For Quick Alerts
  ALLOW NOTIFICATIONS  
  For Daily Alerts

  'ವಾಸು ನಾನ್ ಪಕ್ಕಾ ಕಮರ್ಷಿಯಲ್' ಮೊದಲ ಪ್ರತಿ ಸಿದ್ಧ

  By Bharath Kumar
  |

  ನಟ ಅನಿಶ್ ತೇಜೆಶ್ವರ್ ಅಭಿನಯದ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರದ ಮೊದಲ ಪ್ರತಿ ಸಿದ್ಧವಾಗಿದೆ. ಅಜಿತ್ ವಾಸನ್ ಉಗ್ಗಿನ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಶೂಟಿಂಗ್ ಮುಕ್ತಾಯ ಮಾಡಿದೆ.

  ಈ ಚಿತ್ರದ ಹಾಡೊಂದನ್ನ ಪುನೀತ್ ರಾಜ್ ಕುಮಾರ್ ಹಾಡಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಅನಿಶ್ ನಾಯಕನಾಗಿ ಅಭಿನಯಿಸಿದ್ರೆ, ನಿಶ್ವಿಕಾ ನಾಯ್ಡು ನಾಯಕಿಯಾಗಿದ್ದಾರೆ.

  ಅನಿಶ್ ಗಾಗಿ ಮತ್ತೆ ಹಾಡಿದ ಪವರ್ ಸ್ಟಾರ್ಅನಿಶ್ ಗಾಗಿ ಮತ್ತೆ ಹಾಡಿದ ಪವರ್ ಸ್ಟಾರ್

  "ಗಹನ" ಜೂನ್‍ನಲ್ಲಿ ಆರಂಭ

  ಓಂ ಶ್ರೀ ಸಾಯಿರಾಂ ಫಿಲಂಸ್ ಲಾಂಛನದಲ್ಲಿ ಆರ್. ಶ್ರೀನಿವಾಸ್ ಸೀನು ನಿರ್ಮಾಣದ "ಗಹನ" ಚಿತ್ರವು ಮುಂದಿನ ತಿಂಗಳು ಆರಂಭಗೊಳ್ಳಲಿದೆ. ಈ ಚಿತ್ರದ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವುದು ಪ್ರೀತ್ ಹಾಸನ್.

  ಈ ಚಿತ್ರದ ವಿಶೇಷ ಅಂದ್ರೆ, ಸಾಯಿ ಶ್ರೀನಿವಾಸ್ ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡಲಿದ್ದಾರೆ. ಸುಮಾರು 30 ವರ್ಷಗಳಿಂದ 150 ಚಿತ್ರಗಣಿಗೆ ಸ್ಥಿರ ಚತ್ರ ಛಾಯಾಗ್ರಾಹಕರಾಗಿ ಕೆಲಸ ನಿರ್ವಹಿಸಿದ್ದು, ಇವರ 151ನೇ ಚಿತ್ರ 'ಕುರುಕ್ಷೇತ್ರ' ಬಿಡುಗಡೆಯಾಗಬೇಕಕಿದೆ. ಇದೀಗ, 'ಗಹನ' ಚಿತ್ರದ ಮೂಲಕ ಸ್ವತಂತ್ರ್ಯ ಛಾಯಾಗ್ರಾಹಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

  ಇನ್ನುಳಿದಂತೆ ರಘು ಸಂಗೀತ ಒದಗಿಸುತ್ತಿದ್ದಾರೆ. ಆದಿತ್ಯಶೆಟ್ಟಿ, ಶರಣ್ಯಗೌಡ, ರಂಜಿನಿ, ಶಿವು ಇಂಚರ ಭೂಮಯ್ಯ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.ಉಳಿದ ತಾಂತ್ರಿಕ ಹಾಗೂ ಕಲಾವಿದರ ಆಯ್ಕೆ ನಡೆಯುತ್ತಿದೆ. ಸೈಕಲಾಜಿಕಲ್ ಥ್ರಿಲ್ಲರ್ ಕಥಾವಸ್ತುವುಳ್ಳ ಚಿತ್ರದ ಚಿತ್ರೀಕರಣ, ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಮಡಿಕೇರಿ ಸುತ್ತಮುತ್ತ ನಡೆಯಲಿದೆ.

  English summary
  Kannada actor anish tejeshwar starrer Vasu naan pakka commercial movie first copy ready. the movie directed by ajithvasan uggina.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X