For Quick Alerts
  ALLOW NOTIFICATIONS  
  For Daily Alerts

  ಬಹುಭಾಷಾ ನಟಿ ಬಿ.ವಿ ರಾಧಾ ವಿಧಿವಶ

  By Mahesh
  |

  ಕನ್ನಡ ಚಿತ್ರರಂಗದ ಹಿರಿಯ ನಟಿ ಬೆಂಗಳೂರು ವಿಜಯ ರಾಧಾ ಅವರು ಬೆಂಗಳೂರಿನ ಕಲ್ಯಾಣನಗರದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ರಾಧಾ ಅವರ ಪತಿ ಕೆಎಸ್ಎಲ್ ಸ್ವಾಮಿ ಅವರು ಎರಡು ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

  ಕೆಲ ವರ್ಷಗಳ ಹಿಂದೆ ಕ್ಯಾನ್ಸರಿಗೆ ತುತ್ತಾಗಿದ್ದ ರಾಧಾ ಅವರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಆದರೆ, ನಿನ್ನೆ ಬೆಳಗ್ಗೆ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಗೆ ಸೇರಿದ್ದರು. ಭಾನುವಾರ ಮುಂಜಾನೆ 4 ಗಂಟೆ ವೇಳೆಗೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಪುತ್ರಿ ಧನಲಕ್ಷ್ಮಿ ಹಾಗೂ ಅಪಾರ ಅಭಿಮಾನಿ ಬಳಗವನ್ನು ಮೃತರು ಅಗಲಿದ್ದಾರೆ.


  ಹೊರಮಾವಿನಲ್ಲಿರುವ ಅವರ ನಿವಾಸದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಬಿ.ವಿ ರಾಧಾ ಅವರ ಇಚ್ಛೆಯಂತೆ ಅವರ ಪಾರ್ಥೀವ ಶರೀರವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾನ ಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ.

  Veteran actress B.V Radha passes away Kalyan Nagar

  ಡಾ. ರಾಜ್ ಕುಮಾರ್ ಅವರ ನವಕೋಟಿ ನಾರಾಯಣ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಬಿ. ವಿ ರಾಧಾ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ತುಳು ಹಾಗೂ ಹಿಂದಿ ಭಾಷೆ ಚಿತ್ರಗಳಲ್ಲಿ ನಟಿಸಿದ್ದರು. 250 ಕನ್ನಡ ಚಿತ್ರಗಳು ಸೇರಿದಂತೆ 300ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.

  ನಟವೃಂದ ನಾಟಕ ತಂಡದ ಮೂಲಕ ರಂಗಭೂಮಿಯ ನಂಟನ್ನು ಹೊಂದಿದ್ದರು. ನಿರ್ದೇಶಕ ಕೆಎಸ್ಎಲ್ ರವಿ (ರಾಧಾ ರವಿ) ಅವರನ್ನು ಪ್ರೇಮಿಸಿ ವಿವಾಹವಾಗಿದ್ದರು. 1964ರಲ್ಲಿ ಚಿತ್ರರಂಗ ಪ್ರವೇಶಿಸಿದ ರಾಧಾ ಅವರು ಬೋಲ್ಡ್ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು.

  ಆಗಿನ ಕಾಲದ ಸೂಪರ್ ಸ್ಟಾರ್ ಗಳಾದ ಡಾ. ರಾಜ್ ಕುಮಾರ್, ಎಂ.ಜಿ ರಾಮಚಂದ್ರನ್, ಶಿವಾಜಿ ಗಣೇಶನ್, ಎನ್. ಟಿ ರಾಮರಾವ್, ಜೆಮಿನಿ ಗಣೇಶನ್, ಅಕ್ಕಿನೇನಿ ನಾಗೇಶ್ವರ್ ರಾವ್, ಜೈಶಂಕರ್ ಮುಂತಾದವರ ಜತೆ ನಟಿಸಿ ಸೈ ಎನಿಸಿಕೊಂಡಿದ್ದರು.

  ಇತ್ತೀಚೆಗೆ ಹಿರಿಯ ನಟ ಆರ್ ಸುದರ್ಶನ್ ಅವರ ಅಗಲಿಕೆಯ ನೋವಿನಲ್ಲಿರುವ ಕನ್ನಡ ಸಿನಿಮಾ ರಂಗ ಹಾಗೂ ಅಭಿಮಾನಿಗಳಿಗೆ ಈಗ ಮತ್ತೊಮ್ಮೆ ಆಘಾತವಾಗಿದೆ.

  English summary
  Veteran actress B.V Radha passed away in the wee hours on Sunday(Sep 10) at a private hospital in Kalyan Nagar, Bengaluru. She was 70.
  Sunday, September 10, 2017, 7:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X