For Quick Alerts
  ALLOW NOTIFICATIONS  
  For Daily Alerts

  ಹಾಟ್ ತಾರೆ ವೀಣಾ ಮಲಿಕ್ ಖತರ್ನಾಕ್ ಚಿತ್ರಗಳು

  By ರವಿಕಿಶೋರ್
  |

  ಇದು ಯಾವ ಚಿತ್ರದ ಫೋಟೋಗಳಪ್ಪಾ ಈ ಪರಿ ಇವೆ ಎಂದು ಅಚ್ಚರಿಯಾಗುತ್ತಿದೆಯೇ? ಇದು ಅಪ್ಪಟ ಕನ್ನಡ ಸಿನಿಮಾದ ಚಿತ್ರಗಳು ಎಂದರೆ ನಿಮಗೆ ಅಚ್ಚರಿಯಾಗುತ್ತದೆ. ಪಾಕಿಸ್ತಾನದ ಖತರ್ನಾಕ್ ತಾರೆ ವೀಣಾ ಮಲಿಕ್ ಅಭಿನಯದ 'ಸಿಲ್ಕ್ ಸಖತ್ ಹಾಟ್' ಚಿತ್ರದ ಲೇಟೆಸ್ಟ್ ಚಿತ್ರಗಳಿವು.

  ಈ ಚಿತ್ರಕ್ಕೆ ಮೊದಲು ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಹಾಟ್ ಮಗ ಎಂದಿಡಲಾಗಿತ್ತು. ಏಕಾಏಕಿ ತಮ್ಮ ಡರ್ಟಿ ಪಿಕ್ಚರ್ ಚಿತ್ರದ ಹೆಸರನ್ನಿಟ್ಟರೆ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಸುಮ್ಮನಿರ್ತಾರಾ. ಆಕೆ ಕೋರ್ಟ್ ನಲ್ಲಿ ದಾವಾ ಹೂಡಿ ಗೆದ್ದರು. ಬಳಿಕ ಚಿತ್ರದ ಶೀರ್ಷಿಕೆ ಸಿಲ್ಕ್ ಸಖತ್ ಹಾಟ್ ಎಂದು ಬದಲಾಯಿತು.

  ಇದೆಲ್ಲಾ ಹಳೆ ಕಥೆ ಬಿಡಿ. ಈಗ ಈ ಚಿತ್ರದ ಲೇಟೆಸ್ಟ್ ಸ್ಟಿಲ್ಸ್ ಬಿಡುಗಡೆಯಾಗಿವೆ. ಫೋಟೋಗಳು ಒಂದಕ್ಕಿಂತ ಒಂದು ಹಾಟ್ ಆಗಿದ್ದು, ಪಡ್ಡೆಗಳು ಪಲ್ಟಿ ಹೊಡೆಯುವುದು ಗ್ಯಾರಂಟಿ ಎಂಬಂತಿವೆ. ಮುಂದಿವೆ ನೋಡಿ ವೀಣಾ ಮೈನವಿರೇಳಿಸುವ ಚಿತ್ರಗಳು.

  ವೀಣಾ ಮಲಿಕ್ ಜೊತೆ ಅಕ್ಷಯ್ ರೋಮ್ಯಾನ್ಸ್

  ವೀಣಾ ಮಲಿಕ್ ಜೊತೆ ಅಕ್ಷಯ್ ರೋಮ್ಯಾನ್ಸ್

  ತ್ರಿಶೂಲ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಅಕ್ಷಯ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೆಂಕಟಪ್ಪ ನಿರ್ಮಿಸುತ್ತಿದ್ದಾರೆ. ವೀಣಾ ಮಲಿಕ್ ಜೊತೆ ರೋಮ್ಯಾನ್ಸ್ ಮಾಡುತ್ತಿರುವವರು ನಟ ಅಕ್ಷಯ್. ಸನಾ ಖಾನ್, ಶ್ರೀನಿವಾಸಮೂರ್ತಿ ಚಿತ್ರದಲ್ಲಿದ್ದಾರೆ.

  ಕಥೆಗೆ ಸಿಲ್ಕ್ ಸ್ಮಿತಾ ಅವರೇ ಸ್ಫೂರ್ತಿಯಂತೆ

  ಕಥೆಗೆ ಸಿಲ್ಕ್ ಸ್ಮಿತಾ ಅವರೇ ಸ್ಫೂರ್ತಿಯಂತೆ

  ಒಂದು ಕಾಲದಲ್ಲಿ ರೇಶ್ಮೆಯಂತಹ ತಮ್ಮ ಮೈಸಿರಿಯಿಂದಲೇ ಪ್ರೇಕ್ಷಕರನ್ನು ಬೆಚ್ಚಗೆ ಮಾಡಿದ್ದ ಸಿಲ್ಕ್ ಸ್ಮಿತಾ ಅವರೇ ಈ ಚಿತ್ರಕ್ಕೆ ಸ್ಫೂರ್ತಿ ಎನ್ನಲಾಗಿದೆ. ಆದರೆ ಹಿಂದಿಯ 'ಡರ್ಟಿ ಪಿಕ್ಚರ್' ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿರಲ್ಲ ಎನ್ನುತ್ತಿದ್ದಾರೆ ಚಿತ್ರದ ನಿರ್ದೇಶಕರು.

  ಶೃಂಗಾರಭರಿತ ಸನ್ನಿವೇಶಗಳಿಗೆ ಹೆಚ್ಚು ಒತ್ತು?

  ಶೃಂಗಾರಭರಿತ ಸನ್ನಿವೇಶಗಳಿಗೆ ಹೆಚ್ಚು ಒತ್ತು?

  ಈ ಚಿತ್ರದ ತಾಜಾ ಸ್ಟಿಲ್ಸ್ ನೋಡುತ್ತಿದ್ದರೆ ಕಥೆಗಿಂತಲೂ ಹೆಚ್ಚಾಗಿ ವೀಣಾ ಅವರ ಶೃಂಗಾರಭರಿತ ಸನ್ನಿವೇಶಗಳಿಗೆ ಹೆಚ್ಚು ಒತ್ತು ನೀಡಲಾಗಿರುವುದು ಸ್ಪಷ್ಟವಾಗುತ್ತದೆ.

  ತಮ್ಮ ಪಾತ್ರ ನಿಮ್ಮನ್ನು ಆವರಿಸಿಕೊಳ್ಳುತ್ತದೆ

  ತಮ್ಮ ಪಾತ್ರ ನಿಮ್ಮನ್ನು ಆವರಿಸಿಕೊಳ್ಳುತ್ತದೆ

  ಸಿಲ್ಕ್ ಸಖತ್ ಹಾಟ್ ಚಿತ್ರದ ಬಗ್ಗೆ ಮಾತನಾಡಿರುವ ವೀಣಾ, "ಚಿತ್ರವನ್ನು ನೀವು ನೋಡಿ. ತಮ್ಮ ಪಾತ್ರ ನಿಮ್ಮನ್ನು ಆವರಿಸಿಕೊಳ್ಳದೆ ಬಿಡದು. ಅಷ್ಟೊಂದು ಪರಿಣಾಮಕಾರಿಗಿರುತ್ತದೆ" ಎಂದಿದ್ದಾರೆ. ಆದರೆ ತಾವು ಹಿಂದಿಯ 'ಡರ್ಟಿ ಪಿಕ್ಚರ್' ನೋಡಿಲ್ಲ ಎಂದಿದ್ದಾರೆ.

  ವಿದ್ಯಾ ಬಾಲನ್ ಅಭಿನಯಕ್ಕಿಂತಲೂ ಸೂಪರ್

  ವಿದ್ಯಾ ಬಾಲನ್ ಅಭಿನಯಕ್ಕಿಂತಲೂ ಸೂಪರ್

  ಆದರೆ ವಿದ್ಯಾ ಬಾಲನ್ ಅವರ ಅಭಿನಯ ಹೇಗೋ ಏನೋ ತಮಗೆ ಗೊತ್ತಿಲ್ಲ. ಚಿತ್ರದಲ್ಲಿ ತಮ್ಮ ಅಭಿನಯವಂತೂ ಸೊಗಸಾಗಿರುತ್ತದೆ ಎಂದಿದ್ದಾರೆ.

  ಸಿಲ್ಕ್ ಸ್ಮಿತಾ ಅದ್ಭುತ ಕಲಾವಿದೆ; ವೀಣಾ

  ಸಿಲ್ಕ್ ಸ್ಮಿತಾ ಅದ್ಭುತ ಕಲಾವಿದೆ; ವೀಣಾ

  ಸಿಲ್ಕ್ ಸ್ಮಿತಾ ಅವರ ಜೀವನ ಬಗ್ಗೆ ಓದಿ ತಿಳಿದುಕೊಂಡಿದ್ದೇನೆ. ಆಕೆ ಒಬ್ಬ ಅದ್ಭುತ ಕಲಾವಿದೆ ಎಂದಿದ್ದಾರೆ ವೀಣಾ ಮಲಿಕ್.

  ಇದೇನು ಬಿ ಗ್ರೇಡ್ ಚಿತ್ರವೇ?

  ಇದೇನು ಬಿ ಗ್ರೇಡ್ ಚಿತ್ರವೇ?

  ಇಷ್ಟೊತ್ತು ನೀವು ವೀಣಾ ಎಲ್ಲಾ ಫೋಟೋಗಳನ್ನು ನೋಡಿದ್ದೀರಿ. ಆಕೆಯ ಶೃಂಗಾರಭರಿತ ಫೋಟೋಗಳನ್ನು ನೋಡಿದ ಮೇಲೆ ಕಡೆಗೂ ಒಂದು ಪ್ರಶ್ನೆಗೆ ಕಾಡುತ್ತದೆ. ಇದೇನು ಬಿ ಗ್ರೇಡ್ ಸಿನಿಮಾನಾ ಎಂದು.

  ಎ ಗ್ರೇಡ್ ಚಿತ್ರವಂತೂ ಹೌದು

  ಎ ಗ್ರೇಡ್ ಚಿತ್ರವಂತೂ ಹೌದು

  ಇದು ಬಿ ಗ್ರೇಡ್ ಚಿತ್ರವೋ ಏನೋ ಗೊತ್ತಿಲ್ಲ. ಆದರೆ 'ಎ' (ವಯಸ್ಕರ ಚಿತ್ರ) ಗ್ರೇಡ್ ಚಿತ್ರವಂತೂ ಹೌದು ಎಂಬ ಡೌಟು ಬರುತ್ತದೆ. ಸೆನ್ಸಾರ್ ಮಂಡಳಿ ಏನು ನಿರ್ಧಾರ ತೆಗೆದುಕೊಳ್ಳುತ್ತದೋ ನೋಡೋಣ.

  English summary
  Bollywood actress Veena Malik hot stills from Kananda film Silk Sakkath Hot. 'The Dirty Picture' in Kannada has got no relation to the Hindi version. Yes, it is the story of Silk but it's a different story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X