Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಾಹಿತ್ಯ-ನಾಟಕ ರಂಗದ ಮೂಗಿಗೆ ತುಪ್ಪ ಸವರಿದ ಯಡಿಯೂರಪ್ಪ ಬಜೆಟ್
ಸಿಎಂ ಹಾಗೂ ಸ್ವತಃ ಹಣಕಾಸು ಸಚಿವರೂ ಆಗಿರುವ ಯಡಿಯೂರಪ್ಪ ಅವರು ಇಂದು ಕರ್ನಾಟಕ ರಾಜ್ಯ ಬಜೆಟ್ 2021-22 ಅನ್ನು ವಿಧಾನಸೌಧದಲ್ಲಿ ಮಂಡಿಸಿದರು.
ಯಥಾವತ್ತು ಮಠಗಳು, ಜಾತಿ ಮಂಡಳಿಗಳು, ನಿಗಮಗಳಿಗೆ ಕೋಟ್ಯಂತರ ಹಣವನ್ನು ಬಜೆಟ್‌ನಲ್ಲಿ ಮೀಸಲಿಡಲಾಯಿತು. ಶಿಕ್ಷಣ, ಆರೋಗ್ಯ ಇನ್ನಿತರೆ ಪ್ರಮುಖ ಅಗತ್ಯಗಳಿಗೆ ಅನುದಾನಗಳನ್ನು ನೀಡಲಾಯಿತು. ಆದರೆ ಕೆಲವು ಕ್ಷೇತ್ರಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರೆ ಕೆಲವಕ್ಕೆ ಮೂಗಿಗೆ ತುಪ್ಪು ಸವರಲಾಯಿತು.
ಚಿತ್ರೋದ್ಯಮವನ್ನು ಈ ಬಜೆಟ್‌ನಲ್ಲಿ ನಿರ್ಮಲಕ್ಷಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಉಳಿದಂತೆ ಸಾಹಿತ್ಯ ಹಾಗೂ ನಾಟಕ ರಂಗಕ್ಕೆ ನಾಮ್‌ಕೆ ವಾಸ್ತೆ ಕಿರು ಯೋಜನೆಗಳನ್ನು ನೀಡಲಾಗಿದೆ.
ಸಾಹಿತಿ ಎಸ್.ಎಲ್.ಭೈರಪ್ಪ ಅವರ ಕೃತಿ 'ಪರ್ವ' ಅನ್ನು ರಂಗಕ್ಕೆ ಅಳವಡಿಸಿ ರಾಜ್ಯದಾದ್ಯಂತ ವಿವಿಧ ರಂಗತಂಡಗಳ ಮೂಲಕ ಪ್ರದರ್ಶಿಸಲು ಒಂದು ಕೋಟಿ ರುಪಾಯಿ ಹಣವನ್ನು ನೀಡುವುದಾಗಿ ಬಜೆಟ್‌ನಲ್ಲಿ ಹೇಳಿದರು ಯಡಿಯೂರಪ್ಪ.
ಅದರ ನಂತರ ಬೆಂಗಳೂರಿನ ಮಲ್ಲತ್ತಹಳ್ಳಿ ರಂಗ ಚಟುವಟಿಕೆ ಹಾಗೂ ಸಾಹಿತ್ಯ ಚಟುವಟಿಕೆಗೆ ಎರಡು ಕೋಟಿ ರೂಪಾಯಿ ಹಣ ಮೀಸಲಿಡುವುದಾಗಿ ಹೇಳಿದ್ದಾರೆ ಯಡಿಯೂರಪ್ಪ.
Recommended Video
ಆದಿಕವಿ ಪಂಪನಿಂದ ಮುದ್ದಣನ ಕಾಲಘಟ್ಟದ ವರೆಗೆ ಎಲ್ಲ ಕೃತಿಗಳ ಡಿಜಲೀಕರಣ ಹಾಗೂ ಆನ್‌ಲೈನ್‌ನಲ್ಲಿ ಲಭ್ಯವಾಗಿಸಲು ಕ್ರಮ ಕೈಗೊಳ್ಳುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಜೊತೆಗೆ ಮುಂಬರುವ ಹಾವೇರಿ ಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರವು ಭರಪೂರ ನೆರವು ನೀಡುವುದಾಗಿ ಹೇಳಿದ್ದಾರೆ ಯಡಿಯೂರಪ್ಪ.