»   » ಬಹುಭಾಷಾ ನಟ ಓಂ ಪುರಿ ವಿಧಿವಶ

ಬಹುಭಾಷಾ ನಟ ಓಂ ಪುರಿ ವಿಧಿವಶ

Posted By:
Subscribe to Filmibeat Kannada

ಬಹುಭಾಷಾ ನಟ ಓಂ ಪುರಿ ಅವರು ಹೃದಯಾಘಾತಕ್ಕೊಳಗಾಗಿ ಶುಕ್ರವಾರ ಬೆಳಗ್ಗೆ ಮೃತರಾಗಿದ್ದಾರೆ. ಕನ್ನಡ ಚಿತ್ರರಂಗ ಸೇರಿದಂತೆ ಬಾಲಿವುಡ್, ಹಾಲಿವುಡ್ ಚಿತ್ರರಂಗದಲ್ಲಿ ಜನಪ್ರಿಯ ನಟರಾಗಿದ್ದ ಓಂ ಪುರಿ ಅವರಿಗೆ 66 ವರ್ಷ ವಯಸ್ಸಾಗಿತ್ತು. ಪತ್ನಿ ನಂದಿತಾ ಪುರಿ ಇವರ ಪುತ್ರ ಇಶಾನ್ ಸೇರಿದಂತೆ ಅಪಾರ ಅಭಿಮಾನಿ ವರ್ಗವನ್ನು ಅಗಲಿದ್ದಾರೆ.

ಹರ್ಯಾಣದ ಅಂಬಾಲದ ಪಂಜಾಬಿ ಕುಟುಂಬದಲ್ಲಿ ಜನಿಸಿದ ಓಂ ಪುರಿ ಅವರು ಪುಣೆಯ ಇನ್ಸಿಟ್ಯೂಟ್ ನ ಪದವೀಧರ, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ನಾಸೀರುದ್ದೀನ್ ಶಾ ಅವರ ಸಹಪಾಠಿಯಾಗಿದ್ದರು. ನಂದಿತಾ ಅವರನ್ನು ಮದುವೆಯಾಗಿದ್ದ ಓಂ ಪುರಿ ಅವರು 2013ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು.['ಒನ್ ಇಂಡಿಯಾ'ದೊಂದಿಗೆ ಬೇಸರ ಹಂಚಿಕೊಂಡ ಶಿವಣ್ಣ]

Veteran Actor Om Puri Passes Away

ವೈವಿಧ್ಯಮಯ ಚಿತ್ರಗಳಲ್ಲಿ ನಟನೆ: ಕಲಾತ್ಮಾಕ, ಬ್ರಿಜ್ ಸಿನಿಮಾ, ಪ್ಯಾರಲಲ್ ಸಿನಿಮ ಎಂದರೆ ಓಂ ಪುರಿ ನೆನಪಾಗುತ್ತಾರೆ. ರಂಗಭೂಮಿಯ ಹಿನ್ನಲೆಯಿಂದ ಬಂದಿರುವ ಓಂ ಅವರು ಎಲ್ಲಾ ರೀತಿಯ ಪಾತ್ರಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತಿದ್ದರು. ಅರ್ಧ್ ಸತ್ಯ, ಮಿರ್ಚ್ ಮಸಾಲಾ, ಧಾರಾವಿ ಚಿತ್ರಗಳ ಮೂಲಕ ಇವರ ಪ್ರತಿಭೆ ಬೆಳಕಿಗೆ ಬಂದಿತು.

ಗುಪ್ತ್ ಚಿತ್ರದಲ್ಲಿ ಧರಿಸಿದ ಖಾಕಿ ದಿರಿಸು ಇವರಿಗೆ ಹಲವು ಆಫರ್ ಗಳನ್ನು ತಂದುಕೊಟ್ಟಿತು. ಕನ್ನಡದಲ್ಲಿ ಶಿವರಾಜ್ ಕುಮಾರ್ ಅಭಿನಯದ ಎಕೆ 47 ರಲ್ಲಿ ಖಡಕ್ ಅಧಿಕಾರಿಯಾಗಿ ಕಾಣಿಸಿಕೊಂಡರು.[ಗ್ಯಾಲರಿ : ವೈವಿಧ್ಯಮಯ ಚಿತ್ರಗಳಲ್ಲಿ ಓಂ ಪುರಿ]

ಹಾಲಿವುಡ್ ನಲ್ಲಿ ಸಿಟಿ ಆಫ್ ಜಾಯ್, ದಿ ಗೋಸ್ಟ್ ಅಂಡ್ ದಿ ಡಾರ್ಕ್ ನೆಸ್, ಚಾರ್ಲಿಸ್ ವಿಲ್ಸನ್ ವಾರ್ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡರು. ಟಿವಿ ಸರಣಿಯಲ್ಲಿ ಆಹಾರ್, ಭಾರತ್ ಏಕ್ ಕೋಜ್, ಸೀ ಹಾಕ್ಸ್ ಮುಂತಾದ ಜನಪ್ರಿಯ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.

ಪದ್ಮಶ್ರೀ, ರಾಷ್ಟ್ರಪ್ರಶಸ್ತಿ, ಫಿಲಂಫೇಸ್, ಬಾಫ್ತಾ, ಬ್ರಿಟಿಷ್ ಸರ್ಕಾರದ ಗೌರವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದರು.

Read in English: Om Puri passes away
English summary
Veteran actor OM Puri passed away at his residence on Friday morning. He suffered a massive cardiac arrest. He was 66.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada