For Quick Alerts
  ALLOW NOTIFICATIONS  
  For Daily Alerts

  'ಎಡಕಲ್ಲು ಗುಡ್ಡದ ಮೇಲೆ' ಖ್ಯಾತಿಯ ಚಂದ್ರಶೇಖರ್ ಇನ್ನಿಲ್ಲ

  By Pavithra
  |
  ಎಡಕಲ್ಲು ಗುಡ್ಡದ ಮೇಲೆ' ಖ್ಯಾತಿಯ ಚಂದ್ರಶೇಖರ್ ಇನ್ನಿಲ್ಲ | Filmibeat Kannada

  ಸಂತೋಷ ಹ ಹ..ಸಂಗೀತ ಹ ಹ ...ಎಂದು ಹಾಡು ಕೇಳಿದಾಗ ನೆನಪಾಗುತ್ತಿದ್ದ ನಟ ಚಂದ್ರಶೇಖರ್ ಇನ್ನು ನೆನಪು ಮಾತ್ರ. ಎಡಕಲ್ಲು ಗುಡ್ಡದ ಮೇಲೆ ಸಿನಿಮಾದಲ್ಲಿನ ನಂಜುಂಡ ಪಾತ್ರದ ಮೂಲಕ ಇಡೀ ಕನ್ನಡ ಸಿನಿಮಾರಂಗದ ಪ್ರೇಕ್ಷಕರನ್ನ ತನ್ನತ್ತ ಸೆಳೆದಿದ್ದ ನಟ ಚಂದ್ರಶೇಖರ್ ಇಂದು ಇಹಲೋಕ ತ್ಯಜಿಸಿದ್ದಾರೆ.

  ಕಳೆದ ಹತ್ತು ದಿನಗಳ ಹಿಂದೆಯಷ್ಟೇ ಕೆನಡಾಗೆ ಪ್ರಯಾಣ ಬೆಳೆಸಿದ್ದ ಚಂದ್ರಶೇಖರ್ ಅವರಿಗೆ ಕಾಲಿನಲ್ಲಿ ಬ್ಲಡ್ ಕ್ಲಾಟ್ ಆಗಿತ್ತು. ನಂತರ ಹೃದಯದಲ್ಲಿ ರಕ್ತದೊತ್ತಡ ಕಾಣಿಸಿಕೊಂಡು ಇಂದು ಮುಂಜಾನೆ ಕೆನಡಾದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

  ಸಿನಿಮಾರಂಗದಲ್ಲಿ ಎಡಕಲ್ಲು ಗುಡ್ಡ ಚಂದ್ರಶೇಖರ್ ಹಾಗೂ ಕೆನಡಾ ಚಂದ್ರಶೇಖರ್ ಅಂತಾನೇ ಪ್ರಖ್ಯಾತಿ ಪಡೆದಿದ್ದರು . ಚಂದ್ರು ಅವರ ಪತ್ನಿ ಕೆನಡಾದಲ್ಲಿ ಭರತನಾಟ್ಯ ಶಾಲೆಯನ್ನ ನಡೆಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಚಂದ್ರಶೇಖರ್ ಮತ್ತು ಮಗಳು ತಾನ್ಯ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ವಾಸವಾಗಿದ್ದರು.

  ಸುಮಾರು 70ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಚಂದ್ರಶೇಖರ್ ಅಭಿನಯಿಸಿದ್ದರು. ಮಗಳು ತಾನ್ಯ ಅವರನ್ನ ಚಿತ್ರರಂಗಕ್ಕೆ ಪರಿಚಯಿಸುವ ಅಪಾರ ಆಸೆಯನ್ನ ಹೊಂದಿದ್ದರು. ಚಂದ್ರು ಅವರ ನಿಧನಕ್ಕೆ ಕನ್ನಡ ಸಿನಿಮಾರಂಗ ಕಂಬನಿ ಮಿಡಿದಿದ್ದು ಅಂತ್ಯ ಸಂಸ್ಕಾರದ ಬಗ್ಗೆ ಕುಟುಂಬಸ್ಥ ಇನ್ನು ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಸುದ್ದಿಗಳ ಪ್ರಕಾರ ಕೆನಡಾದಲ್ಲಿಯೇ ಅಂತ್ಯಸಂಸ್ಕಾರ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.

  English summary
  Veteran Actor, edakallu guddada mele Chandrashekar passes away in Canada today (January 27th) Chandrasekhar has acted in more than 60 Kannada movies ಕನ್ನಡದ ನಟ ಎಡಕಲ್ಲು ಗುಡ್ಡದ ಮೇಲೆ ಚಂದ್ರಶೇಖರ್ ಇಂದು ಕೆನಡಾದಲ್ಲಿ ನಿಧನರಾಗಿದ್ದಾರೆ. ಚಂದ್ರಶೇಖರ್ ಸುಮಾರು 60ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದರು

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X