»   » ಡಬ್ಬಿಂಗ್ ಭೂತ ದಹನಕ್ಕೆ ಸಿದ್ಧವಾದ ವಾಟಾಳ್

ಡಬ್ಬಿಂಗ್ ಭೂತ ದಹನಕ್ಕೆ ಸಿದ್ಧವಾದ ವಾಟಾಳ್

Posted By:
Subscribe to Filmibeat Kannada
Vatal Nagaraj
ಡಬ್ಬಿಂಗ್ ಸಂಸ್ಕೃತಿಯನ್ನು ಕನ್ನಡ ಚಿತ್ರರಂಗದ ಮೇಲೆ ಹೇರುವ ಮೂಲಕ ನಮ್ಮ ಚಿತ್ರರಂಗವನ್ನು ಅವಸಾನದತ್ತ ತಳ್ಳುವ ಪಿತೂರಿ ನಡೆದಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಡಬ್ಬಿಂಗ್ ಸಂಸ್ಕೃತಿ ವಿರೋಧಿಸಿ ಡಿ.9 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ವಾಟಾಪ್ ಘೋಷಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಸಂಸ್ಕೃತಿ ಬಂದರೆ ಸರ್ವನಾಶವಾಗುತ್ತದೆ. ಕನ್ನಡ ಚಿತ್ರರಂಗ ಉಳಿಸಿಕೊಳ್ಳಬೇಕಾದರೆ ನಾವೆಲ್ಲ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದರು.

ಬೆಂಗಳೂರಿನಲ್ಲಿ ಕನ್ನಡ ಚಿತ್ರಪ್ರದರ್ಶನ ನಡೆಯದ ಕಾಲದಿಂದಲೂ ನಾವು ಹೋರಾಟ ನಡೆಸಿದ್ದೇವೆ. ಕಳೆದ 50 ವರ್ಷಗಳ ಹಿಂದೆಯೇ ಕನ್ನಡ ಚಿತ್ರರಂಗ ನೆಲೆಯೂರಲು ಕನ್ನಡ ಚಳಚಳಿ ಪಕ್ಷ ಹೋರಾಟ ಮಾಡಿದೆ.

ಡಬ್ಬಿಂಗ್ ಸಂಸ್ಕೃತಿಯನ್ನು ಡಾ. ರಾಜ್ ಕುಮಾರ್ ಅವರು ಕೂಡಾ ವಿರೋಧಿಸಿದ್ದರು. ಡಬ್ಬಿಂಗ್ ಭೂತದಿಂದ ಕನ್ನಡ ಸಾಹಿತ್ಯ, ಬರಹಗಾರರು, ನಟ, ನಟಿಯರು ಎಲ್ಲಾ ವರ್ಗಕ್ಕೂ ತೊಂದರೆಯಾಗಲಿದೆ. ಹೀಗಾಗಿ ಚಿತ್ರರಂಗದ ಎಲ್ಲಾ ವರ್ಗದವರು ಬೀದಿಗಿಳಿದು ಹೋರಾಟಕ್ಕೆ ಮುಂದಾದರೆ ಮಾತ್ರ ಚಿತ್ರರಂಗ ಉಳಿಯುತ್ತದೆ ಎಂದರು.

ಡಬ್ಬಿಂಗ್ ವಿರುದ್ಧ ಡಿ.9ರಂದು ಗಾಂಧಿನಗರದ ಗುಬ್ಬಿ ವೀರಣ್ಣ ರಂಗಮಂದಿರದ ಬಳಿ ಡಬ್ಬಿಂಗ್ ಭೂತ ದಹನ ಮಾಡಲಾಗುವುದು ಎಂದು ವಾಟಾಳ್ ಹೇಳಿದರು.

ಈ ನಡುವೆ ಪರಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಲು ಅವಕಾಶ ನೀಡಬಾರದು, ಡಬ್ಬಿಂಗ್ ಅನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಒಮ್ಮತದ ನಿರ್ಧಾರಕ್ಕೆ ಕನ್ನಡ ಚಿತ್ರರಂಗ ಬಂದಿದೆ.

ರಾಜ್ಯದಲ್ಲಿ ಡಬ್ಬಿಂಗ್ ಯಾಕೆ ನಿಷೇಧಿಸಬೇಕು ಎಂಬ ವಿಷಯ ಕುರಿತು ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತಿತರ ಸಂಸ್ಥೆಗಳಿಗೆ ನೀಡಿರುವ ನೋಟೀಸಿಗೆ ನ್ಯಾಯಾಲಯದ ಮುಖಾಂತರವೇ ಉತ್ತರ ನೀಡಬೇಕೆಂದು ಕನ್ನಡ ಚಿತ್ರರಂಗ ನಿರ್ಧರಿಸಿದೆ. ಕನ್ನಡದಲ್ಲಿ ಡಬ್ಬಿಂಗ್ ಗೆ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಗಣೇಶ್ ಚೇತನ್ ಎಂಬುವವರು ದೂರು ನೀಡಿದ್ದರು

ಈಗ ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯಾ ನೀಡಿರುವ ನೋಟೀಸಿಗೆ ಡಿಸೆಂಬರ್ 4ರಂದು ಕನ್ನಡ ಚಿತ್ರರಂಗ ಉತ್ತರ ನೀಡಲಿದೆ. ಈ ವಿಷಯದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ, ಡಬ್ಬಿಂಗ್‌ಗೆ ನಮ್ಮ ಸಂಪೂರ್ಣ ವಿರೋಧವಿದೆ ಎಂದು ಕರ್ನಾಟಕ ಫಿಲ್ಮಂ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ವಿಜಯ ಕುಮಾರ್ ಅವರು ಹೇಳಿದ್ದಾರೆ.

English summary
Kannada Chalavali party president Vatal Nagaraj said, Dubbing culture is not acceptable and it will destroy the Kannada film industry. Kannada activists will hold protest on Dec.9 against dubbing

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada