»   » ಪ್ರೇಮಿಗಳ ದಿನದ ಸ್ಪೆಷಲ್: ಅಂಬಿಗೆ ಸುಮ ಅವರ ಮೇಲೆ ಲವ್ ಆಗಿದ್ಹೇಗೆ?

ಪ್ರೇಮಿಗಳ ದಿನದ ಸ್ಪೆಷಲ್: ಅಂಬಿಗೆ ಸುಮ ಅವರ ಮೇಲೆ ಲವ್ ಆಗಿದ್ಹೇಗೆ?

Posted By:
Subscribe to Filmibeat Kannada

ನಮ್ಮ ಸಿನಿ ಇಂಡಸ್ಟ್ರಿಯಲ್ಲಿ ಅದೆಷ್ಟೋ ಜೋಡಿಗಳು ಪ್ರೇಮ ವಿವಾಹ ಆದರೂ ಕೇವಲ ಮೂರೇ ವರ್ಷಕ್ಕೆ ಬ್ರೇಕ್ ಹಾಕಿಕೊಂಡು ಬೇರೆ ಬೇರೆ ಆಗಿ ಸುದ್ದಿಯಾಗಿರುವ ಹಲವಾರು ಪ್ರಸಂಗಗಳು ಇವೆ.

ಆದರೆ ಇದಕ್ಕೆಲ್ಲಾ, ವಿರುದ್ಧ ಎನ್ನುವಂತೆ ಒಂದು ಸಣ್ಣ ಮನಸ್ತಾಪವೂ ಇಲ್ಲದೆ ಬರೋಬ್ಬರಿ ಕಾಲು ಶತಮಾನದ ಸುಂದರ ದಾಂಪತ್ಯ ಪೂರೈಸಿದ ಸ್ಯಾಂಡಲ್ ವುಡ್ ನ ಏಕೈಕ ಜೋಡಿ ಎಂದರೆ ಅದು ರೆಬೆಲ್ ಅಂಬರೀಶ್ ಮತ್ತು ಕ್ಯೂಟ್ ಸುಮಲತಾ ಅವರ ಜೋಡಿ.[ಕಣ್ಣೀರಿಟ್ಟು, ಕೈಮುಗಿದು, ಅಭಿಮಾನಿಗಳೇ 'ದೇವರು' ಎಂದು ಗದ್ಗದಿತರಾದ ಅಂಬಿ]

ಯಾರೆಲ್ಲಾ ಯುವ ಪ್ರೇಮಿಗಳು ಪ್ರೀತಿಸಿ ಮದುವೆಯಾಗಬೇಕು ಅಂದುಕೊಂಡಿದ್ದಾರೋ, ಅವರಿಗೆಲ್ಲಾ ಪ್ರೇಮಿಸಿ ಮದುವೆಯಾಗಿರುವ ಕನ್ನಡ ಚಿತ್ರರಂಗದ ಈ ಸುಂದರ ಜೋಡಿಯೇ ಸ್ಫೂರ್ತಿ.

ಅಂದಹಾಗೆ ಕನ್ನಡ ಚಿತ್ರರಂಗದ ರೆಬೆಲ್ ಅಂಬರೀಶ್ ಮತ್ತು ಸುರಸುಂದರಾಂಗಿ ನಟಿ ಸುಮಲತಾ ಅಂಬರೀಶ್ ಅವರ ಧೀರ್ಘ ಕಾಲದ ಪ್ರೇಮ ಪ್ರಸಂಗದ ಬಗ್ಗೆ ನಿಮಗೆ ತಿಳಿಯಬೇಕಾ? ಹಾಗಿದ್ದರೆ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ಮೊದಲನೇ ಭೇಟಿ ವುಡ್ ಲ್ಯಾಂಡ್ ಹೋಟೆಲ್

ಸೂಪರ್ ಜೋಡಿ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ನಟಿ ಸುಮಲತಾ ಅವರು ಮೊಟ್ಟ ಮೊದಲ ಬಾರಿಗೆ ಭೇಟಿಯಾಗಿದ್ದು, ವುಡ್ ಲ್ಯಾಂಡ್ ಹೋಟೆಲ್ ನಲ್ಲಿ. ಯಾವುದೋ ಚಿತ್ರದ ಶೂಟಿಂಗ್ ನಡೆಯುತ್ತಿರುವಾಗ ಅಲ್ಲಿಗೆ ಹೋಗಿದ್ದ ಸುಮಲತಾ ಅವರು ಮೊದಲ ಬಾರಿಗೆ ಅಂಬಿ ಅವರನ್ನು ನೋಡಿದ್ದರು. ಒಬ್ಬರನ್ನೊಬ್ಬರು ನೋಡಿದ್ದರು ಅಂದು ಮಾತಾಡಿರಲಿಲ್ಲ. ಆದರೆ ಅವರಿಬ್ಬರನ್ನು ಮತ್ತಷ್ಟು ಹತ್ತಿರವಾಗಿಸಿದ್ದು, 'ಆಹುತಿ' ಸಿನಿಮಾ.[ಕುಚ್ಚಿಕ್ಕು ಗೆಳೆಯ ವಿಷ್ಣು ನೆನೆದು ಭಾವುಕರಾದ ಅಂಬರೀಶ್]

ಸುಮಲತಾ ಸೌಂದರ್ಯಕ್ಕೆ ಮಾರು ಹೋದ ಅಂಬಿ

ಸುಮಲತಾ ಅವರ ಸೌಂದರ್ಯ ಮತ್ತು ಅವರ ಕಣ್ಣುಗಳು ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಬಹಳ ಆಕರ್ಷಿಸಿತ್ತಂತೆ, ಇದು ಅಂಬಿ ಅವರಿಗೆ ಸುಮಲತಾ ಅವರು ಇಷ್ಟವಾಗಲು ಕಾರಣವಾದರೆ, ಅಂಬಿ ಅವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದ ಪರಿ ಹಾಗೂ ಎಲ್ಲರೊಂದಿಗೆ ನಗುನಗುತ್ತಾ ಬೆರೆಯುತ್ತಿದ್ದ ಸ್ವಭಾವ, ಸುಮಲತಾ ಅವರಿಗೆ ಇಷ್ಟ ಆಯ್ತಂತೆ.[ಜೀವಂತ ದಂತಕಥೆ ಅಂಬರೀಶ್ ರವರ 'ರೆಬೆಲ್' ಜೀವನದ ಸತ್ಯಕಥೆ]

ಪ್ರೀತಿ ವಿಷಯ ಮನೆಯಲ್ಲಿ ಮುಚ್ಚಿಟ್ಟ ಅಂಬಿ

ಸುಮಲತಾ ಅವರಿಗೆ ಮೊದಲಿಗೆ ಅಂಬಿ ಅವರೇ 'ಐ ಲವ್ ಯೂ' ಹೇಳುವ ಮೂಲಕ ಪ್ರೇಮ ನಿವೇದನೆ ಮಾಡಿಕೊಂಡರು. ಅಂಬಿ ಅವರ ಪ್ರೇಮವನ್ನು ಸುಮಲತಾ ಅವರು ಒಪ್ಪಿಕೊಂಡರು. ಆಮೇಲೆ ಕೆಲವು ಕಾಲ ಒಟ್ಟಿಗೆ ಓಡಾಡುತ್ತಾ ಮರ ಸುತ್ತಿದರೂ ಕೂಡ ಮನೆಯಲ್ಲಿ ಮಾತ್ರ ತಮ್ಮಿಬ್ಬರ ಪ್ರೀತಿ ವಿಷಯ ಮುಚ್ಚಿಟ್ಟಿದ್ದರು.[ಇಂದು ಅಂಬರೀಶ್ ಹುಟ್ಟುಹಬ್ಬ, ನ್ಯೂಸ್ ಅದಲ್ಲ!]

ಸಹನಟಿ ಎಂಬುದಾಗಿ ಪರಿಚಯಿಸಿದ ಅಂಬಿ

ವಿಷಯ ಮುಚ್ಚಿಟ್ಟಿದ್ದ ಅಂಬಿ ಅವರು ಮೊದಲ ಬಾರಿಗೆ ತಮ್ಮ ತಂಗಿಯ ಮದುವೆಯ ಸಂದರ್ಭದಲ್ಲಿ ಸುಮಲತಾ ಅವರನ್ನು ಮನೆಗೆ ಕರೆದುಕೊಂಡು ಹೋಗಿ ತಮ್ಮ ಸಹನಟಿ ಎಂದು ಪರಿಚಯ ಮಾಡಿದ್ದರು. ಆದಾಗಿ ಹೆಚ್ಚು ಕಾಲ ಕಾಯದೇ ರೆಬೆಲ್ ಸ್ಟಾರ್ ಅಂಬಿ ಅವರು ತಮ್ಮಿಬ್ಬರ ಪ್ರೀತಿ ವಿಷಯ ಮನೆಮಂದಿಗೆ ತಿಳಿಸಿ ಮನೆಯವರ ಒಪ್ಪಿಗೆ ಪಡೆದುಕೊಂಡು ಸಪ್ತಪದಿ ತುಳಿದರು.

ಹುಟ್ಟುಹಬ್ಬದ ದಿನ ಕಣ್ಣುಕೆಂಪು ಮಾಡಿಕೊಂಡ ಸುಮಲತಾ

ಮಾಮೂಲಿಯಾಗಿ ಎಲ್ಲಾ ಪ್ರೇಮಿಗಳು ಕೋಳಿ ಜಗಳ ಆಡುವಂತೆ ಅಂಬಿ ಅವರ ಪ್ರೇಮ್ ಕಹಾನಿಯಲ್ಲೂ ನಡೆದಿದೆ. 'ನ್ಯೂ ಡೆಲ್ಲಿ' ಚಿತ್ರೀಕರಣದ ಸಮಯ. ಮಾಲೆಯಾಳಂ ಚಿತ್ರದ ರೀಮೇಕ್ ಆಗಿದ್ದ 'ನ್ಯೂ ಡೆಲ್ಲಿ'ಯಲ್ಲಿ ಅಂಬರೀಶ್ ಜೊತೆ ಜೋಡಿಯಾಗಿದ್ದವರು ಸುಮಲತಾ. ದೆಹಲಿಯಲ್ಲಿ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಸುಮಲತಾ ಅವರ ಹುಟ್ಟುಹಬ್ಬವಿತ್ತು. ಸ್ಪಾಟ್ ನಲ್ಲೇ ಬರ್ತಡೆ ಪಾರ್ಟಿಯನ್ನ ಸುಮಲತಾ ಅರೇಂಜ್ ಮಾಡಿದ್ದರು. ಹಿಂದಿನ ದಿನ ಅಂಬಿಗೆ ಆಹ್ವಾನ ಕೂಡ ನೀಡಿದ್ದರು. ಆದ್ರೆ, ಅಂದು ಶೂಟಿಂಗ್ ಇದ್ದರೂ, ಅಂಬರೀಶ್ ಅವರ ಶಾಟ್ ಇಲ್ಲದ ಕಾರಣ, ಲೊಕೇಷನ್ ಗೆ ಅಂಬರೀಶ್ ಬಂದಿರಲಿಲ್ಲ. ಬರ್ತೀನಿ ಅಂದು ಅಂಬರೀಶ್ ಕೈ ಕೊಟ್ಟಿದ್ದಕ್ಕೆ ಸುಮಲತಾ ಕಣ್ಣು ಕೆಂಪಾಗಿತ್ತು.

ಅವಾಯ್ಡ್ ಮಾಡಿದ ಸುಮಲತಾ

ಇದೇ ಕಾರಣಕ್ಕೆ ಮಾರನೇ ದಿನ ಅಂಬಿ ಶೂಟಿಂಗ್ ಗೆ ಹಾಜರ್ ಆದರೂ, ಅವರನ್ನ ಸುಮಲತಾ ಮಾತನಾಡಿಸಲಿಲ್ಲ. 'ಸಾರಿ' ಅಂತ ಸಾರಿ ಸಾರಿ ಅಂಬಿ ಕೇಳಿದರೂ, ಸುಮಲತಾ ತಿರುಗಿ ನೋಡಲಿಲ್ಲ. 3-4 ದಿನ ಅಂಬಿಯನ್ನ ಸುಮಲತಾ ಅವರು ಅವಾಯ್ಡ್ ಮಾಡಿದರು.

ರೆಬೆಲ್ ಗೆ ಟ್ರಬಲ್

ತಮ್ಮ ಮುದ್ದು ಪತ್ನಿ ಸುಮಲತಾ ಅವರು ಅವಾಯ್ಡ್ ಮಾಡಿದ್ದನ್ನು ನೋಡಿ ಅಂಬಿ ಅವರಿಗೆ ಏನನ್ನಿಸಿತ್ತೋ, ಸಡನ್ನಾಗಿ ಒಂದು ಪ್ಲ್ಯಾನ್ ಮಾಡಿದರು. ನೈಟ್ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಸುಮಲತಾ ಕಾರ್ ನಲ್ಲಿ ಕೂತಿರುವಾಗ ಒಂದು ಗಿಫ್ಟ್ ಪ್ಯಾಕ್ ಮತ್ತು ಅದರ ಜೊತೆ ಒಂದು ಚೀಟಿಯನ್ನ ಬಿಸಾಕಿದರು. ಆ ಚೀಟಿಯಲ್ಲಿ 'ಸಾರಿ', 'ನನ್ನನ್ನ ಕ್ಷಮಿಸು' ಅಂತ ಇಂಗ್ಲೀಷ್, ಕನ್ನಡ, ತೆಲುಗು, ಮಲೆಯಾಳಂನಲ್ಲಿ ಬರೆದು ಕೆಳಗೆ 'ರೆಬೆಲ್ ಇನ್ ಟ್ರಬಲ್' ಅಂತ ಅಂಬಿ ಬರೆದ್ದಿದ್ದರಂತೆ. ಇದನ್ನು ನೋಡಿದ ಸುಮಲತಾ ಅವರ ಜೋರಾಗಿ ನಕ್ಕರಂತೆ. ಅಲ್ಲಿಗೆ ಕೋಳಿ ಜಗಳ ಮುಗಿದಿತ್ತು ಅನ್ನಿ.

ಅಂಬಿ ರೊಮ್ಯಾಂಟಿಕ್ ಅಲ್ವಂತೆ!

ಪತ್ನಿ ಸುಮಲತಾ ಅವರ ಪ್ರಕಾರ ರೆಬೆಲ್ ಸ್ಟಾರ್ ಅಂಬರೀಶ್ ಅವರು ರೊಮ್ಯಾಂಟಿಕ್ ಪರ್ಸನ್ ಅಲ್ವಂತೆ. 'ಐ ಲವ್ ಯೂ' ಅಂತ ಅವರು ಹೇಳೋದೆ ಇಲ್ಲ ಅಂತಾರೆ ಸುಮಲತಾ.

ಅಂಬಿ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಾಗಲು ಕಾರಣ ಇದಂತೆ..

ಒಂದು ಬಾರಿ ಸುಮಲತಾ ಅವರು ಸಹನಟ ಸುಧೀರ್ ಎಂಬವವರ ಮನೆಗೆ ಊಟಕ್ಕೆ ಹೋಗಿದ್ದಾಗ ಅವರ ಮನೆಗೆ ಅಂಬರೀಶ್ ನಿಲಯ ಎಂದು ಹೆಸರಿಡಲಾಗಿತ್ತು. ಮನೆ ಕಟ್ಟುವಾಗ ಸುದೀರ್ ಅವರಿಗೆ ತೊಂದರೆ ಆದಾಗ ನಿರ್ಮಾಪಕರು, ಪರಿಚಯದವರು ಯಾರೂ ಸಹಾಯ ಮಾಡಲಿಲ್ಲ, ಆವಾಗ ಅಂಬಿ ಅವರಿಗೆ ಯಾರದೋ ಮೂಲಕ ವಿಷಯ ತಿಳಿದು, ಮತ್ತಿನ್ಯಾರದೋ ಕೈಯಲ್ಲಿ 50 ಸಾವಿರ ರೂಪಾಯಿ ಕೊಟ್ಟು ಸಹಾಯ ಮಾಡಿದ್ದರಂತೆ. ಅದಕ್ಕಾಗಿ ಮನೆಗೆ ಅವರ ಹೆಸರು ಇಟ್ಟರಂತೆ. ಇದನ್ನು ಕೇಳಿದ ಸುಮ ಅವರಿಗೆ ಅಂಬಿ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಾಯಿತಂತೆ.

ನನ್ನೆಲ್ಲಾ ಪ್ಲ್ಯಾನ್ ಮಾಡೋದು ಸುಮ

'ಆಹುತಿ' ಸಿನಿಮಾದಲ್ಲಿ ಸುಮಲತಾ ಅವರನ್ನು ನೋಡಿ ಅವರ ಪ್ರೇಮ ಪಾಶದಲ್ಲಿ ಆಹುತಿಯಾದೆ ಎನ್ನುವ ಅಂಬಿ ಅವರು 'ಸುಮಾ ಎಂದರೆ ನನಗೆ ಅಚ್ಚುಮೆಚ್ಚು, ನನ್ನ ಎಲ್ಲಾ ಪ್ಲ್ಯಾನ್ ಮಾಡೋದು ಅವರೇ, ಇಬ್ಬರ ನಡುವೆ ಬಹಳ ಒಳ್ಳೆಯ ಹೊಂದಾಣಿಕೆ ಇದೆ. ಹಾಗಾಗಿ ನಮ್ಮಲ್ಲಿ ಇಲ್ಲಿಯವರೆಗೂ ಯಾವುದೇ ರೀತಿಯ ಭಿನ್ನಾಬಿಪ್ರಾಯ ಬಂದಿಲ್ಲ ಎಂದು ಮನದಾಳದ ಮಾತುಗಳನ್ನಾಡಿದ್ದಾರೆ.

English summary
Valentines Day Special: Kannada Actor Ambareesh Love story. here is an Interesting Fact on how Ambareesh and Sumalatha love blossomed.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada