For Quick Alerts
  ALLOW NOTIFICATIONS  
  For Daily Alerts

  ಮರಿ ಸಿಂಹ ದತ್ತು ಪಡೆದು ತಂದೆ ಹೆಸರಿಟ್ಟ ನಟ ವಸಿಷ್ಠ ಸಿಂಹ

  |

  ಸಿನಿಮಾ ಕಲಾವಿದರು ಪ್ರಾಣಿಗಳನ್ನು ದತ್ತು ಪಡೆಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಲಾವಿದರು ಪ್ರಾಣಿಗಳನ್ನು ದತ್ತು ಪಡೆದು ಜಾಗೃತಿ ಮೂಡಿಸುವುದಲ್ಲದೇ ಮಾದರಿಯಾಗುತ್ತಿದ್ದಾರೆ.

  ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿದ್ದು ನಟ ವಸಿಷ್ಠ ಸಿಂಹ. ಹೊಸ ವರ್ಷದ ಪ್ರಯುಕ್ತ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದ ವಸಿಷ್ಠ ಮೂರು ತಿಂಗಳ ಸಿಂಹದ ಮರಿಯನ್ನು ದತ್ತು ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

  ಗಣೇಶ ಹಬ್ಬದಂದು 'ಪಾರ್ವತಿ' ದತ್ತು ಪಡೆದ ನಟ ಶಿವರಾಜ್ ಕುಮಾರ್ಗಣೇಶ ಹಬ್ಬದಂದು 'ಪಾರ್ವತಿ' ದತ್ತು ಪಡೆದ ನಟ ಶಿವರಾಜ್ ಕುಮಾರ್

  ವಿಶೇಷ ಅಂದ್ರೆ ಈ ಸಿಂಹದ ಮರಿಗೆ ತಮ್ಮ ತಂದೆಯ ಹೆಸರು 'ವಿಜಯ ನರಸಿಂಹ' ಎಂದು ನಾಮಕರಣ ಮಾಡಿದ್ದಾರೆ. ಒಂದು ವರ್ಷಗಳ ಅವಧಿಗೆ ಸಿಂಹದ ಮರಿಯನ್ನು ವಸಿಷ್ಠ ದತ್ತು ಪಡೆದುಕೊಂಡಿದ್ದಾರೆ.

  ಸಿಂಹದ ಮರಿಯನ್ನು ವಸಿಷ್ಠ ಸಿಂಹ ದತ್ತು ಪಡೆದ ವಿಚಾರ ತಿಳಿಯುತ್ತಿದ್ದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ವಸಿಷ್ಠ ಸಿಂಹ ಸಹ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನಲ್ಲೂ ಸಿನಿಮಾ ಮಾಡ್ತಿದ್ದಾರೆ. 'ಓದೆಲ ರೈಲ್ವೇ ಸ್ಟೇಷನ್' ಎಂಬ ತೆಲುಗು ಚಿತ್ರದಲ್ಲಿ ವಸಿಷ್ಠ ನಾಯಕನಾಗಿದ್ದು, ಹೊಸ ವರ್ಷದ ಪ್ರಯುಕ್ತ ಪೋಸ್ಟರ್ ಸಹ ಬಿಡುಗಡೆಯಾಗಿದೆ.

  ಕರಿ ಚಿರತೆ ದತ್ತು ಪಡೆದ 'ಬಜಾರ್' ನಟ ಧನ್ವೀರ್ಕರಿ ಚಿರತೆ ದತ್ತು ಪಡೆದ 'ಬಜಾರ್' ನಟ ಧನ್ವೀರ್

  Recommended Video

  Shivaraj Kumar and Rakshith Shetty awarded Dadasaheb Phalke Award south 2020 | Filmibeat kannada

  ವಸಿಷ್ಠ ಸಿಂಹ ಅವರಿಗೂ ಮೊದಲು ನಟ ಧನ್ವೀರ್ ಗೌಡ ಮೈಸೂರು ಮೃಗಾಲಯದಲ್ಲಿ ಕರಿ ಚಿರತೆ ದತ್ತು ಪಡೆದಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಹ ಮೈಸೂರಿನ ಮೃಗಾಯಲದಲ್ಲಿ ಪಾರ್ವತಿ ಎಂಬ ಆನೆ ಮರಿಯನ್ನು ದತ್ತು ಪಡೆದಿದ್ದರು.

  English summary
  Kannad actor Vasishta N Simha adopts lion cub on new year's day at Bannerghatta Biological Park.
  Saturday, January 2, 2021, 9:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X