»   » ಸಿಲ್ಕ್ ಸ್ಮಿತಾ-ರಜನಿ ಸ್ಟೆಪ್ಸ್ ಹಾಕಲಿರುವ ವೀಣಾ ಮಲಿಕ್

ಸಿಲ್ಕ್ ಸ್ಮಿತಾ-ರಜನಿ ಸ್ಟೆಪ್ಸ್ ಹಾಕಲಿರುವ ವೀಣಾ ಮಲಿಕ್

Posted By:
Subscribe to Filmibeat Kannada

ಕನ್ನಡದ 'ಡರ್ಟಿ ಪಿಕ್ಚರ್, ಸಿಲ್ಕ್ ಸಖತ್ ಹಾಟ್ ಮಗಾ' ಚಿತ್ರದಲ್ಲಿ ನಟಿಸಿರುವ ಪಾಕಿಸ್ತಾನಿ ನಟಿ ವೀಣಾ ಮಲಿಕ್ ಹಾಗೂ ಈ ಚಿತ್ರ ಮತ್ತೊಮ್ಮೆ ಸುದ್ದಿಯಾಗುತ್ತಿದೆ. ಆದರೆ ಈಗಿನ ಸುದ್ದಿಯಲ್ಲಿ ವಿಶೇಷತೆಯಿದೆ. ಅದು ರಜನಿಕಾಂತ್ ಹಾಗೂ ಸಿಲ್ಕ್ ಸ್ಮಿತಾ ನಟನೆಯ ಚಿತ್ರಗಳ ಹಾಡುಗಳು ಮತ್ತು ಹೆಜ್ಜೆಗಳನ್ನು ಈ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗುವುದು.

ವೀಣಾ ನಟನೆಯ 'ಡರ್ಟಿ ಪಿಕ್ಚರ್, ಸಿಲ್ಕ್ ಸಖತ್ ಹಾಟ್ ಮಗಾ' ಚಿತ್ರದಲ್ಲಿ ನಟ, ನಿರ್ಮಾಪಕರ ಮಗ ಅಕ್ಷಯ್ ನಾಯಕ. ಈ ಚಿತ್ರದಲ್ಲಿ ನಾಯಕ ಅಕ್ಷಯ್ ಹಾಗೂ ನಾಯಕಿ ವೀಣಾ, ಚುಂಬನದ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು ಇತ್ತೀಚಿಗೆ ಭಾರಿ ವಿವಾದಾತ್ಮಕ ಸುದ್ದಿಯಾಗಿತ್ತು. ಅದು ಸಿನಿಮಾಕ್ಕೆ ಅಗತ್ಯವಿದೆ ಹಾಗೂ ಅದರಲ್ಲಿ ಆಕ್ಷೇಪಿಸುವಂತ ಯಾವುದೇ ಅಂಶಗಳಿಲ್ಲ ಎಂದು ಚಿತ್ರತಂಡ ಸ್ಪಷ್ಟೀಕರಣ ನೀಡುವುದರೊಂದಿಗೆ ವಿವಾದ ತಣ್ಣಗಾಗಿತ್ತು.

ಇದೀಗ ಮತ್ತೆ ಸುದ್ದಿಯಾಗುತ್ತಿರುವ ವೀಣಾ ನಟನೆಯ ಈ ಚಿತ್ರದ ಮೂಲಕ ಸಂಪೂರ್ಣ ದಕ್ಷಿಣ ಭಾರತದ ಸಿನಿಪ್ರಿಯರೆಲ್ಲರೂ ಥ್ರಿಲ್ ಅನುಭವಿಸುತ್ತಿದ್ದಾರೆ. ಕಾರಣ, ಹಿಂದೊಂದು ಕಾಲದಲ್ಲಿ ಸಿಲ್ಕ್ ಹಾಗೂ ರಜನಿ ಹಾಕಿದ ಸ್ಟೆಪ್ಸ್ ಗೆ ಈಗ ವೀಣಾ ಮತ್ತು ಅಕ್ಷಯ್ ಜೋಡಿ ಹಾಕಲಿರುವ ಹೆಜ್ಜೆ ಬಗ್ಗೆ ಸಹಜವಾಗಿಯೇ ಎಲ್ಲರಲ್ಲೂ ಅಚ್ಚರಿ ಹಾಗೂ ಕುತೂಹಲ ವ್ಯಕ್ತವಾಗಿದೆ. ರಜನಿ ಜೊತೆ ಸಿಲ್ಕ್ ಹಾಕಿದ ಹೆಜ್ಜೆಗಳನ್ನು ಮತ್ತೊಮ್ಮೆ ನೋಡಲು ಸಹಜವಾಗಿಯೇ ಎಲ್ಲರ ಕಣ್ಣುಗಳೂ ಕಾತರಿಸುತ್ತಿವೆ.

ಅಷ್ಟೇ ಅಲ್ಲ, ತೆಲುಗು ಮೆಗಾ ಸ್ಟಾರ್ ಚಿರಂಜೀವಿ ಹಾಗೂ ಕನ್ನಡದ ರೆಬೆಲ್ ಸ್ಟಾರ್ ಅಂಬರೀಷ್ ಅವರೊಂದಿಗೆ ಸಿಲ್ಕ್ ಸ್ಮಿತಾ ಹೆಜ್ಜೆ ಹಾಕಿದ ಹಾಡುಗಳೂ ಸೇರಿಕೊಳ್ಳಲಿವೆಯಂತೆ. ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿ ಬಿಡುಗಡೆಯನ್ನು ಎದುರುನೋಡುವಂತೆ ಮಾಡಿರುವ ಈ 'ಡರ್ಟಿ ಪಿಕ್ಚರ್, ಸಿಲ್ಕ್ ಸಖತ್ ಹಾಟ್ ಮಗಾ' ಇನ್ನೂ ಸಾಕಷ್ಟು ವಿಶೇಷತೆ ಹಾಗೂ ವಿಭಿನ್ನತೆಗಳಿಂದ ಪ್ರೇಕ್ಷಕರನ್ನು ಸೆಳೆಯಲಿದೆ. ಈಗಂತೂ ಹಳೆಯ ಹಾಡುಗಳನ್ನು ಮತ್ತೆ ನೋಡುವ ಸೌಭಾಗ್ಯ ಪ್ರೇಕ್ಷಕರಿಗಿದೆ.

ಇತ್ತೀಚಿಗಷ್ಟೇ, ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ನಡೆದ ಚಿತ್ರೀಕರಣದಲ್ಲಿ ಈ ಹಾಡುಗಳು ಶೂಟ್ ಆಗಿವೆ. ಆದರೆ ಹಾಡುಗಳು ಯಾವುದೆಂಬ 'ಫುಲ್ ಡೀಟೇಲ್ಸ್' ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಅದರಲ್ಲೊಂದು ಹಾಡು ಮಾತ್ರ ಈಗಾಗಲೇ ಜನರ ಕಿವಿ ತಲುಪಿದೆ. ಅದು ಯೋಗರಾಜ್ ಭಟ್ ಬರೆದು ಜೆಸ್ಸಿ ಗಿಫ್ಟ್ ಸಂಗೀತ ನೀಡಿರುವ 'ಉಂಡಾಡಿ ಗುಂಡಮ್ಮ...' ಎಂಬ ಹಾಡು. ಈ ಹಾಡಿಗೆ ನೃತ್ಯ ಸಂಯೋಜನೆ ಚಾಮರಾಜ್ ಮತ್ತು ಧನು ಅವರದು. ಮಿಕ್ಕ ಹಾಡುಗಳ ಮಾಹಿತಿ ಬಹಿರಂಗವಾಗುವವರೆಗೆ ಕಾಯಲೇಬೇಕು... (ಏಜೆನ್ಸೀಸ್)

English summary
Veena Malik in Dirty Picture Silk Sakkath Maga will be grooving for the tune of Rajinikanth and Silk Smitha song.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada