»   » ತ್ರಿಷಾಗೆ ಭಾವಿಪತಿ ವರುಣ್ ಕೊಟ್ಟ 'ಪ್ರೇಮದ ಕಾಣಿಕೆ'

ತ್ರಿಷಾಗೆ ಭಾವಿಪತಿ ವರುಣ್ ಕೊಟ್ಟ 'ಪ್ರೇಮದ ಕಾಣಿಕೆ'

Posted By:
Subscribe to Filmibeat Kannada

ಕಾಲಿವುಡ್ ನಟಿ ತ್ರಿಷಾ ಕೃಷ್ಣನ್ ನಿಶ್ಚಿತಾರ್ಥ ನಾಳೆ (ಜನವರಿ 23) ನಡೆಯಲಿದೆ. ಚಲನಚಿತ್ರ ನಿರ್ಮಾಪಕ ಮತ್ತು ಉದ್ಯಮಿ ವರುಣ್ ಮಣಿಯನ್ ಅವರ ಕೈಹಿಡಿಯುತ್ತಿದ್ದಾರೆ ತ್ರಿಷಾ. ಇದೇ ಖುಷಿಯಲ್ಲಿ ವರುಣ್ ಮಣಿಯನ್, ತಮ್ಮ ಭಾವಿ ಪತ್ನಿಗೆ 'ರೋಲ್ ರಾಯ್ಸ್' ಕಾರ್ ನ ಉಡುಗೊರೆಯಾಗಿ ನೀಡಿದ್ದಾರೆ.

ಹೀಗಂತ ಕಾಲಿವುಡ್ ಮತ್ತು ಟಾಲಿವುಡ್ ಅಂಗಳದಲ್ಲಿ ದೊಡ್ಡ ಸುದ್ದಿಯಾಗಿತ್ತು. ಬರೋಬ್ಬರಿ 7 ಕೋಟಿ ರೂಪಾಯಿ ಬೆಲೆಬಾಳುವ ಜೆಟ್ ಬ್ಲಾಕ್ ಕಲರ್ 'ರೋಲ್ಸ್ ರಾಯ್ಸ್' ಕಾರ್ ನ ವರುಣ್, ತ್ರಿಷಾಗೆ ನೀಡಿದ್ದಾರೆ ಅನ್ನುವುದು ಬರೀ ಗಾಸಿಪ್.

ವರುಣ್ ತ್ರಿಷಾಗೆ ಕಾರ್ ಗಿಫ್ಟ್ ಮಾಡಿಲ್ಲ. ಬದಲಾಗಿ, ನಿಶ್ಚಿತಾರ್ಥದ ಪ್ರಯುಕ್ತ ವರುಣ್ ತ್ರಿಷಾಗೆ ಬೆಲೆಕಟ್ಟಲಾಗದ ಅತ್ಯಮೂಲ್ಯ ಉಡುಗೊರೆಯೊಂದನ್ನ ನೀಡುತ್ತಿದ್ದಾರೆ. ಅದು ಮನೆಯೋ ಅಥವಾ ಭಾರಿ ಬೆಲೆಯ ಅಭರಣವೋ ಅಂತ ಲೆಕ್ಕಾಚಾರ ಹಾಕಬೇಡಿ. [ತ್ರಿಷಾ ನಿಶ್ಚಿತಾರ್ಥ ಉಡುಗೊರೆ ಬೆಲೆ ರು.7 ಕೋಟಿ]

Varun Manian

ತ್ರಿಷಾಗೆ ಪ್ರಾಣಿಗಳಂದ್ರೆ ಪಂಚಪ್ರಾಣ. ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಪ್ರಾಣಿಗಳೊಂದಿಗೆ ಕಾಲ ಕಳೆಯುವ ತ್ರಿಷಾ ಅಭಿಲಾಷೆಯಂತೆ 'CAD' ಸಂಸ್ಥೆಗೆ ದೇಣಿಗೆ ನೀಡಿದ್ದಾರೆ ವರುಣ್ ಮಣಿಯನ್.

ಬೀದಿ ನಾಯಿಗಳಿಗೆ ಆಶ್ರಯ ಕಲ್ಪಿಸುತ್ತಿರುವ 'ಚೆನ್ನೈ ಅಡಾಪ್ಷನ್ ಡ್ರೈವ್-CAD' ಸಂಸ್ಥೆಗೆ ವರುಣ್ ಸಹಾಯ ನಿಧಿ ನೀಡಿದ್ದಾರೆ. ಆ ಮೂಲಕ ನಾಯಿಗಳಿಗೆ ಅವಶ್ಯಕವಾಗಿರುವ ಲಸಿಕೆ, ಸರ್ಜರಿ ಮತ್ತು ಔಷಧಿಗಳ ವೆಚ್ಚವನ್ನು ಒಂದು ವರ್ಷ ಕಾಲ ವರುಣ್ ಭರಿಸಲಿದ್ದಾರೆ.

ಇದರೊಂದಿಗೆ ಇದೇ ಶನಿವಾರ ಮತ್ತು ಭಾನುವಾರ ಸಾವಿರಾರು ನಿರಾಶ್ರಿತ ಪ್ರಾಣಿಗಳಿಗೆ ಆಹಾರವನ್ನೂ ಒದಗಿಸಲಿದ್ದಾರೆ ವರುಣ್. ನಿಶ್ಚಿತಾರ್ಥದ ಶುಭ ಸಂದರ್ಭದಲ್ಲಿ ವರುಣ್ ತಾಳಿರುವ ಈ ನಡೆಯಿಂದ ತ್ರಿಷಾ ಮೊಗದಲ್ಲಿ ಮಂದಹಾಸ ಮೂಡಿದೆ. [ತ್ರಿಷಾ ಕೃಷ್ಣನ್ ನಿಶ್ಚಿತಾರ್ಥ...! ಗಾಸಿಪ್ ಅಲ್ಲ, 100% ಸತ್ಯ..!]

Varun Manian

ಪ್ರಾಣಿಗಳ ರಕ್ಷಣೆ ಬಗ್ಗೆ ಸದಾ ದನಿಯೆತ್ತುವ ತ್ರಿಷಾ ಮನದಾಳವನ್ನ ಅರಿತು, ಇಂತಹ ವಿಭಿನ್ನ ಉಡುಗೊರೆಯನ್ನು ನೀಡಿದ್ದಾರೆ ವರುಣ್. ಇದಕ್ಕೆ 'CAD' ಸಂಸ್ಥೆ ಕೂಡ ವರುಣ್ ಮತ್ತು ತ್ರಿಷಾಗೆ ಧನ್ಯವಾದ ತಿಳಿಸಿದೆ.

ಬೆಲೆಬಾಳುವ ದುಬಾರಿ ಉಡುಗೊರೆಗಳು ನೀಡುವ ಖುಷಿ ಕ್ಷಣಿಕ. ಆದ್ರೆ, ಮೂಕ ಪ್ರಾಣಿಗಳ ವೇದನೆ ಅರಿತು, ಅವುಗಳಿಗೆ ಸಹಾಯ ಮಾಡುವ ಮನೋಭಾವ ಕೋಟಿಗಿಂತ ಮಿಗಿಲು. ಪ್ರಾಣಿ ಪ್ರೇಮಿ ತ್ರಿಷಾ ನಿಶ್ಚಿತಾರ್ಥಕ್ಕೆ ಇದಕ್ಕಿಂತ ಮತ್ತೊಂದು 'ಪ್ರೇಮದ ಕಾಣಿಕೆ' ಬೇಕಾ..?

English summary
Actress Trisha Krishnan engagement is scheduled tomorrow (Jan 23rd). Varun is presenting a special gift to Trisha on this occasion.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada