»   » ಬರ್ತ್ ಡೇ ಬಾಯ್ ಸುದೀಪ್ ಗೆ ಹೊಸ ನಾಯಕಿ

ಬರ್ತ್ ಡೇ ಬಾಯ್ ಸುದೀಪ್ ಗೆ ಹೊಸ ನಾಯಕಿ

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈಗ ಬಾಳಹಾದಿಯಲ್ಲಿ ಮಹತ್ತರ ಘಟ್ಟ ತಲುಪಿದ್ದಾರೆ. ಅವರು ಇಂದು (ಸೆ.2) ತಮ್ಮ 40ನೇ ವಸಂತಕ್ಕೆ ಅಡಿಯಿಟ್ಟ ಸಂದರ್ಭದಲ್ಲಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು.

ಇದೇ ಸಂದರ್ಭದಲ್ಲಿ ಸುದೀಪ್ ಅವರ ಇನ್ನೂ ಹೆಸರಿಡದ ಹೊಸ ಚಿತ್ರಕ್ಕೆ ಹೊಸ ನಾಯಕಿ ಸಿಕ್ಕಿದ್ದಾರೆ. ಆಕೆ ಬೇರಾರು ಅಲ್ಲ ತಮಿಳಿನ ಖ್ಯಾತ ನಟ ಶರತ್ ಕುಮಾರ್ ಪುತ್ರಿ ವರಲಕ್ಷ್ಮಿ ಶರತ್ ಕುಮಾರ್. ಈಗಾಗಲೆ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.


ತೆಲುಗಿನ ಯಶಸ್ವಿ ಚಿತ್ರ 'ಮಿರ್ಚಿ' ರೀಮೇಕ್ ಇದಾಗಿದ್ದು ಸುದೀಪ್ ಗೆ ಇಬ್ಬರು ನಾಯಕಿಯರು. ಇನ್ನೊಬ್ಬ ನಾಯಕಿ ಗೋಲ್ಡನ್ ಗರ್ಲ್ ರಮ್ಯಾ. ಆದರೆ ಈಗ ರಮ್ಯಾ ಸಂಸದೆಯಾಗಿರುವ ಕಾರಣ ತಮ್ಮ ಅಡ್ವಾನ್ಸ್ ಹಣವನ್ನು ಹಿಂತಿರುಗಿಸಿರುವ ಬಗ್ಗೆಯೂ ಸುದ್ದಿ ಇದೆ.

ಇನ್ನು ವರಲಕ್ಷ್ಮಿ ಈಗಾಗಲೆ ತಮಿಳಿನ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಒಂದು 'ಮದ ಗಜ ರಾಜ' ಹಾಗೂ ಇನ್ನೊಂದು 'ಪೋಡಾ ಪೋರಿ'. ಇದೇ ಮೊದಲ ಬಾರಿಗೆ ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ. ಸೆ.5ರಿಂದ ವರಲಕ್ಷ್ಮಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ತೆಲುಗಿನಲ್ಲಿ ಕೊರಟಾಲ ಶಿವ ನಿರ್ದೇಶಿಸಿದ್ದ 'ಮಿರ್ಚಿ' ಚಿತ್ರ ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿತ್ತು. ಪ್ರಭಾಸ್, ರಿಚಾ ಗಂಗೋಪಾಧ್ಯಾಯ ಹಾಗೂ ಅನುಷ್ಕಾ ಶೆಟ್ಟಿ ಪಾತ್ರಗಳಲ್ಲಿದ್ದರು. ಬಾಕ್ಸ್ ಆಫೀಸಲ್ಲಿ ರು.50 ಕಲೆಕ್ಷನ್ ಮಾಡಿದ ಚಿತ್ರ. ಈ ಚಿತ್ರದ ಹಿಂದಿ ರೀಮೇಕ್ ರೈಟ್ಸ್ ಈಗಾಗಲೆ ಜಾನ್ ಅಬ್ರಹಾಂ ಕೈ ಸೇರಿವೆ. (ಏಜೆನ್ಸೀಸ್)

English summary
Tamil Actress Varalaxmi Sarathkumar has been selected as the leading lady of Kichcha Sudeep directed untitled Kannada remake of Telugu blockbuster 'Mirchi'. Varalaxmi is the eldest daughter of Sarathkumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada