For Quick Alerts
  ALLOW NOTIFICATIONS  
  For Daily Alerts

  ಪಾಕಿಸ್ತಾನಿ ನಟಿ ವೀಣಾ ವಿರುದ್ಧ ಮುತಾಲಿಕ್ ನಡೆಯೇನು?

  |
  <ul id="pagination-digg"><li class="previous"><a href="/news/pramod-muthalik-sri-rama-sene-protests-veena-malik-067419.html">« Previous</a>

  ಅಷ್ಟೇ ಅಲ್ಲ, ಸುಮಾರು 20,000ಕ್ಕೂ ಅಧಿಕ ಮಂದಿ ಅಲ್ಲಿ ವೀಣಾರನ್ನು ನೋಡಲು ಮುಗಿಬಿದ್ದ ಕಾರಣ ಕನ್ನಡದ 'ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಹಾಟ್ ಮಗಾ' ಶೂಟಿಂಗ್ ಕ್ಯಾನ್ಸಲ್ ಆಯಿತು. ಆದರೂ ವೀಣಾ ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡದೆ ಧಾರಾಳವಾಗಿ ಹಸ್ತಾಕ್ಷರ ನೀಡಿದರು. ನಟಿಯೆಂಬ ಬಿಂಕ ಬಿಟ್ಟು ಅವರ ಜೊತೆ ಫೋಟೋ ತೆಗೆಸಿಕೊಂಡು ಹಾಯಾಗಿದ್ದು ಹೋದರು.

  ಸಿಲ್ಕ್ ಸ್ಮಿತಾ ಜೀವನ ಕತೆಯಾಧಾರಿತ ಚಿತ್ರ ಇದಾಗಿದೆ. ಆಕ್ಷನ್ ಕಟ್ ಹೇಳುತ್ತಿರುವವರು ತ್ರಿಶೂಲ್. ಚಿತ್ರದಲ್ಲಿ ತಮ್ಮದು ವೇಶ್ಯೆಯ ಪಾತ್ರವಲ್ಲ ಎಂದು ವೀಣಾ ಸ್ಪಷ್ಟಪಡಿಸಿದ್ದಾರೆ. ಭಾರಿ ಬಜೆಟ್ ಈ ಚಿತ್ರವನ್ನು ನಿರ್ಮಿಸುತ್ತಿರುವವರು ವೆಂಕಟಪ್ಪ. ಅವರ ಮಗ ಅಕ್ಷಯ್ ಈ ಚಿತ್ರದ ನಾಯಕ. ಈ ಚಿತ್ರಕ್ಕಾಗಿ ವೀಣಾರಿಗೆ ರು.70ರಿಂದ 80 ಲಕ್ಷ ಸಂಭಾವನೆ ಸಂದಾಯವಾಗಿದೆಯಂತೆ. ಅಂದರೆ ನಮ್ಮ ರಮ್ಯಾ, ರಾಧಿಕಾ ಪಂಡಿತ್ ಹಾಗೂ ರಾಗಿಣಿಯರ ಎರಡೂವರೆ ಪಟ್ಟು ಜಾಸ್ತಿ.

  ಇಷ್ಟೆಲ್ಲಾ ರಣ-ರಾದ್ಥಾಂತ ನಡೆಯುತ್ತಿದ್ದರೂ 'ಡರ್ಟಿ ಪಿಕ್ಚರ್' ತಂಡ ಮಾತ್ರ ತನ್ನ ಪಾಡಿಗೆ ತಾನು ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರಂತರವಾಗಿ ನಿರತವಾಗಿದೆ. ಪ್ರಮೋದ್ ಮುತಾಲಿಕ್ ಹೇಳಿಕೆ, ಪ್ರತಿಭಟನೆ ಹಾಗೂ ವಾದ-ವಿವಾದಗಳೆಲ್ಲಾ ತಮ್ಮ ಚಿತ್ರದ ಪ್ರಚಾರಕ್ಕೆ ಆದ ಅನುಕೂಲ ಎಂಬಂತೆ ಚಿತ್ರತಂಡ ಬಾಯಿಮುಚ್ಚಿಕೊಂಡು ತನ್ನ ಪಾಡಿಗೆ ತಾನಿದೆ.

  ಯಾವುದೇ ಕಾರಣಕ್ಕೂ ಪಾಕಿಸ್ತಾನಿ ನಟಿಯೊಬ್ಬಳ ನಟನೆಯ ಕನ್ನಡ ಚಿತ್ರವನ್ನು ಬಿಡಗಡೆ ಮಾಡಲು ಬಿಡೊಲ್ಲ ಎಂಬ ಪ್ರಮೋದ್ ಮುತಾಲಿಕ್ ಮಾತಿಗೆ ಚಿತ್ರತಂಡ ಏನೆನ್ನುವುದೋ ಎಂಬ ಕುತೂಹಲ ಎಲ್ಲರಲ್ಲಿದೆ. ಪ್ರಮೋದ್ ಮುತಾಲಿಕ್ ಮುಂದಿನ ನಡೆ ಏನಿರಬಹುದೆಂಬ ಚರ್ಚೆಯೂ ಇದೀಗ ಗಾಂಧಿನಗರದಲ್ಲಿ ಪ್ರಾರಂಭವಾಗಿದೆ. ಒಟ್ಟಿನಲ್ಲಿ 'ಡರ್ಟಿ ಪಿಕ್ಚರ್- ಸಿಲ್ಕ್ ಸಖತ್ ಹಾಟ್ ಮಗಾ' ಬಿಡುಗಡೆಗೆ ವಿಘ್ನವಂತೂ ಎದುರಾಗಿದೆ. ಮುಂದೇನು ಎಂಬುದು ಸದ್ಯಕ್ಕೆ ನಿಗೂಢ...(ಒನ್ ಇಂಡಿಯಾ ಕನ್ನಡ)

  <ul id="pagination-digg"><li class="previous"><a href="/news/pramod-muthalik-sri-rama-sene-protests-veena-malik-067419.html">« Previous</a>
  English summary
  Srirama Sene chief Pramod Muthalik told that he would not give up to release the Kannada film 'Dirty Picture- Silk Sakhath Hot Maga' acted by Pakistani actress Veena Malik. He added that there are so many good actress in Kannada Industry itself and no need to call Pakistani actors. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X