For Quick Alerts
  ALLOW NOTIFICATIONS  
  For Daily Alerts

  ವಾಸ್ತು ದೋಷ: ವಿಷ್ಣುವರ್ಧನ್ ಸ್ಮಾರಕ ಸ್ಥಳಾಂತರ

  By Mahesh
  |

  ಬೆಂಗಳೂರು, ಸೆ.7: ಅಭಿಮಾನ್ ಸ್ಟುಡಿಯೋ ಆವರಣದಲ್ಲಿರುವ ನಟ ವಿಷ್ಣುವರ್ಧನ್ ಅವರ ಸಮಾಧಿ ವಾಸ್ತು ದೋಷದಿಂದ ಕೂಡಿದೆ ಎಂದು ಹೇಳಿ ಸ್ಥಳಾಂತರಕ್ಕೆ ಚಿಂತನೆ ನಡೆಸಲಾಗಿದೆ. ಈಗಾಗಲೇ ಈ ಬಗ್ಗೆ ಸಂಖ್ಯಾಶಾಸ್ತ್ರಜ್ಞ ಆದಿತ್ಯನಾರಾಯಣ ಶಾಸ್ತ್ರಿ ಅವರೊಂದಿಗೆ ಸಮಾಲೋಚನೆ ನಡೆಸಿರುವ ಭಾರತಿ ವಿಷ್ಣುವರ್ಧನ್ ಅವರು, ಸದ್ಯದಲ್ಲಿಯೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

  ಮೂಲಗಳ ಪ್ರಕಾರ ಬೆಂಗಳೂರಿನಲ್ಲಿ ಸ್ಥಳ ಸಿಗದಿದ್ದರೆ ಮೈಸೂರಿನಲ್ಲಿ ವಿಷ್ಣು ಸಮಾಧಿ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದು ಆಪ್ತ ಮೂಲಗಳು ಹೇಳಿವೆ. ಏಕೆ ಇದು: ಅಭಿಮಾನ್ ಸ್ಟುಡಿಯೋ ಆವರಣದಲ್ಲಿರುವ ವಿಷ್ಣು ಸಮಾಧಿ ಬಳಿ ಅಭಿಮಾನಿಗಳಿಗೆ ಮೂಲಭೂತ ಸೌಕರ್ಯ ಹಾಗೂ ಆಕರ್ಷಣೀಯ ತಾಣವನ್ನಾಗಿ ಮಾಡುವ ಸಂಕಲ್ಪ ಮಾಡಲಾಗಿತ್ತು.

  ಕಳೆದ ಮೂರು ವರ್ಷಗಳಿಂದ ಇದಕ್ಕಾಗಿ ಪ್ರಯತ್ನ ನಡೆಸಿದರೂ ಜಾಗದ ಸಮಸ್ಯೆ ಕುರಿತು ಬಾಲಕೃಷ್ಣ ಅವರ ಪುತ್ರ-ಪುತ್ರಿಯರು ತಗಾಧೆ ತೆಗೆದಿದ್ದರು. ಈ ಸಂದರ್ಭದಲ್ಲಿ ರಾಜ್ಯಸರ್ಕಾರ ಮಧ್ಯ ಪ್ರವೇಶಿಸಿ ರಾಜೀ ಮಾಡಿಸಿ ಕೊನೆಗೂ ಸಮಾಧಿ ಬಳಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಮುಂದಾಗಿತ್ತು.

  ಅದೇಕೋ ಏನೋ ಆ ಕಾರ್ಯವೂ ಸಹ ಚಾಲನೆಗೊಳ್ಳದೆ ಇದ್ದಾಗ ಭಾರತಿ ವಿಷ್ಣುವರ್ಧನ್ ಅವರು ಆಧ್ಯಾತ್ಮದತ್ತ ಒಲವು ಬೆಳೆಸಿಕೊಂಡು ಸಮಾಧಿ ಸ್ಥಳದಲ್ಲಿ ನಿರ್ಮಾಣ ಕಾರ್ಯಗಳು ವಿಳಂಬವಾಗಲು ಕಾರಣವೇನೆಂದು ತಿಳಿದುಕೊಂಡಾಗ ಅಲ್ಲಿ ವಾಸ್ತು ದೋಷ ಕಂಡುಬಂದಿದೆಯಂತೆ. ಈ ಸಂಬಂಧ ಸಮಾಧಿ ಸ್ಥಳವನ್ನೇ ಸ್ಥಳಾಂತರಿಸಲು ದೃಢ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

  ಭೂಮಿ ಸಿಕ್ಕಿತ್ತು: ಖ್ಯಾತ ಚಿತ್ರನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕಾಗಿ ಈಗಾಗಲೇ ಸ್ವಾಧೀನಪಡಿಸಿಕೊಂಡಿದ್ದ ಎರಡು ಎಕರೆ ಜಮೀನನ್ನು ವಿಷ್ಣು ಸ್ಮಾರಕ ಟ್ರಸ್ಟ್ ವಶಕ್ಕೆ ಸಿಎಂ ಸಿದ್ದರಾಮಯ್ಯ ಅವರು ಹಸ್ತಾಂತರ ಮಾಡಿದ್ದರು.

  ಹಸ್ತಾಂತರದ ದಾಖಲಾತಿ ಪತ್ರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾರ್ಯ ಯಾವುದೇ ಅಡೆ-ತಡೆ ಇಲ್ಲದೆ ಸಾಗಲಿದೆ

  ಸಮಾಧಿ ಸುತ್ತಲೂ ಇನ್ನೂ ಎರಡು ಎಕರೆ ನೀಡಬೇಕೆಂಬುದು ನಮ್ಮ ಬೇಡಿಕೆ. ಅಭಿಮಾನ್ ಸ್ಟುಡಿಯೋ ಮಾಲೀಕರಾಗಿದ್ದ ಹಿರಿಯ ನಟ ಬಾಲಕೃಷ್ಣ ಅವರ ಮಕ್ಕಳ ನಡುವೆ ಭೂಮಿ ಹಂಚಿಕೆ ಸಂಬಂಧ ತಕರಾರಿದ್ದು, ಅದು ಇತ್ಯರ್ಥವಾಗುವವರೆಗೂ ಸರ್ಕಾರ ಟ್ರಸ್ಟ್ ವಶಕ್ಕೆ ಭೂಮಿ ನೀಡಲು ಸಾಧ್ಯವಾಗುವುದಿಲ್ಲ.

  ಹಾಗಾಗಿ ತಾವು ಬಾಲಕೃಷ್ಣ ಅವರ ಮಗಳ ಜೊತೆ ಖಾಸಗಿಯಾಗಿ ಮಾತನಾಡಿದಾಗ ಭೂಮಿ ನೀಡಲು ಒಪ್ಪಿಕೊಂಡಿದ್ದಾರೆ ಎಂದರು. ಆ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಬಾಲಕೃಷ್ಣ ಅವರ ಪುತ್ರಿ ಸ್ಮಾರಕ ನಿರ್ಮಾಣಕ್ಕೆ 2 ಎಕರೆ ನೀಡಲು ತನ್ನ ತಕರಾರಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರೆ ವಿವಾದ ಬಗೆಹರಿದು ಬೇಡಿಕೆಯಷ್ಟು ಭೂಮಿ ಲಭ್ಯವಾಗುತ್ತದೆ ಎಂದಿದ್ದರು.

  English summary
  Dr Vishnuvardhan memorial likely to be shifted as it is facing Vastu Dosha according to sources. Bharathi Vishnuvardhan consulted Numerologist Adithya Nayarana Shastri about shifting the memorial from Abhiman Studio

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X