»   » ಹಿರಿಯ ನಟಿ ಲೀಲಾವತಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಹಿರಿಯ ನಟಿ ಲೀಲಾವತಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಇಂದು ಬೆಳಗ್ಗೆ ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇಂದು (ಫೆಬ್ರವರಿ 10) ಬೆಳಗ್ಗೆ ಮಾತ್ರೆ ಸೇವಿಸಿದ ನಂತರ ಅಸ್ವಸ್ಥರಾದ ಹಿನ್ನಲೆಯಲ್ಲಿ ನಟಿ ಲೀಲಾವತಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಐ.ಸಿ.ಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.[ಹಿರಿಯ ನಟಿ ಲೀಲಾವತಿ ಕಣ್ಣೀರೊರೆಸುವವರು ಯಾರೂ ಇಲ್ವೇ?]

ಅಷ್ಟಕ್ಕೂ ಏನಾಗಿತ್ತು?, ಅಂದರೆ ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ನಟಿ ಲೀಲಾವತಿ ಅವರು ತಮ್ಮ ಪುತ್ರ ನಟ ವಿನೋದ್ ರಾಜ್ ಜೊತೆ ನೆಲೆಸಿದ್ದು, ಈ ಎರಡು ದಿನಗಳ ಹಿಂದೆ ಮನೆಯಲ್ಲಿಯೇ ಸಾಕು ನಾಯಿ ಅವರನ್ನು ಎಳೆದಿತ್ತು. ಆ ಸಂದರ್ಭದಲ್ಲಿ ನಟಿ ಲೀಲಾವತಿ ಅವರು ಆಯತಪ್ಪಿ ಕೆಳಗೆ ಬಿದ್ದಿದ್ದರು.[ಗಾಂಧಿನಗರದ ಅಚ್ಚರಿ.! ಲೀಲಾವತಿ ಮನೆಯಲ್ಲಿ ಶಿವರಾಜ್ ಕುಮಾರ್]

Veteran Actress Leelavathi Hospitalised due to ill Health

ಬಿದ್ದು ಮೈಕೈ ನೋವು ಮಾಡಿಕೊಂಡಿದ್ದ ನಟಿ ಈ ನೋವು ಕಡಿಮೆಯಾಗಲು ಮನೆಯಲ್ಲಿಯೇ ನೋವಿನ ಮಾತ್ರೆ ಸೇವಿಸುತ್ತಿದ್ದರು. ಆದರೆ ಈ ಮಾತ್ರೆ ಸೇವನೆಯಿಂದ ಇಂದು ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.[ಲೀಲಾವತಿ ಚಿತ್ರರಂಗದಿಂದ ದೂರವಾದದ್ದು ಯಾಕೆ?]

ಈಗಾಗಲೇ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಲೀಲಾವತಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇಂದು ಸಂಜೆವರೆಗೂ ತುರ್ತು ನಿಗಾ ಘಟಕದಲ್ಲಿ ಇರಬೇಕು ಎಂದು ವೈದ್ಯರು ಸೂಚಿಸಿದ್ದು, ತಾಯಿ ಆರೋಗ್ಯವಾಗಿದ್ದಾರೆ ಎಂದು ನಟ ವಿನೋದ್ ರಾಜ್ ತಿಳಿಸಿದ್ದಾರೆ. (ಚಿತ್ರಕೃಪೆ: ಪಬ್ಲಿಕ್ ಟಿವಿ)

English summary
Sandalwood Veteran Actress Leelavathi Hospitalised Today (February 10) due to ill Health.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada