For Quick Alerts
  ALLOW NOTIFICATIONS  
  For Daily Alerts

  ಇಳಿ ವಯಸಿನಲ್ಲೂ 3ನೇ ಮದುವೆಗೆ ಚತುರ್ಭಾಷಾ ನಟ ರೆಡಿ

  |

  ನಟ-ನಟಿಯರ ಬದುಕಿನಲ್ಲಿ ಮದುವೆ ನಂತರ ಡೈವೋರ್ಸ್ ಗಳು ಅಪರೂಪವೇನಲ್ಲ. ಕಮಲಹಾಸನ್ ಮೊದಲ್ಗೊಂಡು ಅಮೀರ್ ಖಾನ್, ಅರವಿಂದ ಸ್ವಾಮಿ, ಪ್ರಭುದೇವ, ಪ್ರಕಾಶ್ ರೈ ಹೀಗೆ ಸಾಲು ಸಾಲು ನಟರ ವೈವಾಹಿಕ ಬುದುಕು ಚಿಂದಿ ಚಿತ್ರಾನ್ನವೇ ಆಗಿ ಹೋಗಿದೆ.

  ಕನ್ನಡ ಸೇರಿ ದಕ್ಷಿಣದ ಚತುರ್ಭಾಷೆಯಲ್ಲಿ ನಟಿಸಿದ್ದ ಯಶಸ್ವಿ ನಟ ಶರತ್ ಬಾಬು ಮೂರನೇ ಮದುವೆಗೆ ಸನ್ನದ್ದರಾಗಿದ್ದಾರೆ. ವಯಸ್ಸು 61 ಆದರೂ ತನಗೆ ಇನ್ನೂ ಮೂವತ್ತೈದರ ಯುವಕನ ದೇಹ ಮತ್ತು ಶಕ್ತಿಯನ್ನು ಹೊಂದಿದ್ದೇನೆ ಎಂದು ಶರತ್ ಬಾಬು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದ್ದಾರೆ.

  ಶರತ್ ಬಾಬು ಈ ಹಿಂದೆ 1998ರಲ್ಲಿ ಮೊದಲ ಪತ್ನಿ ರಮಾಪ್ರಭಾಗೆ ಮತ್ತು 2011ರಲ್ಲಿ ಎರಡನೇ ಪತ್ನಿ ಸ್ನೇಹಲತಾಗೆ ವಿವಾಹ ವಿಚ್ಚೇದನ ನೀಡಿದ್ದರು. ತನ್ನ ಮೂರನೇ ಪತ್ನಿಯಾಗುವವರ ಬಗ್ಗೆ ಹೆಚ್ಚಿನ ವಿವರ ಬಿಟ್ಟುಕೊಡದ ಶರತ್ ಬಾಬು ಈಕೆ ಪತ್ರಕರ್ತೆಯೆಂದು ಮಾತ್ರ ಹೇಳಿದ್ದಾರೆ.

  ನಾನು ಮದುವೆಯಾಗುತ್ತಿರುವವಳ ಹೆಸರು ಐದು ಹೆಸರಿನದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಮುಂದಿನ ದಿನದಲ್ಲಿ ನೀಡುತ್ತೇನೆ ಎಂದು ಶರತ್ ಬಾಬು ಹೇಳಿದ್ದಾರೆ.

  ಪರದೆಯ ಮೇಲೆ ಉತ್ತಮ ಗೆಳೆಯನಾಗಿ, ಸಹೋದರನಾಗಿ, ಪತಿಯಾಗಿ ನಟಿಸಿರುವ ಶರತ್ ಬಾಬು ಸುಮಾರು ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ತನ್ನ ಸಿನಿಮಾ ವೃತ್ತಿ ಜೀವನದಲ್ಲಿ 37 ವರ್ಷಗಳನ್ನು ಕಳೆದಿದ್ದಾರೆ.

  ಶರತ್ ಎರಡನೇ ಪತ್ನಿ ಸ್ನೇಹಲತಾ ಮೊದಲ ಗಂಡನಿಂದ ಬೇರ್ಪಟ್ಟ ನಂತರ ಶರತ್ ಬಾಬುರನ್ನು ಇಷ್ಟಪಟ್ಟಿದ್ದರು. ಆಗ ಶರತ್ ಬಾಬು ತಮ್ಮ ಮೊದಲ ಪತ್ನಿ ರಮಾಪ್ರಭಾಗೆ ವಿಚ್ಛೇದನ ಕೊಟ್ಟು ಈಕೆಯನ್ನು ವರಿಸಿ ಮೇ 28, 1990 ರಂದು ಸ್ನೇಹಲತಾರನ್ನು ಮದುವೆಯಾಗಿದ್ದರು.

  1973ರಲ್ಲಿ ಸ್ತ್ರೀ ಎನ್ನುವ ತೆಲುಗು ಚಿತ್ರದ ಮೂಲಕ ಬಣ್ಣದ ಬದುಕಿಗೆ ಅಡಿಯಿಟ್ಟ ಶರತ್ ಬಾಬು, 1980ರಲ್ಲಿ ತುಳಸೀದಳ ಎನ್ನುವ ಕನ್ನಡದ ಚಿತ್ರದ ಮೂಲಕ ಸ್ಯಾಂಡಲ್ ವುಡ್ಡಿಗೆ ಪಾದಾರ್ಪಣೆ ಮಾಡಿದ್ದರು.

  ಅಮೃತವರ್ಷಿಣಿ ಅವರು ನಟಿಸಿದ ಸುಮಾರು ಕನ್ನಡ ಚಿತ್ರಗಳಲ್ಲಿ ಸೂಪರ್ ಹಿಟ್ ಆದ ಚಿತ್ರ. ಶಿವರಾಜ್ ಕುಮಾರ್ ಅಭಿನಯದ ಆರ್ಯನ್, ದರ್ಶನ್ ಅಭಿನಯದ ಬೃಂದಾವನ ಚಿತ್ರದಲ್ಲಿ ಶರತ್ ಬಾಬು ನಟಿಸುತ್ತಿದ್ದಾರೆ.

  English summary
  The veteran actor Sarath babu all set to tie the knot for the third time. The 61-old year actor has confirmed this news stated, I feel like I am just 35-years-old both physically and mentally. The name of the person I will be marrying will be of 5 letters and she comes from a journalist background.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X