»   » 'ಲಿಂಗಾ' ಫ್ಲಾಪ್ ಚಿತ್ರ ಎಂದು ಪ್ರಚಾರ ಮಾಡಿದರೆ ಕೇಸು

'ಲಿಂಗಾ' ಫ್ಲಾಪ್ ಚಿತ್ರ ಎಂದು ಪ್ರಚಾರ ಮಾಡಿದರೆ ಕೇಸು

Posted By: ಶಂಕರ್, ಚೆನ್ನೈ
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ತಾಜಾ 'ಲಿಂಗಾ' ಚಿತ್ರದ ಬಗ್ಗೆ ಇಲ್ಲಸಲ್ಲದ ಹಾಗೂ ಸತ್ಯಕ್ಕೆ ದೂರವಾದ ಪ್ರಚಾಗಳನ್ನು ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಆ ಚಿತ್ರವನ್ನು ಬಿಡುಗಡೆ ಮಾಡಿರುವ ವೇಂದರ್ ಮೂವೀಸ್ ಸಂಸ್ಥೆ ಎಚ್ಚರಿಸಿದೆ.

ರಜನಿಕಾಂತ್ ಅವರ ಹುಟ್ಟಿದ ಹಬ್ಬದ ದಿನ ಡಿಸೆಂಬರ್ 12ರಂದು ವಿಶ್ವದಾದ್ಯಂತ ಬಿಡುಗಡೆಯಾದ ಲಿಂಗಾ ಚಿತ್ರದ ಬಗ್ಗೆ ನಾನಾ ರೀತಿಯ ಊಹಾಪೋಹಗಳು ಹರಿದಾಡುತ್ತಿವೆ. ಈ ಬಗ್ಗೆ ಕಠಿಣ ಕ್ರಮಕ್ಕೆ ಮುಂದಾಗಿದೆ ವೇಂದರ್ ಮೂವೀಸ್. [ಲಿಂಗಾ ಚಿತ್ರ ವಿಮರ್ಶೆ]

"ನಿರೀಕ್ಷಿಸಿದ ಮಟ್ಟದಲ್ಲಿ ಚಿತ್ರ ಇಲ್ಲವೆಂದೂ, ರಜನಿಕಾಂತ್ ಹಾಗೂ ಕೆ.ಎಸ್.ರವಿಕುಮಾರ್ ಅವರ ಕಾಂಬಿನೇಷನಲ್ಲಿ ಬಂದಂತಹ ಮುತ್ತು, ಪಡಯಪ್ಪ ಚಿತ್ರಗಳಿಗೆ ಹೋಲಿಸಿದರೆ 'ಲಿಂಗಾ' ಚಿತ್ರ ಜನಮನ ಗೆಲ್ಲುವಲ್ಲಿ ವಿಫಲವಾಗಿದೆ" ಎಂಬ ನಾನಾ ರೀತಿಯ ಪ್ರಚಾರಗಳು ಚಾಲ್ತಿಯಲ್ಲಿವೆ.

Vendhar movies take legal action against who spread false on Lingaa

ಇದಿಷ್ಟೇ ಅಲ್ಲದೆ ಬಾಕ್ಸ್ ಆಫೀಸ್ ಗಳಿಕೆಯಲ್ಲೂ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ವಸೂಲಿ ಮಾಡುತ್ತಿಲ್ಲ. ಇದರಿಂದ ಥಿಯೇಟರ್ ಮಾಲೀಕರು ರಜನಿ ಅವರನ್ನು ಭೇಟಿ ಮಾಡಿ ನಷ್ಟ ಪರಿಹಾರ ಕೇಳಲು ಸಿದ್ಧರಾಗಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ವೇಂದರ್ ಮೂವೀಸ್ ಸಂಸ್ಥೆ ಕಾನೂನು ಕ್ರಮಕ್ಕೆ ಮುಂದಾಗಿದೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ವೇಂದರ್ ಮೂವೀಸ್ ಸಂಸ್ಥೆಯವರು ಮಾತನಾಡುತ್ತಾ, "ಲಿಂಗಾ ಚಿತ್ರದ ಬಗ್ಗೆ ತಪ್ಪು ಪ್ರಚಾರ ಮಾಡಲಾಗುತ್ತಿದೆ. ಹಲವಾರು ರಾಜ್ಯಗಳಲ್ಲಿ ವಿದ್ಯಾರ್ಥಿಗಳಿಗೆ ಅರ್ಧ ವಾರ್ಷಿಕ ಪರೀಕ್ಷೆಗಳು ನಡೆಯುತ್ತಿವೆ. ಲಿಂಗಾ ಚಿತ್ರವನ್ನು 600 ಚಿತ್ರಮಂದಿರಗಳಲ್ಲಿ ಒಮ್ಮೆಲೆ ಬಿಡುಗಡೆ ಮಾಡಿದ ಕಾರಣ ಗಳಿಕೆ ಪ್ರಮಾಣದಲ್ಲಿ ಸ್ವಲ್ಪ ಇಳಿಕೆಯಾಗಿರುವ ಮಾತು ನಿಜ" ಎಂದಿದೆ.

ಎರಡನೇ ವಾರದಿಂದ ಚಿತ್ರವನ್ನು ವೀಕ್ಷಿಸಲು ಕುಟುಂಬ ಸಮೇತ ಅಭಿಮಾನಿಗಳು ಹರಿದುಬರುತ್ತಿದ್ದಾರೆ. ಗಳಿಕೆಯಲ್ಲೂ ಗಣನೀಯವಾಗಿ ಏರಿಕೆ ಕಂಡುಬಂದಿದೆ. ಲಿಂಗಾ ಚಿತ್ರದ ವಿರುದ್ಧ ಅಸತ್ಯ ಪ್ರಚಾರ ಮಾಡಿದರೆ ಕ್ರಮಕೈಗೊಳ್ಳುತ್ತೇವೆ. ಲಿಂಗಾ ಚಿತ್ರವನ್ನು ವಿಮರ್ಶಕರಿಗಾಗಿ ತೆಗೆದಿಲ್ಲ ಎಂದೂ ಚಿತ್ರದ ನಿರ್ದೇಶಕ ಕೆ.ಎಸ್.ರವಿಕುಮಾರ್ ಹೇಳಿದ್ದಾರೆ.

ನಮ್ಮ ಸಿನಿಮಾ ಫ್ಲಾಪ್ ಎಂದು ಪ್ರಚಾರ ಮಾಡಿದರೆ ಕೇಸ್ ಹಾಕುತ್ತೇವೆ ಎಂದಿದೆ ಸಂಸ್ಥೆ. ಈ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ಅನುಷ್ಕಾ ಶೆಟ್ಟಿ, ಸೋನಾಕ್ಷಿ ಸಿನ್ಹಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಕೆ ಎಸ್ ರವಿಕುಮಾರ್ ಆಕ್ಷನ್ ಕಟ್ ಹೇಳಿರುವ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಿಸಿದ್ದು ವಿಶ್ವಪಾಪಿ ವಿತರಣೆ ಹಕ್ಕುಗಳನ್ನು ಇರೋಸ್ ಇಂಟರ್ ನ್ಯಾಶನಲ್ ಸಂಸ್ಥೆ ಹೊಂದಿದ್ದು, ತಮಿಳುನಾಡು, ಕೇರಳ ರಾಜ್ಯಗಳ ವಿತರಣೆ ಹಕ್ಕುಗಳನ್ನು ವೇಂದರ್ ಮೂವೀಸ್ ಸಂಸ್ಥೆ ಪಡೆದುಕೊಂಡಿದೆ.

English summary
Some film distributors have protested that the collections for the superstar Rajinikanth movie Linga is not as per expectations. In this situation, the company ‘Vendhar Movies’ which released the movie in Tamil Nadu had made a press release: ‘All theatres screening Linga are overflowing with crowd. There has been no reduction in collections by any account’.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada