For Quick Alerts
  ALLOW NOTIFICATIONS  
  For Daily Alerts

  ಮೆಜೆಸ್ಟಿಕ್ ನಲ್ಲಿ ವೀಣಾ ಮಲಿಕ್; ಸಂಚಾರ ಅಸ್ತವ್ಯಸ್ತ

  By Rajendra
  |

  ಪಾಕಿಸ್ತಾನದ ಹಾಟ್ ತಾರೆ ವೀಣಾ ಮಲಿಕ್ ದಿಢೀರ್ ಎಂದು ಜನಜಂಗುಳಿ ನಡುವೆ ಪ್ರತ್ಯಕ್ಷವಾದರೆ ಏನಾಗುತ್ತದೆ! ಕಲಾಸಿಪಾಳ್ಯ ಮಾರ್ಕೆಟ್ ನಲ್ಲಿ ಸೀರೆ ಬಿಚ್ಚಿದಂತಾಗುತ್ತದೆ ಅಷ್ಟೆ. ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದಲ್ಲಿ ಬುಧವಾರ (ಜು.4) ಮಧ್ಯಾಹ್ನ ಹಾಗೆಯೇ ಆಯಿತು.

  ಮೆಜೆಸ್ಟಿಕ್ ನಲ್ಲಿ ತಾರೆ ವೀಣಾ ಮಲಿಕ್ ದಿಢೀರ್ ಬಂದಿಳಿದರು. ಮೊದಲೇ ಹಾಟ್ ಬೆಡಗಿ. ಆಕೆಯನ್ನು ಕಣ್ತುಂಬಿಕೊಳ್ಳಲು ಜನಜಂಗುಳಿ ಸಿಕ್ಕಾಪಟ್ಟೇ ಜಮಾಯಿಸಿ ನೂಕುನುಗ್ಗಲು ಸಂಭವಿಸಿತು. ಈ ನೂಕಾಟ, ತಳ್ಳಾಟದಲ್ಲಿ ಕೆಲವರು ಮೈಮರೆತ ಕಾರಣ ಅವರ ಪರ್ಸ್ ಗಳು ಮಂಗಮಾಯವಾಗಿದ್ದವು.

  ಬರೀ ಕಣ್ತುಂಬಿಕೊಂಡಿದ್ದಿದ್ದರೆ ಏನೂ ಆಗುತ್ತಿರಲಿಲ್ಲ. ಕೆಲವರಂತೂ ಆಕೆಯನ್ನು ಸ್ಪರ್ಶಿಸಲು, ಆಕೆಯ ಜೊತೆ ಫೋಟೋ ತೆಗೆಸಿಕೊಳ್ಳಲು ಹಪಹಪಿಸಿದರು. ಕೆಲವರು ವೀಣಾ ಎಂದು ಕೂಗಿ ಆಕೆಯ ಗಮನವನ್ನು ಸೆಳೆಯುವ ವ್ಯರ್ಥ ಪ್ರಯತ್ನಗಳನ್ನೂ ಮಾಡಿದರು.

  ಆದರೆ ವೀಣಾ ಮಲಿಕ್ ಮಾತ್ರ ಕ್ಯಾರೆ ಎನ್ನದೆ ತನ್ನ ಪಾಡಿಗೆ ತಾನು ಚಿತ್ರೀಕರಣದಲ್ಲಿ ತಲ್ಲೀನರಾಗಿದ್ದರು. ಆಕೆ ಕನ್ನಡದ 'ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಹಾಟ್ ಮಗಾ' ಚಿತ್ರದಲ್ಲಿ ಅಭಿನಯಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದ ಶೂಟಿಂಗ್ ಇಂದು ಮೆಜೆಸ್ಟಿಕ್ ನಲ್ಲಿ ನಡೆಯಿತು.

  ಕೇವಲ ಅರ್ಧ ಗಂಟೆ ಕಾಲ ಮಾತ್ರ ನಡೆದ ಚಿತ್ರೀಕರಣದಿಂದ ಮೆಜೆಸ್ಟಿಕ್ ಪ್ರದೇಶದಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. ಜನರ ನೂಕು ನುಗ್ಗಲು ಹೆಚ್ಚಾದ ಕಾರಣ ಅವರನ್ನು ಚದುರಿಸಲು ಪೊಲೀಸರು ತಮ್ಮ ಲಾಠಿಗೆ ಕೆಲಸ ಕೊಡಬೇಕಾಯಿತು. ಒಂದು ಸಣ್ಣ ಸನ್ನಿವೇಶದ ಚಿತ್ರೀಕರಣಕ್ಕಾಗಿ ವೀಣಾ ಮೆಜೆಸ್ಟಿಕ್ ಗೆ ಬಂದಿದ್ದರು.

  ಸಿಲ್ಕ್ ಸ್ಮಿತಾ ಜೀವನ ಕತೆಯಾಧಾರಿತ ಚಿತ್ರ ಇದಾಗಿದೆ. ಆಕ್ಷನ್ ಕಟ್ ಹೇಳುತ್ತಿರುವವರು ತ್ರಿಶೂಲ್. ಚಿತ್ರದ ಸಂಪೂರ್ಣ ಕತೆಯನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡಿ ವೀಣಾ ಮಲಿಕ್ ಕೈಗೆ ಕೊಟ್ಟಿದ್ದರಂತೆ ತ್ರಿಶೂಲ್. ಅದನ್ನು ಓದಿ ಬಹಳ ಇಂಪ್ರೆಸ್ ಆದೆ. ಹಾಗಾಗಿ ಈ ಚಿತ್ರವನ್ನು ಒಪ್ಪಿಕೊಂಡೆ ಎನ್ನುತ್ತಾರೆ ಆಕೆ.

  ಆದರೆ ಚಿತ್ರದಲ್ಲಿ ತಾವು ವೇಶ್ಯೆಯಾಗಿ ಕಾಣಿಸುತ್ತಿಲ್ಲ. ತೆಳ್ಳಗೆ ಬಳುಕುವ ಬಳ್ಳಿಯಂತಿದ್ದ ವೀಣಾ ಈ ಪಾತ್ರಕ್ಕಾಗಿ ಕೊಂಚ ಮೈಕೈ ತುಂಬಿಸಿಕೊಂಡಿದ್ದಾರೆ. ತಮ್ಮ ದೇಹದ ತೂಕವನ್ನು 5 ಕೆ.ಜಿ ಹೆಚ್ಚಿಸಿಕೊಂಡು ದುಂಡಗೆ ಗುಂಡಗೆ ಕಾಣಿಸಲಿದ್ದಾರೆ.

  ಹಿರಿಯ ನಟ ಶ್ರೀನಿವಾಸಮೂರ್ತಿ ಈ ಚಿತ್ರದಲ್ಲಿ ಗಮನಾರ್ಹ ಪಾತ್ರವನ್ನು ಪೋಷಿಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಸಿಲ್ಕ್ ಸ್ಮಿತಾ ಪಾತ್ರದ ನಟಿ ವೀಣಾ ಮಲಿಕ್ ಅವರನ್ನು ವೇಶ್ಯಾವಾಟಿಕೆಗೆ ತಂದು ನಿಲ್ಲಿಸುವ 'ಪಿಂಪ್' ಪಾತ್ರ ಅವರದಂತೆ.

  ಜೊತೆಗೆ ಅವರ ತಂಗಿಯನ್ನೂ ಅದೇ ವೃತ್ತಿಗೆ ತಳ್ಳುವವವರೂ ಇದೇ ಶ್ರೀನಿವಾಸಮೂರ್ತಿಯಂತೆ. 'ಕವಿರತ್ನ ಕಾಳಿದಾಸ' ಚಿತ್ರದ ಭೋಜರಾಜನಂತಹ ಅನನ್ಯ ಪಾತ್ರಗಳಲ್ಲಿ ನೋಡಿರುವ ಪ್ರೇಕ್ಷಕರು ಇದನ್ನು ಇಷ್ಟಪಡಬಹುದೇ ಎಂಬುದು ಹಲವರ ಪ್ರಶ್ನೆ! (ಒನ್ ಇಂಡಿಯಾ ಕನ್ನಡ)

  English summary
  Pakistani hot actress Veena Malik's Kannada film 'Dirty Picture: Silk Sakkat Hot Maga' sequence shoot at Majestic, Bangalore resulted in traffic jam on 4th July Wednesday. Onlookers parked their vehicles on the road itself and office goers were stuck in traffic jam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X