For Quick Alerts
  ALLOW NOTIFICATIONS  
  For Daily Alerts

  'ಫೈರಿಂಗ್ ಸ್ಟಾರ್' 'ಪೊರ್ಕಿ ವೆಂಕಟ್'ಗೆ 'ಸ್ಲಂ'ನಲ್ಲಿ ಮೂಹೂರ್ತ

  By Suneetha
  |

  ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು 'ಪೊರ್ಕಿ ಹುಚ್ಚ ವೆಂಕಟ್' ಸಿನಿಮಾ ಮಾಡ್ತೀನಿ ಅಂತ ಯಾವಾಗ್ಲೂ ಹೇಳ್ತಾನೇ ಇದ್ರು. ಇದೀಗ ಕೊನೆಗೂ ಫೈರಿಂಗ್ ಸ್ಟಾರ್ ವೆಂಕಟ್ ಅವರ ಹೊಸ ಸಿನಿಮಾಗೆ ಮೂಹೂರ್ತ ನೆರವೇರಿದೆ.

  ಅದು ತಮ್ಮ ಲಕ್ಕಿ ಜಾಗವಾಗಿರುವ ಸ್ಲಂ ಪ್ರದೇಶದಲ್ಲಿ. ಹೌದು ವೆಂಕಟ್ ಅವರು ತಮ್ಮ ಹೊಸ ಸಿನಿಮಾ 'ಪೊರ್ಕಿ ಹುಚ್ಚ ವೆಂಕಟ್' ಸಿನಿಮಾಗೆ ತಮ್ಮ ಲಕ್ಕಿ ಜಾಗವಾದ ಬೆಂಗಳೂರಿನ ಚಾಮರಾಜ ಪೇಟೆಯ ಟಿ.ಆರ್.ಮಿಲ್ ಬಳಿ ಇರುವ ಕೊಳಗೇರಿ ಪ್ರದೇಶದಲ್ಲಿ ಮುಹೂರ್ತ ನೆರವೇರಿಸಿದ್ದಾರೆ.[60 ವರ್ಷದ ನಂತರ ಪ್ರಧಾನಿ ಆಗುತ್ತೇನೆ ಎಂದ ಹುಚ್ಚ ವೆಂಕಟ್]

  ಈ ಮೊದಲು ಫೈರಿಂಗ್ ಸ್ಟಾರ್ ವೆಂಕಟ್ ಅವರ ಲಕ್ಕಿ ಪ್ರದೇಶವಾದ ಟಿ.ಆರ್.ಮಿಲ್ ನ ಸ್ಲಂ ನಲ್ಲಿ ತಮ್ಮ ಎರಡು ಸಿನಿಮಾಗಳ ಚಿತ್ರೀಕರಣ ನಡೆಸಿದ್ದರು. ಇದೀಗ 'ಪೊರ್ಕಿ ಹುಚ್ಚ ವೆಂಕಟ್' ಚಿತ್ರದ ಮುಹೂರ್ತವನ್ನು ಅಲ್ಲೇ ಅದ್ಧೂರಿಯಾಗಿ ಮಾಡಿ ಮುಗಿಸಿದ್ದಾರೆ.

  ಗುರುವಾರ (ಜನವರಿ 21) ದಂದು ಸಂಜೆ ಚಿತ್ರದ ಮುಹೂರ್ತ ನೆರವೇರಿದ್ದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ದೀಪ ಬೆಳಗಿಸಿ ಚಿತ್ರಕ್ಕೆ ಮುಹೂರ್ತ ನೆರವೇರಿಸಿ 'ಪೊರ್ಕಿ ಹುಚ್ಚ ವೆಂಕಟ್' ಸಿನಿಮಾಗೆ ಶುಭ ಕೋರಿದ್ದಾರೆ.[ವೆಂಕಟ್ 'ಡಿಕ್ಟೇಟರ್'ಗೆ ಎಸ್.ನಾರಾಯಣ್ ಆಕ್ಷನ್-ಕಟ್]

  ನಟ ಅನಿರುದ್ಧ್, ಕೆ.ಎಫ್.ಸಿ.ಸಿ ಮಾಜಿ ಅಧ್ಯಕ್ಷ ಕಮ್ ನಿರ್ಮಾಪಕ ವಿಜಯಕುಮಾರ್ ಮುಂತಾದವರು ಚಿತ್ರದ ಮುಹೂರ್ತಕ್ಕೆ ಆಗಮಿಸಿ ಸಿನಿಮಾ ಯಶಸ್ವಿಯಾಗಲಿ ಎಂದು ಮನತುಂಬಿ ಹಾರೈಸಿದ್ದಾರೆ.

  ಅಂದಹಾಗೆ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ಸಿನಿಮಾವನ್ನು ಸದ್ಯಕ್ಕೆ ಆರಂಭಿಸದಿದ್ದರೂ ಬಿಡುಗಡೆ ಮಾಡೋದು ಮಾತ್ರ ಈ ವರ್ಷದ ಕೊನೆಯಲ್ಲಂತೆ. ಅಲ್ಲಿತನಕ ಒಂದಲ್ಲಾ ಒಂದು ಅಚ್ಚರಿಗಳನ್ನು ನೀಡುತ್ತಲೇ ಇರುತ್ತಾರಂತೆ.[ಪುಸ್ತಕದಲ್ಲಿ ವೆಂಕಟ್ - ಹುಚ್ಚು ಮನಸ್ಸಿನ ನೂರು ಮುಖಗಳು!]

  ಇನ್ನು ಚಿತ್ರದಲ್ಲಿ ಇಬ್ಬರು ನಾಯಕಿ ನಟಿಯರಿದ್ದು, ಯಾರೆಂಬುದು ಇನ್ನು ಪಕ್ಕಾ ಆಗಿಲ್ಲ. ಇನ್ನುಳಿದಂತೆ ವೆಂಕಟ್ ಅವರ ಚಿತ್ರತಂಡವೇ 'ಪೊರ್ಕಿ ಹುಚ್ಚ ವೆಂಕಟ್' ನಲ್ಲೂ ಮುಂದುವರೆಯಲಿದೆ.

  English summary
  'Firing Star' Venkat has launched his new film 'Porki Huchcha Venkat' in a slum in Chamarajapet. Veteran actress Bharathi Vishnuvardhan and KFCC ex-president B Vijayakumar came over as chief guests for the launch of the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X