For Quick Alerts
  ALLOW NOTIFICATIONS  
  For Daily Alerts

  ಬೆಳ್ಳಿತೆರೆಗೆ ಶಾಸಕ ವರ್ತೂರು ಪ್ರಕಾಶ್ ಪುತ್ರರತ್ನ

  By Rajendra
  |

  ಕೋಲಾರದ ಶಾಸಕ ವರ್ತೂರು ಪ್ರಕಾಶ್ ಅವರ ಮಗ ವರ್ತೂರು ತೇಜಸ್ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಇನ್ನೂ ಪ್ರಥಮ ಪಿಯುಸಿ ಓದುತ್ತಿರುವ ತೇಜಸ್ ಎರಡನೇ ನಾಯಕ ನಟನಾಗಿ ಅಭಿನಯಿಸುತ್ತಿರುವ 'ಬಿಸ್ಕೆಟ್' ಚಿತ್ರ ಕಂಠೀರವ ಸ್ಟುಡಿಯೋದಲ್ಲಿ ಇತ್ತೀಚೆಗೆ ಸೆಟ್ಟೇರಿದೆ.

  'ಕುಂಭ ರಾಶಿ' ಚಿತ್ರದಲ್ಲಿ ಎಂಟು ಪ್ಯಾಕ್ ದೇಹ ಪ್ರದರ್ಶಿಸಿರುವ ಚೇತನ್ ಚಂದ್ರ ಈ ಚಿತ್ರದ ನಾಯಕ ನಟ. ಐಶ್ವರ್ಯಾ ನಾಗ್ ಚಿತ್ರದ ನಾಯಕಿ. ಟಿವಿ ಪತ್ರಕರ್ತೆಯಾಗಿ ಐಶ್ವರ್ಯಾ ಚಿತ್ರದಲ್ಲಿ ಕಾಣಿಸಲಿದ್ದಾರೆ. ಕೆ ರಾಮಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರವಿ ತೇಜ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ.

  ವರ್ತೂರು ತೇಜಸ್ ಈಗಾಗಲೆ ಅಭಿನಯದಲ್ಲಿ ಒಂದಷ್ಟು ತರಬೇತಿಯನ್ನೂ ಪಡೆದಿದ್ದಾರಂತೆ. ಚಾಮರಾಜ ಸಂಸ್ಥೆಯಲ್ಲಿ ಡಾನ್ಸ್, ಫೈಟ್ಸ್ ಹಾಗೂ ಅಭಿನಯದ ಅಆಇಈ ಕಲಿತಿದ್ದಾಗಿ ತೇಜಸ್ ತಿಳಿಸಿದ್ದಾರೆ. ಇದೊಂದು ಸಂಪೂರ್ಣ ಮಜರಂಜನೆಯ, ಆಕ್ಷನ್ ಜೊತೆಗೆ ಸಂದೇಶ ಸಹ ಚಿತ್ರದಲ್ಲಿರುತ್ತದೆ.

  ಜಗದೀಶ್ ವಾಲಿ ಅವರ ಛಾಯಾಗ್ರಹಣ ಹಾಗೂ ಮಣಿಕಾಂತ್ ಕದ್ರಿ ಅವರ ಸಂಗೀತ ಚಿತ್ರಕ್ಕಿದೆ. ವೆಂಕಟ್ ಅವರ ಸಂಭಾಷಣೆ ಇರುವ ಚಿತ್ರದಲ್ಲಿ ರೂಪಿಕಾ, ಆನಂದ್, ಅಭಯ್, ಪ್ರಿಯಾಂಕಾ ಮುಂತಾದವರಿದ್ದಾರೆ.

  ಬೆಂಗಳೂರನ್ನು ಹೆಲಿಕಾಪ್ಟರ್ ನಲ್ಲಿ ಸೆರೆಹಿಡಿಯಲಾಗಿದ್ದು ಚಿತ್ರದಲ್ಲಿ ಅದು ಪ್ರಮುಖ ಆಕರ್ಷಣೆಯಾಗಿ ನಿಲ್ಲಲಿದೆ ಎನ್ನುತ್ತಾರೆ ಜಗದೀಶ್ ವಾಲಿ. ಕಾರ್ ರೇಸರ್ ವೀಣಾ ಪೊನ್ನಪ್ಪ ಚಿತ್ರದಲ್ಲಿ ಕಾರು ರೇಸರ್ ಆಗಿಯೇ ಕಾಣಿಸಲಿದ್ದಾರೆ. (ಏಜೆನ್ಸೀಸ್)

  English summary
  MLA R Varthur Prakash son Thejas who is making his debut with Kannada film Biscut. Directed by Ravi Teja and produced by K Ramaswamy under U.R.C Movies. Thejas studying in first pre university student makes debut as second lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X