'ವೆನಿಲ್ಲಾ' ಸಿನಿಮಾದ ಸಾಹಿತ್ಯ ಸ್ಪರ್ಧೆಯಲ್ಲಿ ಗೆದ್ದ 4 ಯುವ ಸಾಹಿತಿಗಳು
ನಿರ್ದೇಶಕ ಜಯತೀರ್ಥ 'ಬ್ಯೂಟಿಫುಲ್ ಮನಸುಗಳು' ಸಿನಿಮಾದ ಯಶಸ್ಸಿನ ನಂತರ ಈಗ 'ವೆನಿಲ್ಲಾ' ಸಿನಿಮಾ ಮಾಡುತ್ತಿದ್ದಾರೆ. ತಮ್ಮ ಪ್ರತಿ ಸಿನಿಮಾದಲ್ಲಿಯೂ ಯುವ ಚಿತ್ರ ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ಅವರು ಈ ಚಿತ್ರದಲ್ಲಿಯೂ ಆ ಕೆಲಸ ಮುಂದುವರೆಸಿದ್ದಾರೆ.
'ವೆನಿಲ್ಲಾ' ಚಿತ್ರಕ್ಕಾಗಿ ವಿಶೇಷವಾಗಿ ಒಂದು ಸಾಹಿತ್ಯ ಸ್ಪರ್ಧೆ ಏರ್ಪಿಸಲಾಗಿತ್ತು. ಒಂದು ಸಣ್ಣ ಟ್ಯೂನ್ ನೀಡಿ ಬೀಟ್ ಸಾಂಗ್ ಬರೆಯಲು ಹೇಳಲಾಗಿತ್ತು. ಈ ಸ್ಪರ್ಥೆಯಲ್ಲಿ 1400ಕ್ಕೂ ಹೆಚ್ಚು ಜನರು ಭಾಗವಯಿಸಿದ್ದರು. ಇದೀಗ ಇವರಲ್ಲಿ 4 ಜನರನ್ನು ವಿಜೇತರಾಗಿ ಆಯ್ಕೆ ಮಾಡಲಾಗಿದೆ.

'ವೆನಿಲ್ಲಾ' ಸಿನಿಮಾದ ಸಾಹಿತ್ಯ ಸ್ಪರ್ಧೆಯಲ್ಲಿ ಜಯಂತ್ ಕುಮಾರ್ ಟಿ.ವಿ, ವಿನಾಯಕ್ ಅರಳಸುಳಿ, ಅರ್ಜುನ್ ಲೂಯಿಸ್ ಮತ್ತು ಅರ್ಪಿತ.ಕೆ ಈ ನಾಲ್ಕು ಯುವ ಸಾಹಿತಿಗಳು ವಿಜೇತರಾಗಿದ್ದಾರೆ. ಈ ಆಯ್ಕೆಯ ಪ್ರಕ್ರಿಯೆಯನ್ನು ಖ್ಯಾತ ಸಾಹಿತಿಗಳಾದ ಜಯಂತ್ ಕಾಯ್ಕಿಣಿ, ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಮತ್ತು ಎ.ಪಿ.ಅರ್ಜುನ್ ಮಾಡಿದ್ದರು. ನಾಲ್ಕು ವಿಜೇತರ ಪೈಕಿ ಜಯಂತ್ ಕುಮಾರ್ ಟಿ.ವಿ ಮತ್ತು ಅರ್ಜುನ್ ಲೂಯಿಸ್ ಅವರ ಸಾಹಿತ್ಯವನ್ನು ಚಿತ್ರದ ಆಡಿಯೋದಲ್ಲಿ ಬಳಸಿಕೊಳ್ಳಲಾಗಿದೆ.

ಈ ಸ್ಪರ್ಧೆಯ ಬಗ್ಗೆ ಮಾತನಾಡಿರುವ ನಿರ್ದೇಶಕ ಜಯತೀರ್ಥ ''ನನ್ನ ಪ್ರಕಾರ ಸಾಹಿತ್ಯ ಬರೆದ 1400 ಜನರು ಕೂಡ ವಿಜೇತರು. ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿಯೂ ಪೆನ್ ಹಿಡಿದು ಸಾಹಿತ್ಯ ಬರೆಯಲು ಕುಳಿತುಕೊಳ್ಳುವ ಮನಸ್ಥಿತಿ ಇದೆಯಲ್ಲ.. ಆ ಮನಸ್ಥಿತಿಯೇ ಗೆಲುವಿನ ಸಂಕೇತ. ಹಾಗಾಗಿ ಎಲ್ಲರಿಗೂ ಅಭಿನಂದನೆ.'' ಎಂದು ಹೇಳಿದ್ದಾರೆ.


Click it and Unblock the Notifications











