ಹಾಗೂ ತಾಯಿ ಮಾತ್ರ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವೈಷ್ಣವಿ ಗೌಡ ಅವರೂ ಸಹ ಮಾತನಾಡಿದ್ದರೆ ಮತ್ತಷ್ಟು ಸ್ಪಷ್ಟತೆ ಸಿಗುತ್ತಿತ್ತು ಎಂದು ಪತ್ರಕರ್ತರು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ವೈಷ್ಣವಿ ಪೋಷಕರು ಈ ವಿವಾದದ ಬಳಿಕ ಅವಳ ಮನಸ್ಸು ಸರಿ ಇಲ್ಲ ಹಾಗಾಗಿ ಇಂತಹ ಸಂದರ್ಭದಲ್ಲಿ ಅವಳು ಮಾತನಾಡುವುದು ಬೇಡ, ಪರಿಸ್ಥಿತಿ ಸರಿ ಹೋದ ಬಳಿಕ ಖಂಡಿತ ಅವಳು ಈ ಕುರಿತಾಗಿ ಮಾತನಾಡಿ ಸ್ಪಷ್ಟನೆ ನೀಡಲಿದ್ದಾಳೆ ಎಂದು ವೈಷ್ಣವಿ ತಾಯಿ ತಿಳಿಸಿದರು.

ಮಗಳಲ್ಲಿ ಲವಲವಿಕೆ ಇಲ್ಲ
ಇದೇ ವೇಳೆ ಮಗಳ ಮನಸ್ಥಿತಿ ಎಷ್ಟು ಹದಗೆಟ್ಟಿದೆ ಎಂಬುದನ್ನು ವಿವರಿಸಿದ ವೈಷ್ಣವಿ ಗೌಡ ತಂದೆ 'ನಿನ್ನೆಯಷ್ಟೇ ಆಕೆಯನ್ನು ಒಂದು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದೆ. ಈ ಹಿಂದೆ ಅವಳ ಮುಖದಲ್ಲಿದ್ದ ಲವಲವಿಕೆ ಕಾಣಲೇ ಇಲ್ಲ. ಅಂತಹ ಪರಿಸ್ಥಿತಿಯಲ್ಲಿ ಇರುವ ಹುಡುಗಿಯನ್ನು ಕರೆದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡು ಎನ್ನುವುದು ತಪ್ಪು' ಎಂದು ಹೇಳಿದರು.

ಮತ್ತೆ ಕೆಲಸದತ್ತ ಮರಳಲಿದ್ದಾಳೆ
ಇನ್ನು ವೈಷ್ಣವಿ ಗೌಡ ಈಗಾಗಲೇ ದೊಡ್ಡ ಧಾರಾವಾಹಿಯಲ್ಲಿ ಲೀಡ್ ರೋಲ್ ಮಾಡಿದ್ದು, ಅದರ ಪ್ರೊಮೊ ಕೂಡ ರೆಡಿ ಇದೆ. ಆದಷ್ಟು ಬೇಗ ಅದು ಬಿಡುಗಡೆಗೊಳ್ಳಲಿದ್ದು, ದೊಡ್ಡ ಚಾನೆಲ್‌ನಲ್ಲಿಯೇ ಈ ಧಾರಾವಾಹಿ ಪ್ರಸಾರವಾಗಲಿದೆ ಎಂದು ವೈಷ್ಣವಿ ಗೌಡ ಪೋಷಕರು ಆಕೆ ಮತ್ತೆ ಕೆಲಸದ ಕಡೆ ಮುಖ ಮಾಡಲಿದ್ದಾಳೆ ಎಂಬುದನ್ನು ತಿಳಿಸಿದರು.