Don't Miss!
- News
7th Pay Commission; ಮುಂಬಡ್ತಿ, ಬಡ್ತಿ, ಭತ್ಯೆಯ ನಿಗದಿ ಮಾನದಂಡಗಳು
- Technology
ಆಪಲ್ ಗ್ರಾಹಕರಿಗೆ ಬಿಗ್ ಶಾಕ್; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೊರಬಿದ್ದವು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ನಿಶ್ಚಿತಾರ್ಥದ ಚಿತ್ರಗಳು
ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮದುವೆಯಾಗಲಿದ್ದಾರೆ, ಮದುವೆಯಾಗಿಬಿಟ್ಟಿದ್ದಾರೆ ಇಲ್ಲ ನಿಶ್ಚಿತಾರ್ಥ ಮಾತ್ರ ಅಂತೆ. ಅಯ್ಯೋ ಅದೆಲ್ಲ ಏನೂ ಇಲ್ವಂತೆ ಬರೇ ಫ್ರೆಂಡ್ಸ್ ಅಂತೆ ಹೀಗೆ ಕಳೆದೊಂದು ವಾರದಿಂದಲೂ ಅಂತೆ-ಕಂತೆಗಳೇ ಹರಿದಾಡುತ್ತಿದ್ದವು.
ಸಿಂಹವೊಂದು ಕೈಯಲ್ಲಿ ಹೆಣ್ಣು ಮಗುವನ್ನು ಹಿಡಿದುಕೊಂಡಿರುವ ಚಿತ್ರವನ್ನು ನಟಿ ಹರಿಪ್ರಿಯಾ ನಿನ್ನೆಯಷ್ಟೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ಇನ್ನಷ್ಟು ಗೊಂದಲಗಳಿಗೆ ಕಾರಣವಾಗಿತ್ತು. ಆದರೆ ಬಹುತೇಕರಿಗೆ ಇವರಿಬ್ಬರೂ ಪ್ರೀತಿಯಲ್ಲಿರುವ ವಿಷಯವಂತೂ ನಿನ್ನೆಯೇ ಖಾತ್ರಿಯಾಗಿತ್ತು.
ಇದೀಗ ಇವರಿಬ್ಬರ ನಿಶ್ಚಿತಾರ್ಥದ ಚಿತ್ರಗಳು ಸಹ ಹೊರಬಿದ್ದಿದ್ದು ಅಲ್ಲಿಗೆ ವಂದಂತಿಗಳಿಗೆಲ್ಲ ಪೂರ್ಣವಿರಾಮವಿಟ್ಟು ತಮ್ಮ ಪ್ರೇಮವನ್ನು ಬಹಿರಂಗ ಪಡಿಸಿದೆ ಈ ಜೋಡಿ.
ಸರಳ ಕಾರ್ಯಕ್ರಮದಲ್ಲಿ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಉಂಗುರ ಬದಲಾಯಿಸಿಕೊಂಡಿದ್ದಾರೆ. ಇವರ ನಿಶ್ಚಿತಾರ್ಥದ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹಿಂದೂ ಸಂಪ್ರದಾಯದಂತೆ ನಿಶ್ಚಿತಾರ್ಥ ನಡೆದಿರುವುದು ಚಿತ್ರಗಳಿಂದ ತಿಳಿದು ಬರುತ್ತಿದೆ.
ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನೆಡೆದಿದೆ. ಸಿನಿಮಾ ರಂಗದ ಗೆಳೆಯರಿಗೂ ಸಹ ಈ ಕಾರ್ಯಕ್ರಮಕ್ಕೆ ಆಹ್ವಾನವಿರಲಿಲ್ಲ ಎನ್ನಲಾಗುತ್ತಿದೆ. ಕೆಲವೇ ದಿನಗಳಲ್ಲಿ ಈ ಜೋಡಿ ವಿವಾಹ ಬಂಧಕ್ಕೆ ಒಳಗಾಗಲಿದೆ ಆದರೆ ವಿವಾಹದ ದಿನಾಂಕ ಬಹಿರಂಗವಾಗಿಲ್ಲ.
ಶ್ರುತಿ ಚಂದ್ರಸೇನಾ ಅಲಿಯಾಸ್ ಹರಿಪ್ರಿಯಾ ಜನಿಸಿದ್ದು ಚಿಕ್ಕಬಳ್ಳಾಪುರದಲ್ಲಿ. 2007 ರಲ್ಲಿ ತುಳು ಸಿನಿಮಾ ಮೂಲಕ ನಟನೆಗೆ ಕಾಲಿರಿಸಿದ ಹರಿಪ್ರಿಯಾ, 2008 ರಲ್ಲಿ 'ಮನಸುಗಳ ಮಾತು ಮಧುರ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಈವರೆಗೆ ಹಲವು ಸಿನಿಮಾಗಳಲ್ಲಿ ಹರಿಪ್ರಿಯಾ ನಟಿಸಿದ್ದು, ಕೆಲ ಪರಭಾಷೆಯ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ಇನ್ನು ವಸಿಷ್ಠ ಸಿಂಹ ಕನ್ನಡ ಚಿತ್ರರಂಗದಲ್ಲಿ ಸಾಮಾನ್ಯ ನಟನಾಗಿ, ಪೋಷಕ ನಟನಾಗಿ, ವಿಲನ್ ಆಗಿ ನಟಿಸುತ್ತಿದ್ದವರು ಈಗ ನಾಯಕ ನಟನಾಗಿ ನಟಿಸಲು ಆರಂಭಿಸಿದ್ದಾರೆ. ಚಿತ್ರರಂಗದಲ್ಲಿ ಅವರದ್ದು ಸ್ಪೂರ್ತಿದಾಯಕ ಪಯಣ. ಈ ಇಬ್ಬರೂ ಒಟ್ಟಿಗೆ ತೆಲುಗು ಸಿನಿಮಾ 'ಎವರು' ನಲ್ಲಿ ಒಟ್ಟಿಗೆ ನಟಿಸಿದ್ದರು. ಆಗಲೇ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿದೆ ಎನ್ನಲಾಗುತ್ತಿದೆ.
ಹರಿಪ್ರಿಯಾ ಅವರ ಏಳು ಸಿನಿಮಾಗಳು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಆಗಲಿದೆ. ಅಮೃತಮತಿ, 'ತಾಯಿ ಕಸ್ತೂರಿ ಗಾಂಧಿ', 'ಯದಾ ಯಧಾಹಿ', 'ಬೆಲ್ ಬಾಟಮ್ 2', 'ಹ್ಯಾಪಿ ಎಂಡಿಂಗ್', 'ಲಗಾಮು', ನಿರ್ದೇಶಕ ಶಶಾಂಕ್‌ರ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸಲಿದ್ದಾರೆ.
ಇನ್ನು ವಸಿಷ್ಠ ಸಿಂಹ ಕನ್ನಡ ಸೇರಿದಂತೆ ಪರಭಾಷೆಯ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. 'ಹೆಡ್ ಬುಷ್ 2', 'ಕಾಲಚಕ್ರ', 'ಪಂಥ' ಸಿನಿಮಾಗಳಲ್ಲಿ ನಟಿಸಲಿದ್ದಾರೆ.