»   » 'ಟಗರು' ಶಿವಣ್ಣನೊಂದಿಗೆ ಲಾಂಗ್ ಹಿಡಿದ ಕಂಚಿನ ಕಂಠದ ವಸಿಷ್ಠ

'ಟಗರು' ಶಿವಣ್ಣನೊಂದಿಗೆ ಲಾಂಗ್ ಹಿಡಿದ ಕಂಚಿನ ಕಂಠದ ವಸಿಷ್ಠ

Posted By:
Subscribe to Filmibeat Kannada

ಶಿವರಾಜ್ ಕುಮಾರ್ ಸ್ಯಾಂಡಲ್ ವುಡ್ ನ ಮಾಸ್ ಲೀಡರ್. ಅವರ ಸಿನಿಮಾಗಳಲ್ಲಿ ಲಾಂಗ್ ಗೆ ವಿಶೇಷ ಸ್ಥಾನ ಇದೆ. ಸದ್ಯ 'ಟಗರು' ಸಿನಿಮಾದಲ್ಲೂ ಕೂಡ ಲಾಂಗ್ ಖದರ್ ಜೋರಾಗಿದೆ.

'ಟಗರು' ಸಿನಿಮಾದಲ್ಲಿ ಬರಿ ಶಿವಣ್ಣ ಮಾತ್ರವಲ್ಲದೆ ಅವರ ಜೊತೆಗಿನ ಸ್ಟಾರ್ ಗಳು ಲಾಂಗ್ ಹಿಡಿದಿದ್ದಾರೆ. ಸಿನಿಮಾದಲ್ಲಿ ನಟ ವಸಿಷ್ಠ ಮತ್ತು ಧನಂಜಯ್ ಲಾಂಗ್ ಹಿಡಿದು ಪೋಸ್ ಕೊಟ್ಟಿದ್ದಾರೆ.[ಚಿತ್ರಗಳು: 'ಟಗರು' ಶೂಟಿಂಗ್ ನಲ್ಲಿ ಶಿವಣ್ಣ, ಮಾನ್ವಿತಾ ಸ್ಟೈಲಿಶ್ ಲುಕ್!]

ವಸಿಷ್ಠ ಖದರ್

ಕಂಚಿನ ಕಂಠದ ನಟ ವಸಿಷ್ಠ ಅವರ 'ಟಗರು' ಸಿನಿಮಾದ ಲುಕ್ ರಿವೀಲ್ ಆಗಿದೆ. ಅವರು ಲಾಂಗ್ ಹಿಡಿದು ನಿಂತಿರುವ ಪೋಸ್ಟರ್ ಇದೀಗ ರಿಲೀಸ್ ಆಗಿದೆ.

ಧನಂಜಯ್ ಲುಕ್

ನಟ ಧನಂಜಯ್ ಸಹ ಸಿನಿಮಾದಲ್ಲಿ ಲಾಂಗ್ ಹಿಡಿದಿರುವ ಪೋಸ್ಟರ್ ಇತ್ತೀಚಿಗಷ್ಟೆ ಹೊರಬಂದಿತ್ತು.

'ಟಗರು' ಶಿವ

'ಓಂ', 'ಜೋಗಿ', 'ಕಡ್ಡಿಪುಡಿ' ಸಿನಿಮಾಗಳ ರೀತಿ ಇಲ್ಲಿಯೂ ಶಿವಣ್ಣ ಲಾಂಗ್ ಹಿಡಿದು ಅಬ್ಬರಿಸಿದ್ದಾರೆ.

ಸೂರಿ ಸ್ಟೈಲ್ ಸಿನಿಮಾ

ಇದು ಪಕ್ಕಾ ಸೂರಿ ಸ್ಟೈಲ್ ಸಿನಿಮಾ. 'ಕಡ್ಡಿಪುಡಿ' ಸಿನಿಮಾದಲ್ಲಿ ಒಂದಾಗಿದ್ದ ಶಿವಣ್ಣ-ಸೂರಿ ಜೋಡಿ ಮತ್ತೆ ಇಲ್ಲಿ ಹವಾ ಎಬ್ಬಿಸಲಿದೆ.

English summary
Kannada Actor Vasishta.N.Simha and Dhananjay's First Look in Kannada Movie 'Tagaru' is out.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada