»   » ಕಾಡುಗಳ್ಳ ವೀರಪ್ಪನ್ ದೆವ್ವ ಆಗಿದ್ದಾನೆ..!

ಕಾಡುಗಳ್ಳ ವೀರಪ್ಪನ್ ದೆವ್ವ ಆಗಿದ್ದಾನೆ..!

Posted By:
Subscribe to Filmibeat Kannada

ಹೌದು...ನೀವು ಓದಿದ್ದು ಅಕ್ಷರಶಃ ನಿಜ. ಕಾಡುಗಳ್ಳ ವೀರಪ್ಪನ್ ದೆವ್ವ ಆಗಿದ್ದಾನೆ.! ನಂಬಿದ್ರೆ ನಂಬಿ...ಇದು ನಾವು ಹೇಳುತ್ತಿರುವ ಮಾತಲ್ಲ. ಖುದ್ದು ವೀರಪ್ಪನ್ ಆತ್ಮವನ್ನ ಕಣ್ಣಾರೆ ಕಂಡವರು ಉದ್ಘರಿಸಿರುವ ಸಾಲು.

ಕಾಡುಗಳ್ಳ ವೀರಪ್ಪನ್ ಸತ್ತು ಬರೋಬ್ಬರಿ 10 ವರ್ಷಗಳಾಗಿವೆ (ಅಕ್ಟೋಬರ್ 18, 2004). ಇಲ್ಲಿವರೆಗೂ ತೆರೆಮೇಲಷ್ಟೆ ಸುದ್ದಿ ಮಾಡಿದ್ದ ವೀರಪ್ಪನ್ ಈಗ ರಿಯಲ್ಲಾಗೂ ಸೌಂಡ್ ಮಾಡುತ್ತಿದ್ದಾನೆ.

ಎಸ್.ಟಿ.ಎಫ್ ಅಧಿಕಾರಿಗಳ ಕೈಯಲ್ಲಿ ಹತ್ಯೆ ಆದ ವೀರಪ್ಪನ್ ಆತ್ಮ ಇನ್ನೂ ಕಾಡಿನಲ್ಲಿ ಅಲೆದಾಡುತ್ತಿದೆ. ಅಂತಹ ಭಯಾನಕ ಅನುಭವ ಗಾಂಧಿನಗರದಲ್ಲಿ ಒಬ್ಬರಿಗೆ ಆಗಿದೆ. ಆ ಮೈನವಿರೇಳಿಸುವ ಸುದ್ದಿ ಇಲ್ಲಿದೆ. ಮುಂದೆ ಓದಿ....

ದೆವ್ವ ಆದ ವೀರಪ್ಪನ್..!

ಹಲವಾರು ಅಮಾಯಕರನ್ನ ಕೊಂದು 'ನರಹಂತಕ' ಅಂತ ಕುಖ್ಯಾತಿ ಗಳಿಸಿದ್ದ ವೀರಪ್ಪನ್ ಈಗ ದೆವ್ವ ಆಗಿದ್ದಾನೆ ಅಂತ ಗಾಂಧಿನಗರದಿಂದ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಅಸಲಿಗೆ ವೀರಪ್ಪನ್ ಆತ್ಮ ಗೋಚರಿಸಿದ್ದು, ವೀರಪ್ಪನ್ ಪಾತ್ರಧಾರಿ ಆಗಬೇಕಿದ್ದ ಎಚ್.ವಿ.ಅಣ್ಣಪ್ಪ ಅವರಿಗೆ. [ದಂತಚೋರ ವೀರಪ್ಪನ್ ನ ಕೊಂದವರು ಯಾರು?]

'ಮತ್ತೆ ಬಂದ ವೀರಪ್ಪನ್'

ಕಾಡುಗಳ್ಳ ವೀರಪ್ಪನ್ ಕುರಿತಾಗಿ ಹಲವಾರು ಸಿನಿಮಾಗಳು ಬಂದ್ಹೋಗಿವೆ. ಆ ಲಿಸ್ಟ್ ನಲ್ಲಿ ಸೇರಬೇಕಿದ್ದ ಹೊಚ್ಚ ಹೊಸ ಸಿನಿಮಾ 'ಮತ್ತೆ ಬಂದ ವೀರಪ್ಪನ್'. ಯುವ ಪ್ರತಿಭೆ ಪುರುಶೋತ್ತಮ್ ಚಿತ್ರದ ನಿರ್ದೇಶಕ. ವೀರಪ್ಪನ್ ಪಾತ್ರಧಾರಿ ಆಗಿ ಆಯ್ಕೆ ಆದ ನಟ ಎಚ್.ವಿ.ಅಣ್ಣಪ್ಪ.

ಅಣ್ಣಪ್ಪಗೆ ಆಯ್ತು ವಿಚಿತ್ರ ಅನುಭವ

'ಮತ್ತೆ ಬಂದ ವೀರಪ್ಪನ್' ಸಿನಿಮಾ ಒಪ್ಪಿಕೊಂಡಾಗಿನಿಂದಲೂ ಎಚ್.ವಿ.ಅಣ್ಣಪ್ಪ ಅವರಿಗೆ ವಿಚಿತ್ರ ಅನುಭವ ಆಗುವುದಕ್ಕೆ ಶುರುವಾಯ್ತಂತೆ. ಒಮ್ಮೆ ಅವರಿಗೆ ಆಕ್ಸಿಡೆಂಟ್ ಆಯ್ತು. ಕೂದಲೆಳೆ ಅಂತರದಲ್ಲಿ ಬಚಾವ್ ಆದ ಅಣ್ಣಪ್ಪ, ತೀವ್ರ ಜ್ವರದಿಂದ ಬಳಲಿದರು. ಕೆಲವೊಮ್ಮೆ ಅವರಿಗೆ ಖುದ್ದು ವೀರಪ್ಪನ್ ಎದುರಿಗೆ ಬಂದಂತೆ ಭಾಸವಾಗುತ್ತಿತ್ತಂತೆ. [ಸಿನಿಮಾದವ್ರಿಗೆ ದೇವರಿಗಿಂತ ದೆವ್ವಾನೇ ಬಲು ಇಷ್ಟ]

ಚಿತ್ರದಿಂದ ಹಿಂದಕ್ಕೆ ಸರಿದ ಅಣ್ಣಪ್ಪ

ಪ್ರತಿದಿನ ಒಂದಲ್ಲಾ ಒಂದು ಭಯಾನಕ ಅನುಭವ ಎದುರಿಸುತ್ತಿದ್ದ ಅಣ್ಣಪ್ಪ, 'ಮತ್ತೆ ಬಂದ ವೀರಪ್ಪನ್' ಚಿತ್ರದಿಂದ ಹೊರ ಬಂದಿದ್ದಾರೆ. ಎಷ್ಟೇ ದುಡ್ಡು ಕೊಟ್ಟರೂ ವೀರಪ್ಪನ್ ಪಾತ್ರ ಮಾತ್ರ ಮಾಡೋದಿಲ್ಲ ಅಂತಿದ್ದಾರೆ.

'ಮತ್ತೆ ಬಂದ ವೀರಪ್ಪನ್' ಕಥೆ ಕ್ಲೋಸ್!

ಅಣ್ಣಪ್ಪ ಅವರಿಗಾಗಿರುವ ಅನುಭವ ಕೇಳಿ ಇಡೀ ಚಿತ್ರತಂಡ ಬೆಚ್ಚಿಬಿದ್ದಿದೆ. ರಿಸ್ಕ್ ತೆಗೆದುಕೊಳ್ಳುವುದು ಬೇಡ ಅಂತ 'ಮತ್ತೆ ಬಂದ ವೀರಪ್ಪನ್' ಪ್ರಾಜೆಕ್ಟ್ ಡ್ರಾಪ್ ಮಾಡುವುದಕ್ಕೆ ನಿರ್ದೇಶಕ ಪುರುಶೋತ್ತಮ್ ನಿರ್ಧರಿಸಿದ್ದಾರೆ. ಈಗಾಗಲೇ, ಎಲ್ಲಾ ಕಲಾವಿದರಿಗೂ ಸಂಭಾವನೆ ಕೂಡ ನೀಡಿ, ಇನ್ನು ಕೆಲವೇ ದಿನಗಳಲ್ಲಿ 'ಮತ್ತೆ ಬಂದ ವೀರಪ್ಪನ್' ಶೂಟಿಂಗ್ ಶುರುವಾಗ್ಬೇಕಿತ್ತು. ಆದ್ರೆ, ಅಷ್ಟರಲ್ಲೇ ಘಟಿಸಿದ ಕೆಲ ಅಗೋಚರ ಘಟನೆಗಳು ಸಿನಿಮಾ ಸ್ಟಾಪ್ ಆಗುವಂತಾಗಿದೆ.

'ಮುತ್ತುಲಕ್ಷ್ಮಿ' ಸಿನಿಮಾ ಕೂಡ ಡ್ರಾಪ್ ಆಯ್ತು

ವೀರಪ್ಪನ್ ಮತ್ತು ಪತ್ನಿ ಮುತ್ತುಲಕ್ಷ್ಮಿ ಬಗ್ಗೆ ಹೆಣೆಯಲಾಗಿದ್ದ ಪೂಜಾ ಗಾಂಧಿ ಅಭಿನಯಿಸಬೇಕಿದ್ದ 'ಮುತ್ತುಲಕ್ಷ್ಮಿ' ಚಿತ್ರ ಕೂಡ ಹಲವಾರು ಕಾರಣಗಳಿಂದ ನಿಂತುಹೋಯ್ತು. [ನಟಿ ಪೂಜಾ ಗಾಂಧಿ ನಸೀಬು ನೆಟ್ಟಗಿಲ್ಲ ಕಣ್ರೀ..]

'ಅಟ್ಟಹಾಸ' ನಿರ್ದೇಶಕರು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ

ವೀರಪ್ಪನ್ ಬದುಕಿನ ಕುರಿತು ನಿರ್ದೇಶಕ ಎ.ಎಮ್.ಆರ್.ರಮೇಶ್ ನಿರ್ದೇಶಿಸಿದ್ದ 'ಅಟ್ಟಹಾಸ' ಚಿತ್ರ ಕೂಡ ಹಲವಾರು ಕಷ್ಟ-ನಷ್ಟ ಅನುಭವಿಸಿತು. ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಕೋರ್ಟ್ ಮೆಟ್ಟಿಲೇರಿದ್ದರು. [ಅಟ್ಟಹಾಸ : ನಿಸ್ಸಂದೇಹವಾಗಿ ಒಳ್ಳೆ ಸಿನಿಮಾ]

ಈಗ 'ಕಿಲ್ಲಿಂಗ್ ವೀರಪ್ಪನ್'

ವಿವಾದಗಳು ಉಂಟಾಗುತ್ತದೆ ಅಂತ ಗೊತ್ತಿದ್ದರೂ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಮಾಡುತ್ತಿದ್ದಾರೆ. ವೀರಪ್ಪನ್ ಹತ್ಯೆ ಮಾಡುವ ಪ್ರಮುಖ ಪಾತ್ರದಲ್ಲಿ ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಇನ್ಯಾವ ಅಡ್ಡಿ ಆತಂಕ ಬರುತ್ತದೋ ಗೊತ್ತಿಲ್ಲ. [ಶಿವಣ್ಣನ ಕೈಲಿ ವೀರಪ್ಪನ್ ಹತ್ಯೆ ಮಾಡಿಸ್ತಾರೆ ವರ್ಮಾ.!]

ದೆವ್ವ ಅಂತ ಯಾರು ನಂಬುತ್ತಾರೆ?

ದೆವ್ವ ಇದೆಯೋ, ಇಲ್ಲವೋ ಅನ್ನುವ ಬಗ್ಗೆ ಇವತ್ತಿಗೂ ಚರ್ಚೆ ನಡೆಯುತ್ತಲೇ ಇದೆ. ವೀರಪ್ಪನ್ ದೆವ್ವ ಆಗಿದ್ದಾನೆ. ಅದ್ರಲ್ಲೂ 10 ವರ್ಷದ ನಂತ್ರ ಒಬ್ಬರಿಗೆ ಕಾಟ ಕೊಡ್ತಾನೆ ಅಂದ್ರೆ ನಂಬೋದು ಕೊಂಚ ಕಷ್ಟ. ಆದ್ರೆ, ಅಣ್ಣಪ್ಪ ಎದುರಿಸಿರುವ ಪ್ರಾಣಾಪಾಯ ಇಡೀ ಚಿತ್ರತಂಡವನ್ನ ನಡುಗಿಸಿದೆ. ಇದೆಲ್ಲಾ ಮೂಢನಂಬಿಕೆಯೋ ಅಥವಾ ಕಾಕತಾಳೀಯವೋ..ಎಲ್ಲವೂ ಅವರವರ ಭಾವಕ್ಕೆ ಬಿಟ್ಟ ವಿಚಾರ.

English summary
Veerappan is dead and gone. But his ghost is said to have haunted 'Matte Banda Veerappan' Actor Annappa. Hence, 'Matte Banda Veerappan' film is shelved.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada