»   » ಥೈಲ್ಯಾಂಡ್ ಬೀಚಿನಲ್ಲಿ ವೀಣಾ ಮಲಿಕ್ ಬಿಕಿನಿಯಲ್ಲಿ

ಥೈಲ್ಯಾಂಡ್ ಬೀಚಿನಲ್ಲಿ ವೀಣಾ ಮಲಿಕ್ ಬಿಕಿನಿಯಲ್ಲಿ

By Prasad
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  'ಸಿಲ್ಕ್ - ಸಖತ್ ಹಾಟ್' ಕನ್ನಡ ಚಿತ್ರಕ್ಕಾಗಿ ತನುಮನವನ್ನು ಹೃತ್ಪೂರ್ವಕವಾಗಿ ಧಾರೆಯೆರೆದಿರುವ ಪಾಕಿಸ್ತಾನದ ನಟಿ ವೀಣಾ ಮಲಿಕ್ ಅವರು ಥೈಲ್ಯಾಂಡ್ ಶೂಟಿಂಗ್ ಮುಗಿಸಿಕೊಡುವಲ್ಲಿ ವೃತ್ತಿಪರತೆಯನ್ನು ಮೆರೆದಿದ್ದಾರೆ. ಕಾಲು ಉಳುಕಿ ಗಾಯವಾಗಿದ್ದರೂ ನಿಗದಿತ ಸಮಯದಲ್ಲಿ ಶೂಟಿಂಗ್ ಮುಗಿಸಿಕೊಟ್ಟಿದ್ದಾರೆ.

  ಸ್ಫಟಿಕದಷ್ಟು ಸ್ವಚ್ಛವಾದ ಫಳಫಳ ಹೊಳೆಯುವ ಬೀಚಿನಲ್ಲಿ ಬಣ್ಣಬಣ್ಣದ ಬಿಕಿನಿಯಲ್ಲಿ ನಿಗಿನಿಗಿ ಕೆಂಡತಂತಹ ದೇಹಸೌಂದರ್ಯವನ್ನು ಪಡೆದಿರುವ ವೀಣಾ ಮಲಿಕ್ ಅವರು ನಾಯಕನಟನಾದ ಅಕ್ಷಯ್ ಜೊತೆ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅದ್ಭುತವಾಗಿ ಸೆರೆಹಿಡಿದಿರುವ ಅವರ ದೇಹಸೌಂದರ್ಯ ಮುಂದೆ ಅನಾವರಣವಾಗಿದೆ ನೋಡಿರಿ. [ವೀಣಾ ಮಲಿಕ್ ಚಿತ್ರಪಟ]

  ತಮ್ಮ ಬಿಕಿನಿ ದೇಹವನ್ನು ತೋರುವುದಕ್ಕೆ ಖ್ಯಾತ ನಟಿಯರೆಲ್ಲ ಸ್ಪರ್ಧೆಗೆ ಇಳಿದಿದ್ದಾರೆ. ಪೂನಂ ಪಾಂಡೆ, ಸನ್ನಿ ಲಿಯೋನ್, ಶೆರ್ಲಿನ್ ಚೋಪ್ರಾ, ರೋಜ್ಲಿನ್ ಖಾನ್, ಕರೀನಾ ಕಪೂರ್... ಪಟ್ಟಿ ದೊಡ್ಡದಾಗಿಯೇ ಇದೆ. ಕೆಲವರಿಗಂತೂ ಬಿಕಿನಿ ಕಂಡರೂ ಅಲರ್ಜಿ. ಅಂದ ಹಾಗೆ, ಜುಲೈ 5 ಅಂತಾರಾಷ್ಟ್ರೀಯ ಬಿಕಿನಿ ದಿನವಂತೆ!

  ಕಾಲು ಉಳುಕಿದರೂ ಡೋಂಟ್ ಕೇರ್

  "ಕಾಲಿಗೆ ಗಾಯವಾಗಿದ್ದರೂ ನಿಗದಿತ ಶೆಡ್ಯೂಲ್‌ನಲ್ಲಿಯೇ ಚಿತ್ರೀಕರಣ ಮುಗಿಸಿರುವುದು ತುಂಬಾ ಸಂತೋಷ ತಂದಿದೆ. ನೋವು ತೀವ್ರವಾಗಿದ್ದರಿಂದ ಶೂಟಿಂಗ್ ನಲ್ಲಿ ಭಾಗವಹಿಸುವುದು ಕಷ್ಟಕರವಾಗಿತ್ತು."

  ನಾನು ಸೂಪರ್ ವುಮನ್

  "ಆದರೆ, ಅದೊಂದು ದೊಡ್ಡ ತೊಂದರೆಯಾಗಿರಲಿಲ್ಲ. ಏಕೆಂದರೆ, ನಾನು ನನ್ನನ್ನು ಸೂಪರ್ ವುಮನ್ ಎಂದು ಪರಿಗಣಿಸುತ್ತೇನೆ. ನನ್ನನ್ನು ಯಾರೂ ತಡೆಯಲು ಸಾಧ್ಯವಿಲ್ಲ."

  ದಿ ಸಿಟಿ ನೆವರ್ ಸ್ಲೀಪ್ಸ್‌ಗೆ ಸಿದ್ಧತೆ

  "ಕಾಲಿನಲ್ಲಿ ಇನ್ನೂ ಸಾಕಷ್ಟು ನೋವಿದ್ದರೂ ಸತೀಶ್ ರೆಡ್ಡಿ ಅವರು ನಿರ್ಮಿಸುತ್ತಿರುವ ಬಾಲಿವುಡ್ ಚಿತ್ರ 'ದಿ ಸಿಟಿ ದಟ್ ನೆವರ್ ಸ್ಲೀಪ್ಸ್'ಕ್ಕಾಗಿ ಸಿದ್ಧತೆ ನಡೆಸಿಕೊಳ್ಳುತ್ತಿದ್ದೇನೆ."

  ಕಾಲುಬೆರಳಿನಲ್ಲಿ ರಕ್ತ ಜಿನುಗುತ್ತಿತ್ತು

  ಹಾಡಿನ ಶೂಟಿಂಗ್ ಸಮಯದಲ್ಲಿ ವೀಣಾ ಮಲಿಕ್ ಕಾಲು ಉಳುಕಿತ್ತು ಮತ್ತು ಕಾಲುಬೆರಳಿನಲ್ಲಿ ರಕ್ತ ಜಿನುಗುತ್ತಿತ್ತು. ಉಳುಕಿದ ಕಾಲಿಗೆ ಬ್ಯಾಂಡೇಜ್ ಕೂಡ ಸುತ್ತಲಾಗಿತ್ತು.

  ಬ್ಯಾಂಡೇಜ್ ಕಾಣದಂತೆ ಎಚ್ಚರ

  ವಿಶ್ರಾಂತಿ ತೆಗೆದುಕೊಳ್ಳಲು ನಿರಾಕರಿಸಿದ ವೀಣಾ ಮಲಿಕ್, ಬ್ಯಾಂಡೇಜ್ ಸುತ್ತಿಕೊಂಡೇ ಚಿತ್ರೀಕರಣಕ್ಕೆ ಸಿದ್ಧರಾದರು. ಸ್ಟಿಲ್ಸ್ ತೆಗೆಯುವಾಗ ಮತ್ತು ಶೂಟಿಂಗ್ ಮಾಡುವಾಗ ಬ್ಯಾಂಡೇಜ್ ಕಾಣದಂತೆ ಎಚ್ಚರವಹಿಸಲಾಗಿದೆ.

  ಸಿಲ್ಕ್ ಸ್ಮಿತಾ ಪಾತ್ರದಲ್ಲಿ ವೀಣಾ

  ತಮ್ಮ ಮಾದಕ ನೋಟದಲ್ಲೇ ಕರೆಂಟ್ ಹೊಡೆಸುತ್ತಿದ್ದ ದಕ್ಷಿಣ ಭಾರತದ ವಿವಾದಾತ್ಮಕ ಖ್ಯಾತ ನಟಿ ದಿ. ಸಿಲ್ಕ್ ಸ್ಮಿತಾ ಅವರ ಕಥೆಯನ್ನಾಧರಿಸಿದ ಚಿತ್ರ 'ಸಿಲ್ಕ್ - ಸಖತ್ ಹಾಟ್'ದಲ್ಲಿ ಸಿಲ್ಕ್ ಆಗಿ ವೀಣಾ ಕಾಣಿಸಿಕೊಳ್ಳುತ್ತಿದ್ದಾರೆ.

  ಡರ್ಟಿ ಹೆಸರಿನ ವಿವಾದ

  ಸಿಲ್ಕ್ ಅವರನ್ನು ಮತ್ತೆ ಜೀವಂತ ತರಲು ಸಾಕಷ್ಟು ಶ್ರಮ ಮತ್ತು ಬೆವರು ಹರಿಸುತ್ತಿದ್ದಾರೆ. ಈ ಚಿತ್ರಕ್ಕೆ ದಿ ಡರ್ಟಿ ಪಿಕ್ಚರ್ ಎಂದು ಹೆಸರಿಟ್ಟಿದ್ದಕ್ಕೆ ಭಾರೀ ವಿವಾದ ಸೃಷ್ಟಿಯಾಗಿತ್ತು. ನಂತರ ಚಿತ್ರದ ಹೆಸರನ್ನು ಬದಲಾಯಿಸಲಾಯಿತು.

  ಅಕ್ಷಯ್ ಜೊತೆ ರೋಮಾನ್ಸ್

  ಥೈಲ್ಯಾಂಡ್ ಅನೇಕ ವಿಹಂಗಮ ತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದ್ದು, ನಾಯಕ ಅಕ್ಷಯ್ ಜೊತೆ ರೋಮ್ಯಾಂಟಿಕ್ ಸನ್ನಿವೇಶಗಳಲ್ಲಿ ನಿರ್ಭಿಡೆಯಾಗಿ ವೀಣಾ ಮಲಿಕ್ ಅಭಿನಯಿಸಿದ್ದಾರೆ.

  ಸಖತ್ ಹಾಟ್ ಆಗಿ ಬಂದಿವೆಯಂತೆ

  ಹಾಡಿನ ಚಿತ್ರೀಕರಣ ಸಖತ್ ಹಾಟ್ ಆಗಿ ಬಂದಿದೆ ಎಂದು ಚಿತ್ರದ ತಂಡದವರು ಹೇಳುತ್ತಾರೆ. ರಕ್ಷಿತ್ ಜೊತೆಗಿನ ಚುಂಬನ ದೃಶ್ಯಗಳು ಪಡ್ಡೆಗಳಿಗೆ ಚಳಿಗಾಲದಲ್ಲೂ ಬಿಸಿಮುಟ್ಟಿಸುವಂತಿವೆ.

  ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ

  ಆರ್.ವಿ.ವೆಂಕಟಪ್ಪ ಚಿತ್ರದ ನಿರ್ಮಾಪಕರು. ಈ ಚಿತ್ರ ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ ಎನ್ನುತ್ತಿದೆ ಚಿತ್ರತಂಡ. ಸೆನ್ಸಾರ್ ಮಂಡಲಿ 'ಎ' ಸರ್ಟಿಫಿಕೇಟ್ ನೀಡಿದೆ. ಈಗ ನಡೆಯುತ್ತಿರುವುದು ಹಾಡಿನ ರಿಶೂಟಿಂಗ್.

  ಡರ್ಟಿಗೂ ಇದಕ್ಕೂ ಸಂಬಂಧವಿಲ್ಲ

  ವಿದ್ಯಾ ಬಾಲನ್ ಅಭಿನಯಿಸಿದ್ದ 'ದಿ ಡರ್ಟಿ ಪಿಕ್ಚರ್' ಚಿತ್ರಕ್ಕೂ 'ಸಿಲ್ಕ್ - ಸಖತ್ ಹಾಟ್' ಚಿತ್ರಕ್ಕೂ ಸಂಬಂಧವಿಲ್ಲ ಎಂದು ಚಿತ್ರದ ನಿರ್ದೇಶಕ ತ್ರಿಶೂಲ್ ಹೇಳಿದ್ದಾರೆ.

  ಥೈಲ್ಯಾಂಡ್ ಹಾಡಿನ ಶೂಟಿಂಗ್

  ವಿದ್ಯಾ ಬಾಲನ್ ಮತ್ತು ಸಿಲ್ಕ್ ಸ್ಮಿತಾ ಕೂಡ ನಾಚಿಕೊಳ್ಳುವಂತೆ ಮತ್ತು ಬೆಚ್ಚಿಬೀಳುವಂತೆ ವೀಣಾ ಮಲಿಕ್ ಈ ಚಿತ್ರದಲ್ಲಿ ತಮ್ಮನ್ನು ಬಿಂಬಿಸಿಕೊಂಡಿದ್ದಾರೆ.

  ಚಿತ್ರ ಗೆಲ್ಲುವುದೆ?

  ಈ ಚಿತ್ರಕ್ಕಾಗಿ ಕೋಟಿ ಕೋಟಿ ಸುರಿದಿರುವ ನಿರ್ಮಾಪಕರು ವೀಣಾ ಮಲಿಕ್ ದೇಹಸೌಂದರ್ಯವನ್ನು ಬಳಸಿಕೊಂಡು ಕಾಸು ಮಾಡುವ ಕನಸು ಕಾಣುತ್ತಿದ್ದಾರೆ. ಕನಸು ನನಸಾಗುವುದೆ?

  ಇನ್ನೂ ಯಾಕೋ ವಿವಾದ ಸೃಷ್ಟಿಯಾಗಿಲ್ಲ

  ಹಿಂದಿಯಲ್ಲಿ ದಿ ಡರ್ಟಿ ಪಿಕ್ಚರ್ ಮಾಡಿದಾಗ ಸಿಲ್ಕ್ ಸ್ಮಿತಾ ಅವರ ಜೀವನವನ್ನು ಸರಿಯಾಗಿ ಚಿತ್ರೀಕರಿಸಿಲ್ಲ ಎಂದು ಕ್ಯಾತೆ ತೆಗೆಯಲಾಗಿತ್ತು. ಆದರೆ, ಸಿಲ್ಕ್ ಸಖತ್ ಹಾಟ್ ಮಗಾ ಚಿತ್ರಕ್ಕೆ ಅಂಥ ಯಾವುದೇ ಪ್ರತಿರೋಧ ಕೇಳಿಬಂದಿಲ್ಲ.

  English summary
  Bollywood bombshell Veena Malik has wrapped up the shooting of her upcoming Kannada movie 'Silk - Sakkath Hot' song in Thailand. The Pakistani actress looks beautiful in bikini swimwear for the song sequence on bikini island.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more